• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಶಾಂತ್ ಸಿಂಗ್ ಆತ್ಮಹತ್ಯೆ: ಪ್ರೇಯಸಿ ರಿಯಾ ವಿರುದ್ಧ ಕೇಸ್ ದಾಖಲು

|
Google Oneindia Kannada News

ಮುಂಬೈ, ಜೂನ್ 22: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ವಿರುದ್ಧ ಕೇಸ್ ದಾಖಲಾಗಿದೆ. ಜೂನ್ 14 ರಂದು ಮುಂಬೈನ ಬಾಂದ್ರಾದ ನಿವಾಸದಲ್ಲಿ ನೇಣು ಬಿಗಿದುಕೊಂಡ ರೀತಿಯಲ್ಲಿ ಸುಶಾಂತ್ ಸಿಂಗ್ ಶವ ಪತ್ತೆಯಾಗಿತ್ತು.

   ಜನ ನಿಮ್ಮನ್ನು ನೋಡುತ್ತಿರುತ್ತಾರೆ ಹುಷಾರ್ | Manmohan Singh | Narendra Modi | Oneindia Kannada

   ಮರಣೋತ್ತರ ಪರೀಕ್ಷೆಯಲ್ಲಿ ಆತ್ಮಹತ್ಯೆ ಎಂದು ವರದಿ ಬಂದಿದೆ. ಆದರೆ, ಇದು ಪೂರ್ವ ನಿಯೋಜಿತ ಕೃತ್ಯ. ಉದ್ದೇಶಪೂರ್ವಕವಾಗಿ ಆತ್ಮಹತ್ಯೆಗೆ ಪ್ರೇರೇಪಿಸಲಾಗಿದೆ ಎಂದು ಹಲವರು ಆರೋಪಗಳನ್ನು ಮಾಡಿದರು.

   ಸುಶಾಂತ್ ಸಿಂಗ್ ಆತ್ಮಹತ್ಯೆ: ಸಲ್ಮಾನ್ ಖಾನ್ ಸೇರಿ 8 ಮಂದಿ ವಿರುದ್ಧ ಕೇಸ್ಸುಶಾಂತ್ ಸಿಂಗ್ ಆತ್ಮಹತ್ಯೆ: ಸಲ್ಮಾನ್ ಖಾನ್ ಸೇರಿ 8 ಮಂದಿ ವಿರುದ್ಧ ಕೇಸ್

   ಇದೀಗ, ಸುಶಾಂತ್ ಸಾವಿನ ಪ್ರಕರಣದಲ್ಲಿ ಆತನ ಪ್ರೇಯಸಿ ಆಗಿದ್ದ ರಿಯಾ ಚಕ್ರವರ್ತಿ ಮೇಲೆ ಅನುಮಾನವಿದ್ದು, ಬಿಹಾರ್ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿದೆ. ಅಷ್ಟಕ್ಕೂ, ಕೇಸ್ ದಾಖಲು ಮಾಡಿದ್ದು ಯಾರು? ಯಾವ ಕಾರಣಕ್ಕಾಗಿ ದೂರು ನೀಡಿದ್ದಾರೆ? ಮುಂದೆ ಓದಿ...

   ಕೇಸ್ ದಾಖಲು ಮಾಡಿರುವ ಅಭಿಮಾನಿ

   ಕೇಸ್ ದಾಖಲು ಮಾಡಿರುವ ಅಭಿಮಾನಿ

   ನಟಿ ರಿಯಾ ವಿರುದ್ಧ ಕೇಸ್ ದಾಖಲಿಸಿರುವುದು ಸುಶಾಂತ್ ಸಿಂಗ್ ರಜಪೂರ್ ಅವರ ಓರ್ವ ಅಭಿಮಾನಿ. ಮುಜಾಫರ್ಪುರದ ನಿವಾಸಿ ಕುಂದನ್ ಕುಮಾರ್ ಎಂಬ ವಕೀಲರ ಮೂಲಕ ಈ ಕೇಸ್ ನಮೂದಿಸಿದ್ದು, ಐಪಿಸಿ ಸೆಕ್ಷನ್ 306 (ಆತ್ಮಹತ್ಯೆ) ಮತ್ತು 420 (ವಂಚನೆ) ಅಡಿಯಲ್ಲಿ ದೂರು ನೀಡಿದ್ದಾರೆ. ಈ ದೂರು ಸ್ವೀಕರಿಸಿರುವ ನ್ಯಾಯಾಧೀಶ ಮುಖೇಶ್ ಕುಮಾರ್ ಜೂನ್ 24 ರಂದು ವಿಚಾರಣೆ ಮಾಡುವುದಾಗಿ ತಿಳಿಸಿದೆ.

   ದುರುಪಯೋಗದ ಆರೋಪ

   ದುರುಪಯೋಗದ ಆರೋಪ

   ರಿಯಾ ಚಕ್ರವರ್ತಿ ಅವರು ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ತನ್ನ ವೃತ್ತಿ ಜೀವನದ ಸುರಕ್ಷಿತೆಗಾಗಿ ಹಾಗು ತನ್ನ ಉದ್ದೇಶಗಳ ಕಾರ್ಯ ಸಾಧನೆಗಾಗಿ ಸುಶಾಂತ್ ಅವರನ್ನು ಆರ್ಥಿಕವಾಗಿ ಬಳಸಿಕೊಂಡು, ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

   ಮುಂಬೈ ಪೊಲೀಸರ ಮುಂದೆ ಹೇಳಿದ್ದೇನು?

   ಮುಂಬೈ ಪೊಲೀಸರ ಮುಂದೆ ಹೇಳಿದ್ದೇನು?

   ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್ ಹಿನ್ನೆಲೆ, ಈಗಾಗಲೇ ನಟಿ ರಿಯಾ ಚಕ್ರವರ್ತಿ ಮುಂಬೈ ಪೊಲೀಸರ ಎದುರು ವಿಚಾರಣೆಗೆ ಒಳಪಟ್ಟಿದ್ದರು. 10 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿದ ರಿಯಾ, ಸುಶಾಂತ್ ಅವರ ಖಾಸಗಿ ಮತ್ತು ವೃತ್ತಿ ಜೀವನದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

   ಸಲ್ಮಾನ್ ಖಾನ್ ವಿರುದ್ಧವೂ ಕೇಸ್

   ಸಲ್ಮಾನ್ ಖಾನ್ ವಿರುದ್ಧವೂ ಕೇಸ್

   ಸುಶಾಂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅದಾಗಲೇ ಸಲ್ಮಾನ್ ಖಾನ್, ನಿರ್ಮಾಪಕ ಕರಣ್ ಜೋಹರ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಏಕ್ತಾ ಕಪೂರ್ ಸೇರಿ ಏಂಟು ಜನರ ವಿರುದ್ಧ ವಕೀಲ ಸುಧೀರ್ ಕುಮಾರ್ ಓಜಾ ಎಂಬುವವರು ಬಿಹಾರದ ಮುಜಫರ್ಪುರ್ ನ್ಯಾಯಾಲಯದಲ್ಲಿ ಐಪಿಸಿಯ ಸೆಕ್ಷನ್ 306, 109, 504 ಮತ್ತು 506 ರ ಅಡಿಯಲ್ಲಿ ಮೊಕದ್ದಮೆ ಹೂಡಿದ್ದಾರೆ.

   English summary
   Sushant Singh rajput suicide case: Complaint Filed Against Sushant singh ex girlfriend rhea chakraborty in bihar court.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X