ನಟಿ ಸೋನಾಕ್ಷಿ ಸಿನ್ಹಾ ಮನೆ ಕದ ತಟ್ಟಿದ ಯುಪಿ ಪೋಲೀಸರು
ಮುಂಬೈ, ಜುಲೈ 12: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸೋನಾಕ್ಷಿ ಸಿನ್ಹಾ ಅವರ ಮುಂಬೈ ಮನೆಯ ಕದವನ್ನು ಉತ್ತರಪ್ರದೇಶ ಪೊಲೀಸರು ತಟ್ಟಿದ್ದಾರೆ.
ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು 24 ಲಕ್ಷರು ಹಣ ಪಡೆದು ಕಾರ್ಯಕ್ರಮಕ್ಕೆ ಗೈರು ಹಾಜರಾಗಿ ವಂಚನೆ ಮಾಡಿದ್ದಾರೆ ಎಂದು ಸೋನಾಕ್ಷಿ ಸಿನ್ಹಾ ವಿರುದ್ಧ ಆರೋಪಿಸಲಾಗಿದೆ. 2018ರಲ್ಲಿ ದೆಹಲಿಯಲ್ಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಈ ಕುರಿತಂತೆ ಆಯೋಜಕರು ದೂರು ದಾಖಲಾಗಿ ಉತ್ತರಪ್ರದೇಶದ ಮೊರಾದಬಾದ್ ಪೊಲೀಸರು ತನಿಖೆ ಕೈಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸೋನಾಕ್ಷಿ ಅವರನ್ನು ಭೇಟಿ ಮಾಡಿ ಅವರ ಹೇಳಿಕೆ ಪಡೆಯಲು ಬಂದಿದ್ದರು. ಈ ಸಂದರ್ಭದಲ್ಲಿ ಜುಹು ಪೊಲೀಸರು ಹಾಜರಿದ್ದರು. ಆದರೆ, ಸೋನಾಕ್ಷಿ ಅವರು ಮನೆಯಲ್ಲಿರಲಿಲ್ಲ. ಕೆಲ ಹೊತ್ತು ಅಲ್ಲೇ ಕುಳಿತು ನಟಿಗಾಗಿ ಕಾದಿದ್ದ ಪೊಲೀಸರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಠಾಣೆಗೆ ಮರಳಿದ್ದಾರೆ.

ನಟಿ ವಕ್ತಾರರ ಹೇಳಿಕೆ: ಸಿನಿಮಾ ರಂಗಕ್ಕೆ ಬಂದು 9 ವರ್ಷದಲ್ಲಿ ಎಂದಿಗೂ ಯಾರಿಗೂ ಮೋಸ ಮಾಡಿಲ್ಲ. ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಿನ್ಹಾ ಅವರ ಮೇಲೆ ಬಂದಿರುವ ಆರೋಪಗಳೆಲ್ಲವೂ ಸುಳ್ಳು ಹಾಗೂ ನಿರಾಧಾರವಾಗಿದೆ. ಉದ್ದೇಶಪೂರ್ವಕವಾಗಿ ಆಕೆಯ ಇಮೇಜ್ ಹಾಳುಗೆಡವಲು ಮಾಡಿರುವ ಯೋಜನೆ ಇದಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications