ದಿನಕ್ಕೆ 300 ಸಂಪಾದಿಸುವನಿಗೆ ಒಂದು ಕೋಟಿ ದಂಡ ಹಾಕಿದ ಐಟಿ ಇಲಾಖೆ

ಮುಂಬೈ, ಜನವರಿ 17: ದಿನಗೂಲಿ ಮಾಡಿ ಸಂಸಾರ ಸಾಗಿಸುತ್ತಿರುವ ವ್ಯಕ್ತಿಗೆ ಆದಾಯ ತೆರಿಗೆ ಇಲಾಖೆ ನೊಟೀಸ್ ಕಳಿಸಿದ್ದ ಬರೋಬ್ಬರಿ 1.05 ಕೋಟಿ ದಂಡ ಕಟ್ಟುವಂತೆ ಸೂಚಿಸಿದ್ದಾರೆ.

ಮಹಾರಾಷ್ಟ್ರದ ಬುವಾಸಾಹೇಬ್ ಅಹಿರೆ ದಿನಗೂಲಿ ನೌಕರ, ಥಾಣೆಯ ಸ್ಲಂ ಒಂದರಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಿದ್ದಾರೆ. ಆತನ ದಿನದ ಕೂಲಿ 300 ರೂಪಾಯಿ ಆದರೆ ಆತ ತೆರಿಗೆ ವಂಚಿಸಿದ್ದಾನೆಂದು ಐಟಿ ಇಲಾಖೆಯು ದಂಡದ ರೂಪದಲ್ಲಿ 1.05 ಕೋಟಿ ದಂಡ ಪಾವತಿಸುವಂತೆ ನೊಟೀಸ್ ನೀಡಿದೆ.

ನೋಟು ರದ್ಧತಿ ಸಮಯದಲ್ಲಿ ಅಹಿರೆ ಖಾತೆಯಲ್ಲಿ 58 ಲಕ್ಷ ಜಮೆ ಆಗಿದೆ ಎಂದು ನೊಟೀಸ್‌ನಲ್ಲಿ ತಿಳಿಸಿರುವ ಐಟಿ, ತೆರಿಗೆ ವಂಚನೆ ಮಾಡಿದ್ದು ತೆರಿಗೆ ಮತ್ತು ದಂಡ ಸೇರಿಸಿ 1.05 ಕೋಟಿ ದಂಡ ಮೊತ್ತ ಪಾವತಿಸುವಂತೆ ಕಳೆದ ಸೆಪ್ಟೆಂಬರ್‌ ನಲ್ಲಿಯೇ ನೊಟೀಸ್ ಜಾರಿ ಮಾಡಿದೆ.

Daily Wage Employee Get 1.05 Crore Notice From IT Department

ಅನಕ್ಷರಸ್ಥನಾದ ಅಹಿರೆ ಐಟಿ ನೊಟೀಸ್ ಅನ್ನು ಯಾವುದೋ ಸಾಮಾನ್ಯ ನೊಟೀಸೆಂದು ನಿರ್ಲಕ್ಷಿಸಿದ್ದಾರೆ. ನಂತರ ಡಿಸೆಂಬರ್‌ ನಲ್ಲಿ ಅದೇ ನೊಟೀಸ್ ಮತ್ತೆ ಬಂದಿದೆ. ಆಗ ಕೆಲವರನ್ನು ನೊಟೀಸ್ ಬಗ್ಗೆ ಕೇಳಿದಾಗ, ಅಹಿರೆ 1.05 ಕೋಟಿ ಹಣ ಕಟ್ಟಬೇಕಿರುವ ವಿಷಯ ಗೊತ್ತಾಗಿದೆ.

ಗಾಬರಿಯಾದ ಅಹಿರೆ ಬ್ಯಾಂಕ್‌ ಗೆ ಹೋಗಿ ವಿಚಾರಿಸಿದಾಗ ಗೊತ್ತಾಗಿದ್ದು, ಅಹಿರೆ ಹೆಸರಲ್ಲಿ ಆತನ ಪ್ಯಾನ್ ಸಂಖ್ಯೆ ಬಳಸಿ ಬೇರೊಬ್ಬರು ಖಾತೆ ತೆರೆದಿದ್ದಾರೆ. ಖಾತೆ ತೆರೆಯಲು ನೀಡಿರುವ ಎಲ್ಲ ದಾಖಲೆಗಳು ಅಹಿರೆಯವೇ ಆದರೆ ಚಿತ್ರ ಮಾತ್ರ ಬೇರೆಯದ್ದು ನೀಡಲಾಗಿದೆ. ಆ ಫೇಕ್ ಖಾತೆಗೆ ಲಕ್ಷಾಂತರ ಹಣ ಡೆಪಾಸಿಟ್ ಮಾಡಲಾಗಿದೆ.

ತನ್ನ ಹೆಸರಲ್ಲಿ ನಕಲಿ ಖಾತೆ ತೆರೆದು ಕೋಟ್ಯಂತರ ವ್ಯವಹಾರ ಮಾಡಿರುವುದು ಗೊತ್ತಾಗುತ್ತಿದ್ದಂತೆ ಅಹಿರೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+