ಗೋಡ್ಸೆಯನ್ನು ವೈಭವೀಕರಿಸಿ, ವಿದೇಶಿಗರನ್ನು ಸಬರಮತಿ ಆಶ್ರಮಕ್ಕೆ ಕರೆದೊಯ್ಯುವ ಬಿಜೆಪಿ; ಸಾಮ್ನಾ
ಮುಂಬೈ, ಏಪ್ರಿಲ್, 23: ಬಿಜೆಪಿ ಪಕ್ಷವು ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸುತ್ತದೆ. ಆದರೆ, ಭಾರತ ಪ್ರವಾಸ ಕೈಗೊಳ್ಳುವ ವಿದೇಶಿ ಗಣ್ಯರನ್ನು ಸಬರಮತಿ ಆಶ್ರಮಕ್ಕೆ ಕರೆದೊಯ್ಯಲಾಗುತ್ತದೆ' ಎಂದು ಬಿಜೆಪಿ ವಿರುದ್ಧ ಶಿವಸೇನೆ ಹೇಳಿದೆ.
ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಈ ಬಗ್ಗೆ ಚರ್ಚಿಸಿದ್ದು, 'ಅವರು (ಬಿಜೆಪಿ) ನಾಥೂರಾಮ್ ಗೋಡ್ಸೆಯ ಸಿದ್ಧಾಂತವನ್ನು ಬೆಂಬಲಿಸುತ್ತಾರೆ ಎಂಬುದು ಆಶ್ಚರ್ಯಕರವಾಗಿದೆ. ಆದರೆ ವಿದೇಶಿ ಅತಿಥಿಗಳು ಭಾರತಕ್ಕೆ ಬಂದಾಗ ನೂಲು ನೇಯಲು ಅವರನ್ನು ಗಾಂಧಿಯವರ ಸಬರಮತಿ ಆಶ್ರಮಕ್ಕೆ ಕರೆದೊಯ್ಯುತ್ತಾರೆ,' ಎಂದು ಶಿವಸೇನೆ ಬರೆದುಕೊಂಡಿದೆ.
ಕೇಂದ್ರದ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಸಂಪಾದಕೀಯದಲ್ಲಿ ವಾಗ್ದಾಳಿ ನಡೆಸಲಾಗಿದ್ದು, ಗುಜರಾತ್‌ನಲ್ಲಿ ಏಕತೆಯ ಪ್ರತಿಮೆ ಇದ್ದರೂ ಸಹ ವಿದೇಶಿ ಗಣ್ಯರನ್ನು ಸಬರಮತಿ ಆಶ್ರಮಕ್ಕೆ ಕರೆದುಕೊಂಡು ಹೋಗಲಾಗುತ್ತದೆ ಎಂದು ಹೇಳಿದೆ.

ಪ್ರಧಾನಿ ಮೋದಿ ಅವರು ವಿಶ್ವವೇ ತಿರುಗಿ ನೋಡುವ ಹಾಗೆ ಗುಜರಾತ್‌ನಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಿದೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸಹಿತ ಭಾರತದ ಪ್ರವಾಸ ಕೈಗೊಳ್ಳುವ ವಿದೇಶಿಯ ರಾಷ್ಟ್ರೀಯ ನಾಯಕರನ್ನು ಪಟೇಲ್ ಅವರ ಪ್ರತಿಮೆಗೆ ಭೇಟಿ ಮಾಡಿಸುವುದಿಲ್ಲ ಎಂದು ಪತ್ರಿಕೆಯಲ್ಲಿ ಬರೆದುಕೊಳ್ಳಲಾಗಿದೆ.

ಕೋಮು-ಗಲಭೆ, ಹಿಂಸಾಚಾರ ಶಿವಸೇನೆ ಬಿಜೆಪಿಗೆ ತರಾಟೆ
ಇನ್ನು ಕೋಮು-ಗಲಭೆ ಹಾಗೂ ಹಿಂಸಾಚಾರದಿಂದ ದೇಶದಲ್ಲಿ ಬೇರೆ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಹಿಂಸಾಚಾರದ ವಿಷಯಗಳ ಬಗ್ಗೆ ಶಿವಸೇನೆಯ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಹಿಂಸಾಚಾರವನ್ನು ತಡೆಯುವಲ್ಲಿ ಬಿಜೆಪಿ ಕಡೆಯಿಂದ ತಡೆಯಲು ಸಾಧ್ಯವಾಗುತ್ತಿಲ್ಲವೆಂದು ದೇಶದಲ್ಲಿ ನಡೆದಿರುವ ಅನೇಕ ಗಲಭೆಗಳ ಕುರಿತು ಶಿವಸೇನೆ ಬಿಜೆಪಿಯ ವಿರುದ್ಧ ಅಸಮಾಧನವನ್ನು ಪತ್ರಿಕೆಯಲ್ಲಿ ವ್ಯಕ್ತಪಡಿಸಿದೆ.












Click it and Unblock the Notifications