ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀಸ್ತಾ ಸೆಟಲ್ವಾಡ್ ಎನ್ ಜಿಒ ವಿರುದ್ಧ ಚಾರ್ಜ್ ಶೀಟ್

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಸಭ್ರಂಗ್ ಟ್ರಸ್ಟ್ ಸರ್ಕಾರೇತರ ಸಂಸ್ಥೆ ವಿರುದ್ಧ ಸಿಬಿಐ ತಂಡ ಚಾರ್ಜ್ ಶೀಟ್ ಸಲ್ಲಿಸಿದೆ. ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಸಭ್ರಂಗ್ ಟ್ರಸ್ಟ್ ಸರ್ಕಾರೇತರ ಸಂಸ್ಥೆ ಲೈಸನ್ಸ್ ರದ್ದುಗೊಳಿಸಿದೆ

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಜನವರಿ 03: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಸಭ್ರಂಗ್ ಟ್ರಸ್ಟ್ ಸರ್ಕಾರೇತರ ಸಂಸ್ಥೆ ವಿರುದ್ಧ ಸಿಬಿಐ ತಂಡ ಚಾರ್ಜ್ ಶೀಟ್ ಸಲ್ಲಿಸಿದೆ. ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಸಭ್ರಂಗ್ ಟ್ರಸ್ಟ್ ಸರ್ಕಾರೇತರ ಸಂಸ್ಥೆ ಲೈಸನ್ಸ್ ರದ್ದುಗೊಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ವಿದೇಶಿ ಮೂಲಗಳಿಂದ ಅಕ್ರಮವಾಗಿ ದೇಣಿಗೆ ಸಂಗ್ರಹಿಸಿದ ಆರೋಪವನ್ನು ತೀಸ್ತಾ ಅವರು ಎದುರಿಸುತ್ತಿದ್ದಾರೆ.

ಸಭ್ರಂಗ್ ಟ್ರಸ್ಟ್ ಸರ್ಕಾರೇತರ ಸಂಸ್ಥೆ ವಿರುದ್ಧ ಅಕ್ರಮ ದೇಣಿಗೆ ಸಂಗ್ರಹ ಆರೋಪ ಹೊರೆಸಿ ಎಫ್ ಸಿಆರ್ ಎ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಅಧಿಕೃತ ದೂರನ್ನು ನೀಡಿತ್ತು. ತನಿಖೆ ಆರಂಭಿಸಿದ ಸಿಬಿಐ, ಎನ್ ಜಿಒ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ದೋಷಾರೋಪಣ ಪಟ್ಟಿ ಸಿದ್ಧಪಡಿಸಿದೆ.[ಸೆಟಲ್ವಾಡ್ ಅವರ ಎನ್ ಜಿಒ ಲೈಸನ್ಸ್ ರದ್ದು]

CBI files chargesheet against Teesta's organisation

ಎಫ್ ಸಿಆರ್ ಎ ಸೆಕ್ಷನ್ 8(1) ಕಾಯ್ಡೆ ಉಲ್ಲಂಘನೆ ಹೊತ್ತಿರುವ ಸಭ್ರಂಗ್ ಟ್ರಸ್ಟ್ ಗೆ ಬಂದಿರುವ ವಿದೇಶಿ ದೇಣಿಗೆಯನ್ನು ದುರ್ಬಳಕೆ ಮಾಡಿದ ಆರೋಪ ಹೊತ್ತಿದ್ದಾರೆ. ನಿಯಮದ ಪ್ರಕಾರ ದೇಣಿಗೆ ಮೊತ್ತದ ಶೇ 50ರಷ್ಟು ಮಾತ್ರ ಆಡಳಿತಾತ್ಮಕ ನಿರ್ವಹಣಾ ವೆಚ್ಚವಾಗಿ ಖರ್ಚು ಮಾಡಬಹುದಾಗಿದೆ.

ತೀಸ್ತಾ ವಿರುದ್ಧ ಪ್ರಕರಣಗಳು: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಹಾಗೂ ಆಕೆ ಪತಿ ಜಾವೇದ್ ಆನಂದ್ ವಿರುದ್ಧ ಎಫ್ ಸಿಆರ್ ಎ ಉಲ್ಲಂಘನೆ ಆರೋಪಿಸಿ ಪ್ರಕರಣ ದಾಖಲಾಗಿದೆ. ಉದ್ಯಮಿ ಗುಲಾಂ ಮೊಹಮ್ಮದ್ ಹಾಗೂ ಎನ್ ಜಿಎಒ ಸಭ್ರಂಗ್ ಕಮ್ಯೂನಿಕೇಷನ್ ವಿರುದ್ಧ ಕೂಡಾ ಪ್ರಕರಣ ಬುಕ್ ಆಗಿದೆ.

ಸಭ್ರಂಗ್ ಟ್ರಸ್ಟಿಗೆ ವಿದೇಶದಿಂದ ಸುಮಾರು 1 ಕೋಟಿ ರು ಗೂ ಅಧಿಕ ದೇಣಿಗೆ ಬಂದಿದ್ದು ಇದನ್ನು ಎನ್ ಜಿಒನ ಇತರೆ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿದೆ. ಈ ಬಗ್ಗೆ ಗುಜರಾತ್ ಸರ್ಕಾರ ಈ ಹಿಂದೆ ಆರೋಪ ಹೊರೆಸಿತ್ತು.ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ಗೃಹ ಸಚಿವಾಲಯ ವಹಿಸಿತ್ತು. (ಒನ್ಇಂಡಿಯಾ ಸುದ್ದಿ)

English summary
The Central Bureau of Investigation has filed a chargesheet against Teesta Setalvad's organisation for violations under the FCRA. The chargesheet was filed following investigations that were conducted by the CBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X