ಮಹಾರಾಷ್ಟ್ರದಲ್ಲಿ ಮತ್ತೆ 5 ಕೊರೊನಾ ವೈರಸ್ ಪ್ರಕರಣಗಳು ಪತ್ತೆ
ಮುಂಬೈ, ಮಾರ್ಚ್ 16: ಮಹಾರಾಷ್ಟ್ರದಲ್ಲಿ ಸೋಮವಾರ ಐದು ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ವರದಿಯಾಗಿದೆ.
ರಾಜ್ಯದಲ್ಲಿ ಈವರೆಗೆ COVID-19 ಪ್ರಕರಣಗಳನ್ನು 38ಕ್ಕೆ ಏರಿದೆ.
ಈ ದಿನವೇ ಮಹಾರಾಷ್ಟ್ರದಲ್ಲಿ ನಾಲ್ಕು ಹೊಸ ಪ್ರಕರಣಗಳನ್ನು ವರದಿ ಮಾಡಲಾಗಿತ್ತು. ನಾಲ್ಕು ಪ್ರಕರಣಗಳಲ್ಲಿ ಮೂರು ಪ್ರಕರಣಗಳು ಮುಂಬೈನಿಂದ ಮತ್ತು ಒಂದು ನವಿ ಮುಂಬೈನಿಂದ ವರದಿಯಾಗಿದೆ ಈ ಬಗ್ಗೆ ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈಗಾಗಲೇ ಮಹಾರಾಷ್ಟ್ರದಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆರೋಗ್ಯ ಸಚಿವ ರಾಜೇಶ್ ಟೋಪೆ ರಾಜ್ಯಾದಂತ್ಯ ಎಲ್ಲ ಶಾಪಿಂಗ್ ಮಾಲ್ ಗಳನ್ನು ಮುಚ್ಚುವಂತೆ ಶನಿವಾರ ಆದೇಶ ನೀಡಿದ್ದಾರೆ. ಈ ತಿಂಗಳಿನ ಅಂತ್ಯದವರೆಗೆ ಇದೇ ನಿಯಮ ಪಾಲಿಸುವಂತೆ ತಿಳಿಸಲಾಗಿದೆ.

ಭಾರತದಲ್ಲಿ ಈವರೆಗೆ 110 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾನುವಾರ ತಿಳಿಸಿದೆ. ಭಾರತದ ಇಬ್ಬರು ವ್ಯಕ್ತಿಗಳು ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ.












Click it and Unblock the Notifications