ಆಸ್ಟ್ರೇಲಿಯಾ ಪ್ರವಾಸ: ಇಂಡಿಯಾ 'ಎ' ಗೆ ಉತ್ತಪ್ಪ ನಾಯಕ

ಮುಂಬೈ, ಜೂ.11: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಇಂಡಿಯಾ 'ಎ' ಕ್ರಿಕೆಟ್ ತಂಡವನ್ನು ಬುಧವಾರ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ಮನೋಜ್ ತಿವಾರಿ ಅವರು ನಾಲ್ಕು ದಿನಗಳ ಪಂದ್ಯಕ್ಕೆ ನಾಯಕರಾಗಿದ್ದರೆ, ಉತ್ತಪ್ಪ ಏಕದಿನ ಪಂದ್ಯಕ್ಕೆ ಕ್ಯಾಪ್ಟನ್ ಆಗಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ 7 ಹಾಗೂ ದೇಶಿ ಕ್ರಿಕೆಟ್ ನಲ್ಲಿ ತೋರಿಸಿರುವ ಸಾಧನೆಯನ್ನು ಪರಿಗಣಿಸಿ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆಯನ್ನು ಬಿಸಿಸಿಐ ಆಯ್ಕೆಯಾದರು ಕೊಟ್ಟಿದ್ದಾರೆ.

ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಭಾರತ ಎ ತಂಡ ಎರಡು ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದೆ. ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ, ಭಾರತ, ದಕ್ಷಿಣ ಆಫ್ರಿಕಾ 'ಎ' ತಂಡಗಳ ಜತೆ ಆಸ್ಟ್ರೇಲಿಯಾ ಕ್ರಿಕೆಟ್ ಅಕಾಡೆಮಿಯ ಎನ್ ಪಿಎಸ್ ತಂಡಗಳು ಸೆಣಸಾಡಲಿವೆ. ಭಾರತದ ಆಸ್ಟ್ರೇಲಿಯಾ ಪ್ರವಾಸ ಜುಲೈ 6 ರಿಂದ ಆಗಸ್ಟ್ 2 ರ ತನಕ ನಡೆಯಲಿದೆ.

Uthappa, Tiwary named India A captains for Australia tour

ಭಾರತ ಎ ತಂಡಗಳು:
ನಾಲ್ಕು ದಿನ ಪಂದ್ಯಕ್ಕೆ : ಮನೋಜ್ ತಿವಾರಿ(ನಾಯಕ), ಕೆಎಲ್ ರಾಹುಲ್, ಜೀವಜೋತ್ ಸಿಂಗ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಅಭಿಶೇಕ್ ನಾಯರ್, ನಮನ್ ಓಜಾ, ಪ್ರಗ್ನಾನ್ ಓಜಾ, ಉಮೇಶ್ ಯಾದವ್, ಧವಳ್ ಕುಲಕರ್ಣಿ, ಅನುರೀತ್ ಸಿಂಗ್, ಪಾಲಿವಾಲ್, ಅಮಿತ್ ಮಿಶ್ರಾ, ಸಂದೀಪ್ ಸಿಂಗ್, ಜಸ್ ಪ್ರೀತ್ ಬೂಮ್ರಾ, ಬಾಬಾ ಅಪರಾಜಿತ್

ಏಕದಿನ ತಂಡ: ರಾಬಿನ್ ಉತ್ತಪ್ಪ(ನಾಯಕ), ಉನ್ಮುಕ್ತ್ ಚಂದ್, ಮನೀಶ್ ಪಾಂಡೆ, ಅಂಬಟಿ ರಾಯುಡು, ಮನೋಜ್ ತಿವಾರಿ, ಕೇದಾರ್ ಜಾಧವ್, ಸಂಜು ಸಾಮ್ಸನ್, ಪರ್ವೇಜ್ ರಸೂಲ್, ಅಕ್ಷರ್ ಪಟೇಲ್, ಧವಳ್ ಕುಲಕರ್ಣಿ, ರಿಷಿ ಧವನ್, ಮೋಹಿತ್ ಶರ್ಮ, ಕರಣ್ ಶರ್ಮ, ರಾಹುಲ್ ಶುಕ್ಲಾ, ಮನನ್ ವೋಹ್ರಾ, ಜಯದೇವ್ ಉನದ್ಕತ್

ವೇಳಾಪಟ್ಟಿ:
* ಜುಲೈ 6-9 vs ಆಸ್ಟ್ರೇಲಿಯಾ ಎ, ಅಲಾನ್ ಬಾರ್ಡರ್ ಫೀಲ್ಡ್, ಕ್ವೀನ್ಸ್ ಲ್ಯಾಂಡ್
* ಜುಲೈ 13-16 vs ಆಸ್ಟ್ರೇಲಿಯಾ ಎ, ಅಲಾನ್ ಬಾರ್ಡರ್ ಫೀಲ್ಡ್, ಕ್ವೀನ್ಸ್ ಲ್ಯಾಂಡ್
* ಜುಲೈ 20-ಆಗಸ್ಟ್ 2: ಏಕದಿನ ಸರಣಿ Marrara Oval and Gardens Oval

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+