ವಿಡಿಯೋ ː ಅಂಬೋಲಿ ಘಾಟಿನಲ್ಲಿ ಪ್ರಪಾತಕ್ಕೆ ಹಾರಿದ ಯುವಕರು

Posted By:
Subscribe to Oneindia Kannada

ಮುಂಬೈ, ಆಗಸ್ಟ್ 04:ಇಬ್ಬರು ಯುವಕರು ಮಹಾರಾಷ್ಟ್ರದ ಅಂಬೋಲಿ ಘಾಟ್ ನ ಕವಲೆ ಪಾಯಿಂಟ್ ನಿಂದ ಪ್ರಪಾತಕ್ಕೆ ಹಾರುವ ದೃಶ್ಯಾವಳಿ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಪ್ರಪಾತ ವೀಕ್ಷಣೆ, ಪರಿಸರ ವೀಕ್ಷಣೆಗಾಗಿ ನಿಂತಿದ್ದ ಇಬ್ಬರು ಯುವಕರು ಮೇಲಿಂದ ಹಾರಿ ಸುಮಾರು 2000 ಅಡಿ ಪ್ರಪಾತಕ್ಕೆ ಬಿದ್ದಿದ್ದಾರೆ. ಆದರೆ, ಇದು ಆಕಸ್ಮಿಕವೋ, ಆತ್ಮಹತ್ಯೆಯೋ ತಿಳಿದು ಬಂದಿಲ್ಲ. ಪಿಕ್ನಿಕ್ ಗಾಗಿ ಗೆಳೆಯರೊಡನೆ ಬಂದಿದ್ದವರು ಈ ರೀತಿ ಮಾಡಿಕೊಂಡಿದ್ದಾರೆ.

Caught On Camera: 2 Fall Into 2,000-Ft Deep Valley In Maharashtra, Die

ಅಂಬೋಲಿ ಘಾಟ್ ನ ಕವಲೆ ಸಾದ್ ಪಾಯಿಂಟ್ ನಲ್ಲಿ ಆಗಸ್ಟ್ 01 ರಂದು ಈ ಘಟನೆ ನಡೆದಿದ್ದು, ಮೃತಪಟ್ಟವರನ್ನು ಇಮ್ರಾನ್ ಗರಡಿ(26) ಹಾಗೂ ಪ್ರತಾಪ್ ರಾಥೋಡ್ (21) ಎಂದು ಗುರುತಿಸಲಾಗಿದೆ.

ಕಣಿವೆ ಪ್ರದೇಶದಲ್ಲಿ ಪಿಕ್ನಿಕ್ ಗಾಗಿ ಏಳು ಜನರ ತಂಡ ಬಂದಿತ್ತು. ಇವರೆಲ್ಲರೂ ಕೊಲ್ಹಾಪುರದ ಪೌಲ್ಟ್ರಿ ಫಾರ್ಮ್ ನಲ್ಲಿ ಕೆಲಸ ಮಾಡುವವರು ಎಂದು ಸವಂತವಾಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಸುನಿಲ್ ಧನಾವಾಡೆ ಹೇಳಿದ್ದಾರೆ.

ಮೃತಪಟ್ಟವರ ಶವ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಸ್ಥಳೀಯರು, ನುರಿತ ಟ್ರೆಕ್ಕರ್ಸ್ ನೆರವು ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಸುನಿಲ್ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two revellers died after falling into a 2,000 feet deep valley in Amboli Ghat in Sindhudurg district of Maharashtra.The incident took place at Kawale Saad Point in Amboli Ghat, a popular picnic point, on August 1, police said.
Please Wait while comments are loading...