• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Breaking; ಶಾರುಖ್‌ ಪುತ್ರ ಆರ್ಯನ್‌ ಖಾನ್‌ಗೆ ಜಾಮೀನು ಮಂಜೂರು

|
Google Oneindia Kannada News

ಮುಂಬೈ, ಅಕ್ಟೋಬರ್ 28; ಬಾಲಿವುಡ್ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ಜಾಮೀನು ಸಿಕ್ಕಿದೆ. ಕ್ರೂಸ್‌ ಹಡಗಿನಲ್ಲಿ ನಡೆದ ಐಷಾರಾಮಿ ಪಾರ್ಟಿ ಮೇಲೆ ದಾಳಿ ಮಾಡಿದ್ದ ಎನ್‌ಸಿಬಿ ಅಧಿಕಾರಿಗಳು ಶಾರೂಖ್‌ ಪುತ್ರನನ್ನು ಬಂಧಿಸಿದ್ದರು.

ಗುರುವಾರ ಬಾಂಬೆ ಹೈಕೋರ್ಟ್ ಕ್ರೂಸ್‌ ಡ್ರಗ್ಸ್‌ ಪ್ರಕರಣದ ಆರೋಪಿ ಆರ್ಯನ್‌ ಖಾನ್‌ಗೆ ಜಾಮೀನು ಮಂಜೂರು ಮಾಡಿದೆ. ಆರ್ಯನ್ ಖಾನ್ ಪರವಾಗಿ ಮಾಜಿ ಅಟಾರ್ನಿ ಜನರಲ್ ಮುಕುಲ್ ರೊಹಟಗಿ ವಾದ ಮಂಡಿಸಿದ್ದರು.

ಆರ್ಯನ್ ಡ್ರಗ್ಸ್‌ ಪ್ರಕರಣ: ಮುಂಬೈ ಪೊಲೀಸ್‌ ಕಮಿಷನರ್‌ಗೆ ಸಮೀರ್ ವಾಂಖೆಡೆ ಬರೆದ ಪತ್ರದಲ್ಲೇನಿದೆ?ಆರ್ಯನ್ ಡ್ರಗ್ಸ್‌ ಪ್ರಕರಣ: ಮುಂಬೈ ಪೊಲೀಸ್‌ ಕಮಿಷನರ್‌ಗೆ ಸಮೀರ್ ವಾಂಖೆಡೆ ಬರೆದ ಪತ್ರದಲ್ಲೇನಿದೆ?

ಅಕ್ಟೋಬರ್ 2ರಂದು ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ರಾತ್ರಿ ನಡೆಯುತ್ತಿದ್ದ ಪಾರ್ಟಿ ಮೇಲೆ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್​ಸಿಬಿ) ದಾಳಿ ಮಾಡಿತ್ತು. ಆಗ ಡ್ರಗ್‌ ಸೇವನೆ ಆರೋಪದ ಮೇಲೆ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿತ್ತು.

 ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಕೈಬಿಡಲು 25 ಕೋಟಿ ಡೀಲ್? ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಕೈಬಿಡಲು 25 ಕೋಟಿ ಡೀಲ್?

ಎನ್‌ಸಿಬಿ ಅಧಿಕಾರಿಗಳು ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಜನರನ್ನು ಮುಂಬೈನ ಕಿಲ್ಲಾ ಕೋರ್ಟ್‌ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತ್ತು.

''ಆರ್ಯನ್‌ ಗುರಿಯಾಗಲು, ಖಾನ್ ಎಂಬ ಸರ್ ನೇಮ್ ಕಾರಣ'': ಮುಫ್ತಿ''ಆರ್ಯನ್‌ ಗುರಿಯಾಗಲು, ಖಾನ್ ಎಂಬ ಸರ್ ನೇಮ್ ಕಾರಣ'': ಮುಫ್ತಿ

ಬಳಿಕ ಆರ್ಯನ್ ಖಾನ್ ಪರ ವಕೀಲರು ನ್ಯಾಯಾಲಯದ ಮುಂದೆ ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಆದರೆ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಇದರಿಂದಾಗಿ ಸೋಮವಾರ ಬಾಂಬೆ ಹೈಕೋರ್ಟ್‌ ಮುಂದೆ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿತ್ತು.

ಮೊದಲು ಸತೀಶ್ ಮಾನಶಿಂಧೆ ಆರ್ಯನ್ ಖಾನ್ ಪರವಾಗಿ ವಾದ ಮಂಡನೆ ಮಾಡಿದ್ದರು. ಎರಡು ದಿನದಿಂದ ಬಾಂಬೆ ಹೈಕೋರ್ಟ್‌ನಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ನಡೆದಿತ್ತು. ಈಗ ಪ್ರಕರಣದಲ್ಲಿ ಆರ್ಯನ್ ಖಾನ್ ಪರವಾಗಿ ಮಾಜಿ ಅಟಾರ್ನಿ ಜನರಲ್ ಮುಕುಲ್ ರೊಹಟಗಿ ವಾದ ಮಂಡಿಸಿದ್ದರು.

ವಾದ ಏನಾಗಿತ್ತು?; ಐಷಾರಾಮಿ ಹಡಗಿನಲ್ಲಿ ರಾತ್ರಿ ನಡೆಯುತ್ತಿದ್ದ ಪಾರ್ಟಿಗೆ 23 ವರ್ಷದ ಆರ್ಯನ್ ಖಾನ್‌ನನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಪ್ರತೀಕ್ ಗಾಬಾ ಆರ್ಯನ್‌ನನ್ನು ಪಾರ್ಟಿಗೆ ಆಹ್ವಾನಿಸಿದ್ದರು.

ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಆರ್ಯನ್ ಖಾನ್ ಬಳಿ ಏನೂ ಸಿಕ್ಕಿಲ್ಲ. ಡ್ರಗ್ಸ್ ಸೇವಿಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಬಂಧಿಸುವುದಕ್ಕೆ ಸಹ ಯಾವುದೇ ಕಾರಣ ಇರಲಿಲ್ಲ ಎಂದು ಮುಕುಲ್ ರೋಹಟಗಿ ವಾದಿಸಿದರು.

ಆರ್ಯನ್ ಖಾನ್‌ಗೆ ಡ್ರಗ್ಸ್ ಪರೀಕ್ಷೆಯನ್ನು ಇದುವರೆಗೂ ಮಾಡಿಲ್ಲ. ಆರ್ಯನ್ ಖಾನ್ ಬಂಧನ ಕಾನೂನು ಬಾಹಿರ ಆದ್ದರಿಂದ ಜಾಮೀನು ನೀಡಬೇಕು ಎಂದು ಬಾಂಬೆ ಹೈಕೋರ್ಟ್ ಮುಂದೆ ವಾದ ಮಂಡಿಸಿದ್ದರು.

ಅಕ್ಟೋಬರ್ 2ರಂದು ಐಷಾರಾಮಿ ಹಡಗಿನ ಮೇಲೆ ದಾಳಿ ಮಾಡಿದ್ದ ಎನ್‌ಸಿಬಿ ಅಧಿಕಾರಿಗಳು ಬಳಿಕ ಆರ್ಯನ್‌ ಖಾನ್ ಸೇರಿದಂತೆ ಇತರ ಆರೋಪಿಗಳನ್ನು ಎನ್‌ಸಿಬಿ ಕಚೇರಿಗೆ ಕರೆ ತಂದಿದ್ದರು. ಅವರ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಎನ್‌ಸಿಬಿ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಮುಕುಲ್ ರೋಹಟಗಿ ವಾದದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಎನ್‌ಸಿಬಿ ಅಧಿಕಾರಿಗಳು ಪೊಲೀಸರ ರೀತಿ ವರ್ತಿಸುತ್ತಿದ್ದಾರೆ. ಬೇರೆಯವರ ಶೂನಲ್ಲಿ ಡ್ರಗ್ಸ್‌ ಸಿಕ್ಕರೆ ಆರ್ಯನ್ ಖಾನ್ ಬಂಧಿಸಿದ್ದು ಏಕೆ?. ಆರ್ಯನ್ ಖಾನ್ ವಾಟ್ಸಪ್ ಚಾಟ್‌ಗಳು ಪಾರ್ಟಿಗೆ ಸಂಬಂಧಿಸಿದವು ಅಲ್ಲ ಎಂದು ವಾದಿಸಿದ್ದರು.

ಆರ್ಯನ್ ಖಾನ್ ಮತ್ತು ಇತರ ಆರೋಪಿಗಳ ವಿಚಾರಣೆ ಬಳಿಕ ಎನ್‌ಸಿಬಿ ಅಧಿಕಾರಿಗಳು ಶಾರೂಖ್‌ ಖಾನ್ ನಿವಾಸದಲ್ಲಿಯೂ ಪರಿಶೀಲನೆ ನಡೆಸಿದ್ದರು. ಮಗನನ್ನು ಅಧಿಕಾರಿಗಳು ವಶಕ್ಕೆ ಪಡೆದ ದಿನದಿಂದ ಶಾರೂಖ್‌ ಖಾನ್ ಪುತ್ರನ ಬಿಡುಗಡೆಗೆ ಶತಪ್ರಯತ್ನ ನಡೆಸಿದ್ದರು.

English summary
Bombay High Court allows bail to Aryan Khan, Arbaaz Merchant and Munmun Dhamecha in cruise drugs case. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X