• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನಪ್ರಿಯ ನಟ ಸಂಜಯ್ ದತ್‌ಗೆ ಶ್ವಾಸಕೋಶದ ಕ್ಯಾನ್ಸರ್

|
Google Oneindia Kannada News

ಮುಂಬೈ, ಆ.11: ಹಿಂದಿ ಚಿತ್ರರಂಗದ ಜನಪ್ರಿಯ ನಟ ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಯುಎಸ್ ಗೆ ತೆರಳುತ್ತಿದ್ದಾರೆ.

ಕಳೆದ ಶನಿವಾರ ಉಸಿರಾಟದ ತೊಂದರೆ ಕಂಡು ಬಂದಿದ್ದರಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಸಂಜಯ ದತ್ ಅವರಿಗೆ ಕೊರೊನಾವೈರಸ್ ಸೋಂಕು ಇರುವ ಬಗ್ಗೆ ಪರೀಕ್ಷೆ ನಡೆಸಲಾಗಿದ್ದು, ನೆಗಟಿವ್ ಎಂದು ವರದಿ ಬಂದಿತ್ತು.

"ನಾನು ಹುಷಾರಾಗಿದ್ದೇನೆ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ ನನ್ನ ಕೊವಿಡ್ 19 ಪರೀಕ್ಷೆ ವರದಿ ನೆಗಟಿವ್ ಎಂದುಬಂದಿದೆ. ವೈದ್ಯರು ಹಾಗೂ ಸಿಬ್ಬಂದಿ ನೆರವಿನಿಂದ ನನ್ನ ಆರೈಕೆ ಚೆನ್ನಾಗಿ ನಡೆದಿದೆ. ಲೀಲಾವತಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ, ಇನ್ನೆರಡು ದಿನಗಳಲ್ಲಿ ನಾನು ಡಿಸ್ಚಾರ್ಜ್ ಆಗುತ್ತೇನೆ'' ಎಂದು ಸಂಜಯ್ ದತ್ ಟ್ವೀಟ್ ಮಾಡಿದ್ದರು.

ಇದಾದ ಬಳಿಕ ಕೆಲ ಕಾಲ ಚಿತ್ರೀಕರಣದಿಂದ ಬಿಡುವು ತೆಗೆದುಕೊಳ್ಳುತ್ತಿದ್ದೇನೆ. ವೈದ್ಯಕೀಯ ನೆರವಿನ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದರು.

ಆಸ್ಪತ್ರೆಗೆ ದಾಖಲಾದ ಸಂಜಯ್ ದತ್, ಕೊವಿಡ್ 19 ನೆಗಟಿವ್ಆಸ್ಪತ್ರೆಗೆ ದಾಖಲಾದ ಸಂಜಯ್ ದತ್, ಕೊವಿಡ್ 19 ನೆಗಟಿವ್

ಈಗ ಸಂಜಯ್ ಅವರಿಗೆ ಕ್ಯಾನ್ಸರ್ ಇರುವ ಬಗ್ಗೆ ಅದ್ಯಾನನ್ ಸುಮನ್(ನಟ ಶೇಖರ್ ಸುಮನ್ ಪುತ್ರ) ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ಲೈಫ್ ಕೂಡಾ ಈ ಬಗ್ಗೆ ವರದಿ ಮಾಡಿದೆ.

ಸಂಜು ಸಾರ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಬೇಗ ಗುಣಮುಖರಾಗಿ, ಈ ವರ್ಷ ಯಾಕೆ ಹೀಗೆ ಆಗುತ್ತಿದೆ ಎಂದು ಅದ್ಯಾನನ್ ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ಲೈಫ ವರದಿಯಂತೆ ಸಂಜು ಅವರ ಕ್ಯಾನ್ಸರ್ ಸದ್ಯ ಮೂರನೇ ಹಂತದಲ್ಲಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್ ದತ್ ಅಮೆರಿಕಕ್ಕೆ ಹೋಗುತ್ತಿದ್ದಾರೆ. ಸಂಜಯ್ ದತ್ ಅವರ ತಾಯಿ ನರ್ಗಿಸ್ ಕೂಡ ಕ್ಯಾನ್ಸರ್ ನಿಂದ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ದಶಕದ ಬಳಿಕ ಮತ್ತೊಮ್ಮೆ ರಾಜಕೀಯಕ್ಕೆ ಸಂಜಯ್ ದತ್ ಎಂಟ್ರಿದಶಕದ ಬಳಿಕ ಮತ್ತೊಮ್ಮೆ ರಾಜಕೀಯಕ್ಕೆ ಸಂಜಯ್ ದತ್ ಎಂಟ್ರಿ

ಸಂಜಯ್ ಅವರ ಪತ್ನಿ ಮಾನ್ಯತಾ, ಅವಳಿ ಮಕ್ಕಳಾದ ಐಕ್ರಾ, ಸಹ್ರಾನ್ ಅವರು ಸದ್ಯ ದುಬೈನಲ್ಲಿದ್ದಾರೆ ಎಂಬ ಮಾಹಿತಿಯಿದೆ. ಮತ್ತೊಬ್ಬ ಪುತ್ರಿ ತ್ರಿಶಾಲಾ ದತ್(ಮೊದಲ ಪತ್ನಿ ರಿಚಾ ಶರ್ಮ ಮಗಳು) ನ್ಯೂಯಾರ್ಕ್ ನಲ್ಲಿ ವಾಸಿಸುತ್ತಿದ್ದಾರೆ.

2019ರಲ್ಲಿ ಪಾಣಿಪತ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸಂಜಯ್ ದತ್ ಇತ್ತೀಚೆಗೆ 61 ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಕನ್ನಡದಲ್ಲಿ ಕೆಜಿಎಫ್ 2ನಲ್ಲಿ ಅಧೀರ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಸಂಜು ಅಭಿನಯದ ಸಡಕ್ 2 ಒಟಿಟಿ ವೇದಿಕೆ ಹಾಟ್ ಸ್ಟಾರ್+ ಡಿಸ್ನಿಯಲ್ಲಿ ಇದೇ ತಿಂಗಳು ಬಿಡುಗಡೆಯಾಗಲು ಸಜ್ಜಾಗಿದೆ.

English summary
Bollywood actor Sanjay Dutt has been diagnosed with stage 3 lung cancer, say reports.the 61-year-old actor will soon be flying to the US soon for medical treatment- Shekhar Suman's son Adyayan Suman tweeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X