ಮಹಾರಾಷ್ಟ್ರ ಸಿಎಂ ಉದ್ಧವ್ ಮನೆ ಬಾಗಿಲಿಗೆ ಬಂದ ಕೊರೊನಾ

ಮುಂಬೈ, ಏಪ್ರಿಲ್ 6: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನೆಯ ಬಾಗಿಲಿಗೇ ಕೊರೊನಾ ಬಂದಿದೆ.

ಕೊರೊನಾ ದೇಶದ ವಿವಿಧೆಡೆ ಹರಡುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ದೇಶದ ಇತರೆ ಭಾಗಗಳಿಗಿಂತ ಹೆಚ್ಚು ಕೊರೊನಾ ಪ್ರಕರಣಗಳಿವೆ.

ಹೀಗಿರುವಾಗ ಉದ್ಧವ್ ಠಾಕ್ರೆ ಮನೆ 'ಮಾತೋಶ್ರೀ' ಎದುರಿಗೆ ಇದ್ದ ಚಹಾ ಅಂಗಡಿಯಲ್ಲಿ ಸಿಎಂ ಮನೆಯ ಸಿಬ್ಬಂದಿ ಅಲ್ಲದೆ ಅವರ ಬೆಂಗಾವಲು ಪಡೆ ಸಿಬ್ಬಂದಿ ಎಲ್ಲರೂ ಚಹಾ ಕುಡಿಯುತ್ತಿದ್ದರು. ಇದೀಗ ಆ ಅಂಗಡಿ ಮಾಲೀಕರನಿಗೆ ಕೊರೊನಾ ಬಂದಿದೆ. ಆ ಪ್ರದೇಶವನ್ನು ನಿರ್ಭಂದಿತ ಪ್ರದೇಶ ಎಂದು ಘೋಷಿಸಲಾಗಿದೆ.

Covid 19 Knocks At Thackeray’s Doorstep

ಚಹಾ ಅಂಗಡಿ ಮಾಲೀಕ ಕೆಲವು ದಿನಗಳಿಂದ ಶೀತ, ಕೆಮ್ಮು, ಕಫದಿಂದ ಬಳಲುತ್ತಿದ್ದರು. ಇದು ಕೊರೊನಾ ಸೋಂಕು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಅವರನ್ನು ಮುನ್ಸಿಪಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಕ್ತ ಹಾಗೂ ಕಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸಿಎಂ ಮನೆಯಿಂದ ಚಹಾ ಅಂಗಡಿಗೆ ಹೋಗಿ ಬಂದವರ ಬಗ್ಗೆ ಮಾಹಿತಿ ಪಡೆದು ಅವರನ್ನು ಚಿಕಿತ್ಸೆಗೊಳಪಡಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+