ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಮುಖ್ಯಸ್ಥರು ಬಂದ ಒಂದೇ ವಾರದಲ್ಲಿ 86 ಪೊಲೀಸರ ವರ್ಗಾವಣೆ

|
Google Oneindia Kannada News

ಮುಂಬೈ, ಮಾರ್ಚ್ 24: ಮುಂಬೈ ಪೊಲೀಸ್ ಆಯುಕ್ತರಾಗಿ ಪರಮ್ ಬೀರ್ ಸಿಂಗ್ ಅವರ ಸ್ಥಾನಕ್ಕೆ ಹೇಮಂತ್ ನಗ್ರಲೆ ಅವರು ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ 86 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅನಿಲ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಬಂಧಿತರಾಗಿರುವ ಸಚಿನ್ ವಾಜೆ ಅವರ ಆಪ್ತ ಹಾಗೂ ಎನ್‌ಐಎಯಿಂದ ಇತ್ತೀಚೆಗೆ ವಿಚಾರಣೆಗೆ ಒಳಪಟ್ಟಿದ್ದ ಅಧಿಕಾರಿ ಕೂಡ ಇವರಲ್ಲಿ ಸೇರಿದ್ದಾರೆ.

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಭೇಟಿ ಮಾಡಿದ ಬಳಿಕ ಮಂಗಳವಾರ ಸಂಜೆ ಈ ವರ್ಗಾವಣೆ ಆದೇಶ ಹೊರಡಿಸಲಾಗಿದೆ. ವರ್ಗಾವಣೆಗೊಂಡಿರುವ ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಅನಿಲ್ ದೇಶ್‌ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಬಳಿಕ ಈ ಇಬ್ಬರೂ ನಾಯಕರು ಇದೇ ಮೊದಲ ಬಾರಿ ಭೇಟಿಯಾಗಿದ್ದಾರೆ.

ಅನಿಲ್ ದೇಶ್‌ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ: ಪರಮ್‌ಬೀರ್ ಸಿಂಗ್‌ಗೆ ಹಿನ್ನಡೆಅನಿಲ್ ದೇಶ್‌ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ: ಪರಮ್‌ಬೀರ್ ಸಿಂಗ್‌ಗೆ ಹಿನ್ನಡೆ

ಅಪರಾಧ ಗುಪ್ತಚರ ಘಟಕದಲ್ಲಿ ಸಚಿನ್ ವಾಜೆಯ ಸಹೋದ್ಯೋಗಿಯಾಗಿದ್ದ ಸಹಾಯಕ ಇನ್‌ಸ್ಪೆಕ್ಟರ್ ರಿಯಾಜುದ್ದೀನ್ ಕಾಜಿಯನ್ನು ಸಿಐಯುಗಿಂತ ಕೆಳ ಹಂತದ ಸ್ಥಳೀಯ ಶಸ್ತ್ರಾಸ್ತ್ರ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಎನ್‌ಐಎ ವಿಚಾರಣೆಗೆ ಒಳಪಟ್ಟಿದ್ದ ಮತ್ತೊಬ್ಬ ಅಧಿಕಾರಿ ಪ್ರಕಾಶ್ ಹೋವಲ್ ಅವರನ್ನು ಮಲಾಬಾರ್ ಹಿಲ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

Days After Mumbai New Police Commissioner Hemant Nagrale Takeover, 86 Cops Transferred

ಮುಂಬೈ ಅಪರಾಧ ದಳದ 65 ಅಧಿಕಾರಿಗಳನ್ನು ಬದಲಿಸಲಾಗಿದೆ. ಅವರಲ್ಲಿ ಕೆಲವರು ಪ್ರಮುಖ ಪ್ರಕರಣಗಳ ತನಿಖೆಯಲ್ಲಿ ಪಾಲ್ಗೊಂಡಿದ್ದರು. ಕೆಲವು ಅಧಿಕಾರಿಗಳನ್ನು ಸಂಚಾರ ಪೊಲೀಸ್ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇನ್ನು ಕೆಲವರನ್ನು ವಿವಿಧ ಜಿಲ್ಲೆಗಳ ಠಾಣೆಗಳಿಗೆ ಕಳುಹಿಸಲಾಗಿದೆ.

English summary
Days after Mumbai new Police Commissioner Hemant Nagrale takeover the charge from Param Bir Singh, 86 cops are transferred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X