ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷಿಯಾದಿಂದ 'ಛೋಟಾ' ಇಂಡಿಯಾಕ್ಕೆ: ಸಿಬಿಐ

By Mahesh
|
Google Oneindia Kannada News

ಮುಂಬೈ, ನ.01: ಇಂಡೋನೇಷಿಯಾ ಪೊಲೀಸರ ವಶದಲ್ಲಿರುವ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಭೂಗತ ಪಾತಕಿ ಛೋಟಾ ರಾಜನ್ ನನ್ನು ಭಾರತಕ್ಕೆ ಕರೆ ತರುವ ಪ್ರಕ್ರಿಯೆಗೆ ಸಿಬಿಐ ಚಾಲನೆ ನೀಡಿದೆ. ಬಾಲಿ ದ್ವೀಪಕ್ಕೆ ಭಾರತದಿಂದ ಸಿಬಿಐ ತಂಡ ತೆರಳಿದ್ದು, ರಾಜನ್ ನನ್ನು ಕರೆ ತರಲು ಬೇಕಾಗುವ ಕಡತಗಳನ್ನು ಸಿದ್ಧಪಡಿಸಿಕೊಂಡಿದೆ.

ಸಿಬಿಐ ಮುಂಬೈ ಹಾಗೂ ದೆಹಲಿ ಪೊಲೀಸ್ ಅಧಿಕಾರಿಗಳಿಂದ ಕೂಡಿದ ಜಂಟಿ ತಂಡ ಭಾನುವಾರ ಇಂಡೋನೇಷಿಯಾಗೆ ತೆರಳಿದೆ. ಸೋಮವಾರದಂದು ಭಾರತೀಯ ದೂತಾವಾಸದ ಅಧಿಕಾರಿಗಳನ್ನು ಭೇಟಿ ಈ ಬಗ್ಗೆ ಮಾತುಕತೆ ನಡೆಸಲಿದೆ.

55 ವರ್ಷ ವಯಸ್ಸಿನ ಛೋಟಾರಾಜನ್‌ನೊಂದಿಗೆ ಇಂಡೋನೇಷಿಯಾದಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿ ಸಂಜೀವ್ ಅಗರವಾಲ್ ಅವರು 45ಕ್ಕೂ ಹೆಚ್ಚು ನಿಮಿಷಗಳು ಮಾತನಾಡಿದ್ದಾರೆ. [ಛೋಟಾ ರಾಜನ್ : ಡಾನ್ ಆಗಿದ್ದು ಹೇಗೆ?]

CBI, Mumbai police team leave for Bali to secure Chhota Rajan

ರಾಜನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಯಾವ ಷರತ್ತುಗಳನ್ನು ಇಂಡೋನೇಷಿಯಾ ವಿಧಿಸಲಿದೆ ಎಂಬುದರ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಕಾನೂನು ಪ್ರಕ್ರಿಯೆ ಮುಗಿದ ಬಳಿಕ ರಾಜನ್ ನನ್ನು ನೇರವಾಗಿ ಮುಂಬೈಯ ವಿಶೇಷ ತನಿಖಾ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. [ಭಾರತಕ್ಕೆ ಹೋದ್ರೆ ನಾನು ಫಿನಿಷ್: ರಾಜನ್]

ಕೊಲೆ, ಸುಲಿಗೆ, ಬೆದರಿಕೆ, ಬಾಂಬ್ ಸ್ಫೋಟದ ಸಂಚು ಸೇರಿದಂತೆ ರಾಜನ್ ವಿರುದ್ಧ ಮುಂಬೈ ಪೊಲೀಸರು 75ಕ್ಕೂ ಅಧಿಕ ಕೇಸುಗಳನ್ನು ದಾಖಲಿಸಿದ್ದಾರೆ.ದೆಹಲಿ ಪೊಲೀಸರು 6 ಪ್ರಮುಖ ಪ್ರಕರಣಗಳಲ್ಲಿ ರಾಜನ್ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ಛೋಟಾ ರಾಜನ್ ನಂತರ 1993ರ ಮುಂಬೈ ಸರಣಿ ಸ್ಫೋಟದ ಆರೋಪಿ ದಾವೂದ್ ಇಬ್ರಾಹಿಂ ನಮ್ಮ ಟಾರ್ಗೆಟ್ ಎಂದು ಸಚಿವ ಕೀರೆನ್ ಹೇಳಿದ್ದಾರೆ. ಪಾಕಿಸ್ತಾನದ ಕರಾಚಿಯಲ್ಲಿ ಅಡಗಿ ಕುಳಿತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಕೂಡ ಛೋಟಾ ರಾಜನ್ ರೀತಿಯಲ್ಲೇ ಬಂಧಿಸಿ ಭಾರತಕ್ಕೆ ಕರೆತರಲಾಗುವುದು ಎಂದಿದ್ದಾರೆ. (ಒನ್ ಇಂಡಿಯಾ ಸುದ್ದಿ)

English summary
A team of the Central Bureau of Investigation and the Mumbai police has left for Indonesia to begin the process of getting Chhota Rajan back to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X