ಮಹಾರಾಷ್ಟ್ರ ಶಾಸಕಾಂಗ ನಾಯಕರ ಆಯ್ಕೆಗೆ ಇಂದು ಬಿಜೆಪಿ ಸಭೆ
ಮುಂಬೈ, ಅಕ್ಟೋಬರ್ 30: ಅತಂತ್ರ ವಿಧಾನಸಭೆಯಿಂದಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಗೊಂದಲದಲ್ಲಿರುವ ಬಿಜೆಪಿಯ ಶಾಸಕಾಂಗ ಸಭೆ ಇಮದು ನಡೆಯಲಿದ್ದು, ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ.
ಹಾಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೇ ಶಾಸಕಾಂಗ ಪಕ್ಷದ ನಾಯಕರಾಗುವುದು ಬಹುತೇಕ ಖಚಿತವಾಗಿದ್ದು, ಬಿಜೆಪಿ 105 ಚುನಾಯಿತ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಅಕ್ಟೋಬರ್ 24 ರಂದು ಹೊರಬಿದ್ದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಚುನಾವಣಾಪೂರ್ವ ಮೈತ್ರಿ ಮಾಡೀಕೊಂಡಿದ್ದ ಈ ಪಕ್ಷಗಳು ಫಲಿತಾಂಶದ ನಂತರ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಿತ್ತಾಡುತ್ತಿವೆ. ಮುಖ್ಯಮಂತ್ರಿ ಸ್ಥಾನವನ್ನು ಬಿಟ್ತುಕೊಡಲು ಬಿಜೆಪಿ ಸಿದ್ಧವಿಲ್ಲ, ಶಿವಸೇನೆಗೆ ಉಪಮುಖ್ಯಮಂತ್ರಿ ಸ್ಥಾನ ಬೇಕಿಲ್ಲ. ಆದ್ದರಿಂದಲೇ ಎರಡೂವರೆ ವರ್ಷ ಬಿಜೆಪಿ, ಮತ್ತೆರಡೂವರೆ ವರ್ಷ ಬಿಜೆಪಿ ಮುಖ್ಯಮಂತ್ರಿ ಹುದ್ದೆ ಪಡೆಯಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಗಿದೆ.
ಆದರೆ ಅದಕ್ಕೆ ಬಿಜೆಪಿ ಸಿದ್ಧವಿಲ್ಲ. 50:50 ಸೂತ್ರ ಕೇವಲ ಬಾಯಿಮಾತಾಗದೆ ಲಿಖಿತ ರೂಪದಲ್ಲಿರಬೇಕು ಎಂಬ ಷರತ್ತನ್ನೂ ಶಿವಸೇನೆ ಇಟ್ಟಿದೆ.












Click it and Unblock the Notifications