ಮಹಾರಾಷ್ಟ್ರ: ಕಾಂಗ್ರೆಸ್‌ಗೆ 'ದಲಿತ ಮುಖ'ಭಂಗ- ಚಂದ್ರಕಾಂತ್ ಹಂಡೋರೆಗೆ ಸೋಲಿನ ಆಘಾತ
ಮುಂಬೈ, ಜೂನ್ 21: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾ ವಿಕಾಶ್ ಆಘಾಡಿ ಸಮ್ಮಿಶ್ರ ಸರಕಾರಕ್ಕೆ ಎರಡು ವಾರಗಳ ಅಂತರದಲ್ಲಿ ಎರಡು ಆಘಾತ ಸಿಕ್ಕಿದೆ. ರಾಜ್ಯಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿಗಳನ್ನು ಸೋಲಿಸಿದ್ದ ವಿಪಕ್ಷ ಬಿಜೆಪಿ ಈಗ ವಿಧಾನಪರಿಷತ್ ಚುನಾವಣೆಯಲ್ಲೂ ಗೆಲುವು ಸಾಧಿಸಿದೆ. 10 ಸ್ಥಾನಗಳ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 5, ಎನ್‌ಸಿಪಿ 2, ಶಿವಸೇನೆ 3 ಮತ್ತು ಕಾಂಗ್ರೆಸ್ 1 ಸ್ಥಾನಗಳನ್ನು ಜಯಿಸಿವೆ. ಕಾಂಗ್ರೆಸ್ ನಿಲ್ಲಿಸಿದ್ದ ಇಬ್ಬರು ಅಭ್ಯರ್ಥಿಗಳ ಪೈಕಿ ಚಂದ್ರಕಾಂತ್ ಹಂಡೋರೆ ಸೋಲಪ್ಪಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ಅನಿರೀಕ್ಷಿತವೆನಿಸಿದ್ದ ಫಲಿತಾಂಶ.
ಚಂದ್ರಕಾಂತ್ ಹಂಡೋರೆ ಸೋತಿದ್ದು ಕಾಂಗ್ರೆಸ್‌ನ ಪ್ರತಿಷ್ಠೆಗೆ ಮರ್ಮಾಘಾತ ಕೊಟ್ಟಂತಾಗಿರುವುದು ಹೌದು. ಯಾಕೆಂದರೆ, ಹಂಡೋರೆ ಕಾಂಗ್ರೆಸ್‌ನ ಮೊದಲ ಆದ್ಯತೆಯ ಅಭ್ಯರ್ಥಿ. ಮೇಲ್ನೋಟಕ್ಕೆ ಕಾಂಗ್ರೆಸ್‌ನ ಇಬ್ಬರೂ ಅಭ್ಯರ್ಥಿಗಳು ಗೆಲುವು ಸಾಧಿಸುವುದರಲ್ಲಿ ಯಾವ ತೊಡಕೂ ಕಾಣಿಸುತ್ತಿರಲಿಲ್ಲ. ಎಂವಿಎ ಮೈತ್ರಿಕೂಟದ ಬಳಿ ಅವಶ್ಯಕ ಸಂಖ್ಯೆಯಷ್ಟು ಮತಗಳಿದ್ದವು. ಆದರೆ, ಕ್ರಾಸ್ ವೋಟಿಂಗ್ ನಡೆದು ಅಂತಿಮವಾಗಿ ಕಾಂಗ್ರೆಸ್‌ನ ಪ್ರಮುಖ ಅಭ್ಯರ್ಥಿಯೇ ಸೋತಿದ್ದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್‌ನ ಎರಡನೇ ಆದ್ಯತೆಯ ಅಭ್ಯರ್ಥಿ ಜಗಪತ್ ಭಾಯ್ ಹಾಗು ಹೀಗೂ ಗೆಲುವಿನ ನಗೆ ಬೀರುವಲ್ಲಿ ಯಶಸ್ಸಿಯಾದರು.

ಯಾರು ಈ ಚಂದ್ರಕಾಂತ್ ಹಂಡೋರೆ?
ಚಂದ್ರಕಾಂಗ್ ಹಂಡೋರೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಾಲಿದ ದಲಿತ ಮುಖ ಎನಿಸಿದ್ದಾರೆ. 67 ವರ್ಷದ ಹಂಡೋರೆ ನುರಿತ ರಾಜಕಾರಣಿ ಹೌದು. ದಲಿತ ಹೋರಾಟಗಳ ಮೂಲಕ ಗುರುತಿಸಿಕೊಂಡಿದ್ದ ಚಂದ್ರಕಾಂತ್ ಮೊದಲಿಗೆ ರಿಪಬ್ಲಿಕನ್ ಪಾರ್ಟಿ (ಆರ್‌ಪಿಐ) ಮೂಲಕ ರಾಜಕೀಯಕ್ಕೆ ಅಡಿ ಇಟ್ಟರು. 1985ರಲ್ಲಿ ಮುಂಬೈನಲ್ಲಿ ಪಾಲಿಕೆ ಸದಸ್ಯರಾದರು. 1992ರಲ್ಲಿ ಮುಂಬೈನ ಮೇಯರ್ ಆದರು.
2004ರಲ್ಲಿ ಕಾಂಗ್ರೆಸ್ ಸೇರಿದ ಅವರು ಆ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚೆಂಬೂರ್ ಕ್ಷೇತ್ರದ ಶಾಸಕರಾಗಿ ಚುನಾಯಿತಾದರು. ಆಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದಲ್ಲಿ ಅವರು ಸಚಿವರಾಗಿಯೂ ಆಯ್ಕೆಯಾದರು.

ಕಾಂಗ್ರೆಸ್‌ನ ದಲಿತ ಮುಖ ಹಂಡೋರೆ
ಚಂದ್ರಕಾಂತ ಹಂಡೋರೆಯವರನ್ನು ಪ್ರಮುಖ ದಲಿತ ಮುಖವಾಗಿ ಬಿಂಬಿಸುವ ಪ್ರಯತ್ನವಾಗಿ ಕಾಂಗ್ರೆಸ್ ಪಕ್ಷ 2021ರಲ್ಲಿ ಮಹಾರಾಷ್ಟ್ರ ಪ್ರದೇಶ್ ಕಾಂಗ್ರೆಸ್ ಕಮಿಟಿಯ ಕಾರ್ಯಕಾರಿ ಅಧ್ಯಕ್ಷರಾಗಿ ಹಂಡೋರೆಯನ್ನು ನೇಮಿಸಿತು. ಹಾಗೆಯೇ ಪರಿಷತ್‌ಗೆ ಅವರನ್ನು ಕಳುಹಿಸಿ ದಲಿತ ಸಮುದಾಯದ ಮತಗಳ ಮೇಲೆ ಕಣ್ಣಿಡುವ ಆಲೋಚನೆಯಲ್ಲೂ ಕಾಂಗ್ರೆಸ್ ಇತ್ತು. ಆದರೆ, ಆಗಿದ್ದೇ ಬೇರೆ, ಹಂಡೋರೆ ಅನಿರೀಕ್ಷಿತವಾಗಿ ಸೋತಿದ್ದಾರೆ.

ಮುಂಬೈ ಗಲಭೆ ಮತ್ತು ಹಂಡೋರೆ:
ಚಂದ್ರಕಾಂತ್ ಹಂಡೋರೆ 1992ರಲ್ಲಿ ಮುಂಬೈ ನಗರದ ಮೇಯರ್ ಆಗಿದ್ದರು. ಒಂದು ವರ್ಷದ ಹಿಂದಷ್ಟೇ ಮುಂಬೈನಲ್ಲಿ ದಾವೂದ್ ಇಬ್ರಾಹಿಂ ಪ್ರಾಯೋಜಕತ್ವದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಆ ಹಿನ್ನೆಲೆಯಲ್ಲಿ 1992-93ರ ಅವಧಿಯಲ್ಲಿ ಮುಂಬೈನಲ್ಲಿ ಬಹಳಷ್ಟು ಗಲಭೆಗಳು ನಡೆದವು. ಮುಸ್ಲಿಮರನ್ನು ಗುರಿಯಾಗಿಸಿ ಹಿಂಸಾಚಾರ ನಡೆಯಿತೆನ್ನಲಾಗಿದೆ.
ಆಗ ಯುವರಾಜ್ ಮೋಹಿತೆ ಎಂಬ ಪತ್ರಕರ್ತರು ಸ್ಫೋಟಕ ಮಾಹಿತಿಯೊಂದನ್ನು ಹೊರಗೆಡವಿದ್ದ. ಚಂದ್ರಕಾಂತ್ ಹಂಡೋರೆ ಜೊತೆ ತಾನು ಅಂದಿನ ಶಿವಸೇನಾ ಪಕ್ಷದ ಮುಖ್ಯಸ್ಥ ಬಾಳಾ ಠಾಕ್ರೆ ನಿವಾಸಕ್ಕೆ ಹೋಗಿದ್ದಾಗ, ಮುಸ್ಲಿಮರ ಮೇಲೆ ದಾಳಿ ನಡೆಸಬೇಕೆಂದು ಠಾಕ್ರೆ ಹೇಳಿದ್ದು ತನ್ನ ಕಿವಿಗೆ ಬಿತ್ತು ಎಂದಿದ್ದರು.
ಮುಂಬೈ ಗಲಭೆ ಘಟನೆಯನ್ನು ತನಿಖೆ ನಡೆಸುತ್ತಿದ್ದ ಶ್ರೀಕೃಷ್ಣ ಆಯೋಗದ ಮುಂದೆ ಯುವರಾಜ್ ಮೋಹಿತೆ ಅಂದಿನ ಘಟನೆಯ ವಿವರವನ್ನು ನೀಡಿದ್ದರು.. ಆದರೆ, ಮೋಹಿತೆ ಜೊತೆ ಇದ್ದ ಚಂದ್ರಕಾಂತ ಹಂಡೋರೆ ಹೇಳಿಕೆ ನೀಡಲು ನಿರಾಕರಿಸಿದರು. ಅವರ ಈ ನಡೆ ಅಚ್ಚರಿಗೆ ಕಾರಣವಾಗಿತ್ತು.

ಈಗ ಹಂಡೋರೆ ಸೋಲಲು ಕಾರಣ ಏನು?
ಮಹಾರಾಷ್ಟ್ರದಲ್ಲಿ 10 ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಕಣದಲ್ಲಿದ್ದರು. ಆಡಳಿತಾರೂಢ ಮೈತ್ರಿಕೂಟದಿಂದ 6 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನಾ ಪಕ್ಷಗಳಿಂದ ನಿಲ್ಲಿಸಲಾಗಿದ್ದ ತಲಾ 2 ಅಭ್ಯರ್ಥಿಗಳೆಲ್ಲರೂ ಗೆಲ್ಲುವ ನಿರೀಕ್ಷೆ ಇತ್ತು. ಸಂಖ್ಯಾ ಬಲ ಲೆಕ್ಕದಲ್ಲಿ ಬಿಜೆಪಿಗೆ ಗೆಲ್ಲಲು ಸಾಧ್ಯವಿದ್ದದ್ದು 4 ಮಾತ್ರ. ಆದರೂ ಐವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಬಿಜೆಪಿ ಗೇಮ್ ಪ್ಲಾನ್ ಮಾಡಿತು.
ಪರಿಷತ್ ಚುನಾವಣೆಯಲ್ಲಿ ಕೇವಲ 106 ಮತಗಳನ್ನು ಹೊಂದಿದ್ದ ಬಿಜೆಪಿ ಅಂತಿಮವಾಗಿ 133 ಮತಗಳನ್ನು ಪಡೆಯಿತು. ಇತರ ಪಕ್ಷಗಳು ಮತ್ತು ಪಕ್ಷೇತರರಿಂದ 27 ಮತಗಳು ಬಿಜೆಪಿಗೆ ಸಿಕ್ಕವು. ಅದು ನಿಲ್ಲಿಸಿದ್ದ ಎಲ್ಲಾ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದರು.
ಎನ್‌ಸಿಪಿ ಪಕ್ಷಕ್ಕೂ ಹೆಚ್ಚುವರಿ ಮತಗಳು ಸಿಕ್ಕವು. ಶಿವಸೇನೆಯ ಎರಡೂ ಅಭ್ಯರ್ಥಿಗಳೂ ಗೆದ್ದರೂ ಆ ಪಕ್ಷದ ಮೂವರು ಶಾಸಕರು ಬೇರೆ ಪಕ್ಷಗಳಿಗೆ ಕ್ರಾಸ್ ವೋಟಿಂಗ್ ಮಾಡಿದರು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಆಗಿದ್ದು ಮರ್ಮಾಘಾತ. ಮೊದಲ ಸುತ್ತಿನಲ್ಲಿ ಅದರ ಇಬ್ಬರೂ ಅಭ್ಯರ್ಥಿಗಳು ಮುನ್ನಡೆ ಪಡೆಯಲು ವಿಫಲರಾದರು. ಅಂತಿಮವಾಗಿ ಜಗತಪ್ ಭಾಯ್ ಆಯ್ಕೆಯಾದರು. ಹಂಡೋರೆ ನಿರಾಸೆ ಅನುಭವಿಸಬೇಕಾಯಿತು. ಇಲ್ಲಿ ಕಾಂಗ್ರೆಸ್ ಮತ್ತು ಶಿವಸೇನೆ ಪಕ್ಷಗಳಿಂದ ಆರಕ್ಕೂ ಹೆಚ್ಚು ಶಾಸಕರು ಬೇರೆ ಪಕ್ಷಗಳಿಗೆ ಕ್ರಾಸ್ ವೋಟಿಂಗ್ ಮಾಡಿರುವುದು ಸ್ಪಷ್ಟವಾಗಿದೆ.
(ಒನ್ಇಂಡಿಯಾ ಸುದ್ದಿ)
-
ನಾಸೀರ್ ಅಹ್ಮದ್ ವಜಾ; ಪಕ್ಷದಲ್ಲಿ ಶಿಸ್ತಿಲ್ಲದಿದ್ದರೆ ಕ್ರಮ ಎಂದ ಡಿಕೆ ಶಿವಕುಮಾರ್ -
Abdul Jabbar: ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಜಬ್ಬಾರ್ ಅಮಾನತು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕ್ರಮ -
Upendra: ನಟ ಉಪೇಂದ್ರ ಅವರ "ಪ್ರಜಾಕೀಯ" ಪಕ್ಷದ ವೆಬ್ಸೈಟ್ ಲೋಕಾರ್ಪಣೆ, ಟಿಕೆಟ್ ಆಕಾಂಕ್ಷಿಗಳಿಗೆ ಹೊಸ ರೂಲ್ಸ್ -
Vijay: ಪ್ರಚಾರದ ವೇಳೆ ಹೂವಿನ ಚೆಂಡು ಎಸೆದ ಅಭಿಮಾನಿ; ಸೈಕಲ್ನಿಂದ ಇಳಿದು ಗಾಡಿ ಹತ್ತಿದ ದಳಪತಿ ವಿಜಯ್, ವಿಡಿಯೋ ವೈರಲ್ -
Bihar: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ, ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
ಮುಂಬೈಗೆ ಪರಿಸರ ಸ್ನೇಹಿ ವಿದ್ಯುತ್ ಪೂರೈಕೆ: ಅದಾನಿ ಎನರ್ಜಿಯಿಂದ 1,000 ಮೆಗಾವ್ಯಾಟ್ ಸಾಮರ್ಥ್ಯದ ಪವರ್ ಲಿಂಕ್ ಚಾಲನೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ.












Click it and Unblock the Notifications