ಮಹಾರಾಷ್ಟ್ರದಲ್ಲಿ 11,000 ಖೈದಿಗಳ ಬಿಡುಗಡೆ: ಮಹಾ ವಿಪತ್ತು ಕಾದಿದೆ ಜೋಕೆ!

ಮುಂಬೈ, ಮಾರ್ಚ್ 27: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದೆ. ಕೋವಿಡ್-19 ನಿಂದಾಗಿ ಮಹಾರಾಷ್ಟ್ರದಲ್ಲೂ ತಲ್ಲಣ ಸೃಷ್ಟಿಯಾಗಿದ್ದು, 11 ಸಾವಿರ ಖೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಮಹಾಮಾರಿ ಕೊರೊನಾ ವೈರಸ್ ನ ತಡೆಗಟ್ಟಲು ಏಪ್ರಿಲ್ 14 ರವರೆಗೆ ಲಾಕ್ ಡೌನ್ ಆದೇಶ ಹೊರಡಿಸಲಾಗಿದೆ. ಹೀಗಾಗಿ, 7 ವರ್ಷಕ್ಕಿಂತ ಕಡಿಮೆ ಜೈಲುಶಿಕ್ಷೆಗೆ ಗುರಿಯಾಗಿರುವ ಸುಮಾರು 11 ಸಾವಿರ ಖೈದಿಗಳನ್ನು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಸೂಚಿಸಿದ್ದಾರೆ.

''ಒಂದು ವೇಳೆ 11 ಸಾವಿರ ಖೈದಿಗಳು ಬಿಡುಗಡೆ ಆದಲ್ಲಿ, ಭವಿಷ್ಯದಲ್ಲಿ ಮಹಾ ವಿಪತ್ತು ಸಂಭವಿಸಲಿದೆ. ಇದು ಲಾಜಿಕಲ್ ನಿರ್ಧಾರ ಅಲ್ಲ'' ಎಂದು ಅನಿಲ್ ದೇಶಮುಖ್ ನಿರ್ಧಾರದ ಬಗ್ಗೆ ಸಾರ್ವಜನಿಕರು ಟ್ವಿಟ್ಟರ್ ನಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ.

ಅನಿಲ್ ದೇಶಮುಖ್ ಮಾಡಿರುವ ಟ್ವೀಟ್ ಏನು.?

''ಕೋವಿಡ್-19 ತಡೆಗಟ್ಟುವ ಸಲುವಾಗಿ, ಜೈಲಿನಲ್ಲಿ ಖೈದಿಗಳ ಸಂಖ್ಯೆ ಕಡಿಮೆ ಮಾಡುವ ಸಲುವಾಗಿ, 7 ವರ್ಷ ಅಥವಾ ಅದಕ್ಕಿಂತ ಕಡಿಮೆ ಶಿಕ್ಷೆಗೆ ಗುರಿಯಾಗಿರುವವರನ್ನು ತುರ್ತು ಪೆರೋಲ್ ಮೂಲಕ ಬಿಡುಗಡೆ ಮಾಡಲು ಸೂಚಿಸಿದ್ದೇನೆ'' ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಟ್ವೀಟ್ ಮಾಡಿದ್ದಾರೆ.

ಟ್ವೀಟಿಗರ ಅಸಮಾಧಾನ

''ಇದು ಲಾಜಿಕಲ್ ನಿರ್ಧಾರ ಅಲ್ಲ. ಈ ನಿಮ್ಮ ನಿರ್ಧಾರದಿಂದ ಭವಿಷ್ಯದಲ್ಲಿ ಮಹಾ ವಿಪತ್ತು ಉಂಟಾಗಬಹುದು. ಖೈದಿಗಳು ಜೈಲಿನಲ್ಲೇ ಇರಲಿ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ'' ಎಂದು ಟ್ವೀಟಿಗರೊಬ್ಬರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಸಮಾಜಕ್ಕೆ ಸಮಸ್ಯೆ ಆಗಲ್ವಾ.?

''ಒಂದಲ್ಲಾ ಒಂದು ಕ್ರೈಂ ಮಾಡಿ ಜೈಲು ಪಾಲಾಗಿರುವವರನ್ನು ಬಿಡುಗಡೆ ಮಾಡಿದರೆ, ಸಮಾಜಕ್ಕೆ ಮತ್ತೆ ತೊಂದರೆ ಉಂಟಾಗುವುದಿಲ್ಲವೇ.? ಕೊರೊನಾ ಸೋಂಕಿತ ವ್ಯಕ್ತಿ ಜೈಲಿನ ಒಳಗೆ ಹೋಗದ ಹೊರತು ಅಲ್ಲಿನ ಎಲ್ಲಾ ಖೈದಿಗಳು ಸೇಫ್ ಆಗಿ ಇರುತ್ತಾರೆ. ಕೊರೊನಾ ನೆಪವಾಗಿದ್ದರೂ, ಬಹುಶಃ ಬಿಡುಗಡೆ ಮಾಡುತ್ತಿರುವುದರ ಹಿಂದೆ ಬೇರೆಯದ್ದೇ ಕಾರಣ ಇದೆ'' ಎಂದು ವಿಜಯ್ ಕುಮಾರ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಮತ್ತೊಮ್ಮೆ ಯೋಚಿಸಿ..

''ಸದ್ಯಕ್ಕೆ ಎಲ್ಲಾ ಖೈದಿಗಳು ಜೈಲಿನಲ್ಲೇ ಸೇಫ್ ಆಗಿದ್ದಾರೆ. ಯಾಕಂದ್ರೆ, ಅವರಿಗೆ ಹೊರಗಿನಿಂದ ಯಾವುದೇ ಹಸ್ತಕ್ಷೇಪ ಇಲ್ಲ. ಹೀಗಾಗಿ, ನಿರ್ಧಾರ ಕೈಗೊಳ್ಳುವ ಮುನ್ನ ಮತ್ತೊಮ್ಮೆ ಯೋಚಿಸಿ'' ಎಂದು ಟ್ವೀಟಿಗರೊಬ್ಬರು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+