ಮಾಲೆಗಾಂವ್ ಸ್ಫೋಟ : ಅ.29ರಂದು ಕರ್ನಲ್ ಪುರೋಹಿತ್ ಅರ್ಜಿ ಭವಿಷ್ಯ
ಮುಂಬೈ, ಅಕ್ಟೋಬರ್ 26: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಸೋಮವಾರ(ಅಕ್ಟೋಬರ್ 29)ದಂದು ವಿಚಾರಣೆ ನಡೆಸಲಿದೆ.
ಪ್ರಕರಣದಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಗೆ ಸುಪ್ರಿಂ ಕೋರ್ಟ್ ನಿಂದ 2017ರ ಅಗಸ್ಟ್ ತಿಂಗಳಿನಲ್ಲಿ ಜಾಮೀನು ಸಿಕ್ಕಿದೆ. ಪ್ರಕರಣದಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಗೆ ಸುಪ್ರಿಂ ಕೋರ್ಟ್ ನಿಂದ ಜಾಮೀನು ಸಿಕ್ಕಿತ್ತು.

2008ರ ಸೆಪ್ಟಂಬರ್ 29ರಂದು ಮಹಾರಾಷ್ಟ್ರದ ರಾಜಧಾನಿ ಮುಂಬೈನಿಂದ ಸುಮಾರು 270 ಕಿ.ಮೀ. ದೂರದಲ್ಲಿರುವ ಮಾಲೆಗಾಂವ್ ನಲ್ಲಿ ಅವಳಿ ಬಾಂಬ್ ಗಳು ಸ್ಫೋಟಗೊಂಡಿತ್ತು. ಸ್ಫೋಟಕಗಳನ್ನು ಪೂರೈಸಿ, ಸಂಚು ರೂಪಿಸಿದ ಆರೋಪ ಕರ್ನಲ್ ಪುರೋಹಿತ್ ಸೇರಿದಂತೆ ಹಲವರ ಮೇಲೆ ಕೇಳಿ ಬಂದಿತ್ತು.
2008ರ ಸೆಪ್ಟಂಬರ್ 29ರಂದು ಮಹಾರಾಷ್ಟ್ರದ ರಾಜಧಾನಿ ಈ ಪ್ರಕರಣದ ಆರೋಪಿಗಳಾಗಿ ಸಾಧ್ವಿ ಪ್ರಗ್ಯಾ ಸಿಂಗ್, ಪುಣೆಯ ಅಭಿನವ್ ಭರತ್, ಸೇನಾಧಿಕಾರಿ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರನ್ನು ಮೋಕಾ ಕಾಯ್ದೆಯಡಿ ಪೊಲೀಸರು ಬಂಧಿಸಿ, ಜೈಲಿಗೆ ಕಳಿಸಿದ್ದರು. ಆದರೆ, Maharashtra Control of Organised Crimes Act (ಮೋಕಾ) ಕಾಯ್ದೆ ಅಡಿಯಲ್ಲಿ ಸಾಧ್ವಿ ವಿರುದ್ಧ ಹಾಕಲಾದ ಆರೊಪಗಳೆಲ್ಲವೂ ತಿರಸ್ಕರಿಸಲ್ಪಟ್ಟಿದೆ.












Click it and Unblock the Notifications