• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್ - 19 ಸೋಂಕಿತರ ಸಾವು; ದಾಖಲೆ ಬರೆದ ಮಹಾರಾಷ್ಟ್ರ

|

ಮುಂಬೈ, ಮೇ 29 : ಭಾರತದಲ್ಲಿಯೇ ಕೊರೊನಾ ವೈರಸ್ ಸೋಂಕಿತರು ಹೆಚ್ಚು ಇರುವ ರಾಜ್ಯ ಮಹಾರಾಷ್ಟ್ರ. ರಾಜ್ಯದಲ್ಲಿ ಒಂದೇ ದಿನ 116 ಕೊರೊನಾ ವೈರಸ್ ಸೋಂಕಿತರು ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಇಷ್ಟು ಜನರು ಮೃತಪಟ್ಟಿರುವುದು ಇದೇ ಮೊದಲು.

   ಸದ್ಯದಲ್ಲೇ ಭಾರತದಲ್ಲಿ ತಯಾರಾಗಿದೆ ಕೋವಿಡ್ ಲಸಿಕೆ | Oneindia Kannada

   ಶುಕ್ರವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 2,682 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. 116 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕು ಹರಡದಂತೆ ತಡೆಯಲು ಹರಸಾಹಸ ಪಡಲಾಗುತ್ತಿದೆ.

   Fact Check: ಮುಂಬೈ, ಪುಣೆಯಲ್ಲಿ ಮಿಲಿಟರಿ ಲಾಕ್‌ಡೌನ್‌ ಜಾರಿ?

   ಮಹಾರಾಷ್ಟ್ರದ ಆರೋಗ್ಯ ಇಲಾಖೆ ಮಾಹಿತಿಯಂತೆ ರಾಜ್ಯದಲ್ಲಿ ವೈರಸ್ ಸೋಂಕಿತರ ಸಂಖ್ಯೆ 62,228ಕ್ಕೆ ಏರಿಕೆಯಾಗಿದೆ. ಇದುವರೆಗೂ 2098 ಜನರು ಮೃತಪಟ್ಟಿದ್ದಾರೆ.

   ಮಹಾರಾಷ್ಟ್ರ ಹಾಟ್ ಸ್ಪಾಟ್, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

   ಮುಂಬೈ ಆತಂಕ : ಮಹಾರಾಷ್ಟ್ರದಲ್ಲಿ ಮುಂಬೈ ನಗರ ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಇರುವ ನಗರ ಮುಂಬೈ.

   ಕೊರೊನಾ ವಿರುದ್ಧ ಹೋರಾಟ; ಕರ್ನಾಟಕಕ್ಕೆ ಸಂಕಟ ತಂದ ಮಹಾರಾಷ್ಟ್ರ

   ಮುಂಬೈ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36,932. ಇದುವರೆಗೂ ಮೃತಪಟ್ಟವರ ಸಂಖ್ಯೆ 1,173. ಶುಕ್ರವಾರ ಒಂದೇ ದಿನ 1447 ಹೊಸ ಪ್ರಕರಣ ದಾಖಲಾಗಿದ್ದು, 38 ಜನರು ಮೃತಪಟ್ಟಿದ್ದಾರೆ.

   ಮಹಾರಾಷ್ಟ್ರ ಸೋಂಕು ಬೇರೆ ರಾಜ್ಯಗಳಿಗೂ ಹಬ್ಬುತ್ತಿದೆ. ರಾಜ್ಯದ ವಿವಿಧ ನಗರಗಳಿಂದ ಬೇರೆ ರಾಜ್ಯಗಳಿಗೆ ವಾಪಸ್ ಆಗಿರುವ ಜನರಿಗೆ ಸೋಂಕು ತಗುಲಿದ್ದು, ಬೇರೆ ರಾಜ್ಯಗಳು ಆತಂಕಗೊಂಡಿವೆ.

   English summary
   On May 29, 2020 Maharashtra records 116 deaths due to Coronavirus. This is the highest number of deaths in a single day. Total case in state 62,228 and Death toll stands at 2098.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X