ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್‌ ಪ್ರಕರಣ: ಆರ್ಯನ್ ಖಾನ್‌ಗೆ ಅಕ್ಟೋಬರ್ 7ರವರೆಗೂ ಎನ್‌ಸಿಬಿ ಕಸ್ಟಡಿ

|
Google Oneindia Kannada News

ಮುಂಬೈ, ಅಕ್ಟೋಬರ್ 04: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಅಕ್ಟೋಬರ್ 7ರವರೆಗೂ ಎನ್‌ಸಿಬಿ ಕಸ್ಟಡಿಗೆ ನೀಡಲಾಗಿದೆ.

ಮುಂಬೈನ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದ ಆರ್ಯನ್ ಖಾನ್‌ ಸೇರಿದಂತೆ 8ಕ್ಕೂ ಅಧಿಕ ಮಂದಿಯನ್ನ ಕಳೆದ ಶನಿವಾರ ಎನ್‌ಸಿಬಿ ಬಂಧಿಸಿತ್ತು. ಇದೀಗ ಮುಂಬೈನ ಕಿಲ್ಲಾ ಕೋರ್ಟ್‌ಗೆ ಆರ್ಯನ್ ಖಾನ್ ಮತ್ತು ಇತರೆ ಆರೋಪಿಗಳನ್ನು ಹಾಜರು ಪಡಿಸಲಾಗಿದೆ. ಆರ್ಯನ್ ಖಾನ್‌ರನ್ನ ಅಕ್ಟೋಬರ್ 11ರವರೆಗೂ ಎನ್‌ಸಿಬಿ ಕಸ್ಟಡಿಗೆ ಕೇಳಿತ್ತು. ಇದೀಗ ಅಕ್ಟೋಬರ್ 07ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿ ಮುಂಬೈ ಹೈಕೋರ್ಟ್ ಆದೇಶಿಸಿದೆ.

ಮುಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತು ಎಂಬ ಖಚಿತ ಮಾಹಿತಿಯ ಮೇರೆಗೆ ಶನಿವಾರ (ಅಕ್ಟೋಬರ್ 2) ರಾತ್ರಿ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಬಾಲಿವುಡ್‌ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ 8ಕ್ಕೂ ಹೆಚ್ಚು ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಐಷಾರಾಮಿ ಹಡಗಿನಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದ್ದವು. ಹಡಗಿನಲ್ಲಿ ನಡೆಯುವ ರೇವ್ ಪಾರ್ಟಿಗೆ ಬರುವುದಕ್ಕೆ ತಲಾ 80 ಸಾವಿರ ರೂಪಾಯಿ ಶುಲ್ಕ ನಿಗದಿ ಮಾಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿತ್ತು.

Mumbai Cruise Drug Case Aryan Khan, Others To Be In NCB Custody Till October 7

ಶನಿವಾರ ರಾತ್ರಿ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ ಸೇರಿದಂತೆ 8ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದ ಬಳಿಕ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಎನ್‌ಸಿಬಿ ಹಾಜರುಪಡಿಸಿತ್ತು.

ಅಕ್ಟೋಬರ್ 3 ರಂದು (ಭಾನುವಾರ) ಒಂದು ದಿನದ ಮಟ್ಟಿಗೆ ಆರ್ಯನ್ ಖಾನ್‌ರನ್ನು ಎನ್‌ಸಿಬಿ ವಶಕ್ಕೆ ಕೋರ್ಟ್ ನೀಡಿತ್ತು. ಇಂದಿಗೆ ಆ ಅವಧಿ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ, ಇವತ್ತು ಪುನಃ ನ್ಯಾಯಾಧೀಶರ ಮುಂದೆ ಆರ್ಯನ್ ಖಾನ್‌ರನ್ನ ಹಾಜರುಪಡಿಸಲಾಯಿತು.
ಎನ್‌ಸಿಬಿ ಪರ ಎಎಸ್‌ಜಿ ಅನಿಲ್‌ಸಿಂಗ್‌ ವಾದ ಮಂಡನೆ ಮಾಡಿದರು. 'ಶಿಪ್‌ ಮೇಲೆ ದಾಳಿ ಮಾಡಿದಾಗ ಮಾದಕ ವಸ್ತು ಜಪ್ತಿ ಮಾಡಿದ್ದೇವೆ.

ಡ್ರಗ್ಸ್ ಪೆಡ್ಲರ್ ಜೊತೆ ಚಾಟ್‌ ಮಾಡಿರುವ ವಿವರ ಸಿಕ್ಕಿದೆ. ಡ್ರಗ್ಸ್‌ ಲಿಂಕ್‌ ಬಹಿರಂಗಗೊಳಿಸಲು ಕಸ್ಟಡಿಗೆ ನೀಡಬೇಕು. ಅಂತಾರಾಷ್ಟ್ರೀಯ ಡ್ರಗ್ಸ್‌ ವ್ಯವಹಾರ ಬಗ್ಗೆಯೂ ಕಣ್ಣಿಟ್ಟಿದ್ದೇವೆ. ಅಂತಾರಾಷ್ಟ್ರೀಯ ಡ್ರಗ್ಸ್‌ ವ್ಯವಹಾರವೂ ನಡೆದಿರುವ ಶಂಕೆ ಇದೆ. ಇನ್ನೂ ಕೆಲವು ಆರೋಪಿಗಳ ಗುರುತು ಪತ್ತೆ ಹಚ್ಚಬೇಕಿದೆ. ವಾಟ್ಸ್​​ಆ್ಯಪ್​​ನಲ್ಲಿ ಕೋಡ್‌ ಪದಗಳನ್ನು ಬಳಸಿ ಚಾಟಿಂಗ್ ಮಾಡಲಾಗಿದೆ. ಮೊಬೈಲ್​ನಲ್ಲಿ ಹಣ ವರ್ಗಾವಣೆ ಮಾಹಿತಿ ಕೂಡ ಸಿಕ್ಕಿದೆ' ಎಂದರು ಅನಿಲ್‌ಸಿಂಗ್‌.

ಶನಿವಾರ ರಾತ್ರಿ ದಾಳಿಯ ವೇಳೆ ಕ್ರೂಸ್‌ ಶಿಪ್‌ನಲ್ಲಿಇತರ ನಟರೂ ಇದ್ದರೆಂದು ತಿಳಿದುಬಂದಿದೆ. ಆದರೆ ಅವರ ಬಳಿ ಯಾವುದೇ ಮಾದಕ ವಸ್ತು ಪತ್ತೆಯಾಗದ ಕಾರಣ ಅವರನ್ನು ವಶಕ್ಕೆ ಪಡೆದಿಲ್ಲ. ಆದರೆ ಅವರ ಹೆಸರನ್ನು ಗೌಪ್ಯವಾಗಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಾರ್ಟಿ ಆಯೋಜಿಸಿದ್ದ ಕಾಡೇಲಿಯಾ ಹಡಗು ಶನಿವಾರ ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಮುಂಬಯಿ ತೀರದಿಂದ ಸಮುದ್ರಯಾನ ಆರಂಭಿಸಿತ್ತು. ಮೂರು ದಿನಗಳ ಪ್ರವಾಸದ ಬಳಿಕ ಅ.4ರಂದು ರಾತ್ರಿ ಮುಂಬಯಿಗೆ ಮರಳಲು ಯೋಜಿಸಲಾಗಿತ್ತು

ಆದರೆ, ಆರ್ಯನ್​ ಪರ ವಕೀಲ ಸತೀಶ್​ ಮಾನೇಶಿಂದೆ ಇದನ್ನು ಅಲ್ಲಗಳೆದಿದ್ದಾರೆ. 'ಆರ್ಯನ್​ ಅಲ್ಲಿ ಅತಿಥಿ ಆಗಿದ್ದರು. ಹೀಗಾಗಿ, ಅವರಿಗೆ ಟಿಕೆಟ್​ ಇರಲಿಲ್ಲ. ಬೋರ್ಡಿಂಗ್​ ಪಾಸ್​ ಕೂಡ ಇರಲಿಲ್ಲ. ಅವರ ಬ್ಯಾಗ್​ ಶೋಧ ಮಾಡಿದಾಗ ಅದರಲ್ಲಿ ಏನು ಪತ್ತೆ ಆಗಿಲ್ಲ' ಎಂದು ಸತೀಶ್​ ಮಾನೇಶಿಂದೆ ನ್ಯಾಯಾಲಯಕ್ಕೆ ತಿಳಿಸಿದರು.

ಆರ್ಯನ್​ ಮೊಬೈಲ್​ನಲ್ಲಿ ಸಿಕ್ಕ ಪ್ರಮುಖ ಮಾಹಿತಿ ಹಾಗೂ ವಾಟ್ಸ್ಆ್ಯಪ್​ ​ಚಾಟ್​ಗಳನ್ನು ಇಟ್ಟುಕೊಂಡು ಎನ್​ಸಿಬಿ ಪರ ವಕೀಲರು ವಾದ ಮಂಡಿಸಿದ್ದರು. ಈ ಎಲ್ಲಾ ಸಾಕ್ಷ್ಯಗಳು ಆರ್ಯನ್​ ವಿರುದ್ಧವಾಗಿಯೇ ಇದ್ದವು. ಹೀಗಾಗಿ, ಕೋರ್ಟ್​ ಹೆಚ್ಚಿನ ವಿಚಾರಣೆಗೆ ಎನ್​ಸಿಬಿಗೆ ಅವಕಾಶ ನೀಡಿದೆ.

ಕ್ರೂಸ್‌ಶಿಪ್‌ನಲ್ಲಿಮಾದಕ ವಸ್ತು ಪತ್ತೆಯಾಗಿದ್ದು, 13 ಗ್ರಾಮ್‌ ಕೊಕೇನ್‌, 6 ಗ್ರಾಮ್‌ ಎಂಡಿ, 21 ಗ್ರಾಮ್‌ ಚರಸ್‌ ಹಾಗೂ 1,33,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
-15 ದಿನಗಳ ಮುನ್ನವೇ ನಡೆದಿತ್ತು ರೇವ್‌ ಪಾರ್ಟಿ ಬಗ್ಗೆ ಸುಳಿವು ಪಡೆದಿದ್ದ ಎನ್‌ಸಿಬಿ
-ಡ್ರಗ್ಸ್‌ ಸೇವನೆ ಮಾಡುವ ಅತಿಥಿಗಳ ಸೋಗಿನಲ್ಲಿ ಕ್ರೂಸ್‌ ಹಡಗು ಏರಿದ್ದ ಎನ್‌ಸಿಬಿ ಸಿಬ್ಬಂದಿ
-ರೇವ್‌ ಪಾರ್ಟಿ ಬಗ್ಗೆ ಸುಳಿವಿದ್ದರೂ, ಅದರಲ್ಲಿ ಭಾಗಿಯಾಗುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ
-ದಾಳಿ ವೇಳೆ ಸೆಲೆಬ್ರಿಟಿಗಳು, ಅವರ ಸಂಬಂಧಿಕರನ್ನು ಕಂಡು ಶಾಕ್‌ ಆದ ಅಧಿಕಾರಿಗಳು
-ರೇವ್‌ ಪಾರ್ಟಿಗೂ ನಮಗೂ ಸಂಬಂಧ ಇಲ್ಲವೆಂದ ಕಾರ್ಡಿಲಿಯಾ ಕ್ರೂಸ್‌ ಶಿಪ್‌ ಮಾಲೀಕ
.

English summary
The Mumbai court has granted NCB custody of Aryan Khan, Arbaz Merchant, and Munmun Dhamecha till October 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X