ಮಹಾರಾಷ್ಟ್ರದಲ್ಲಿ ಗೆಲುವಿನತ್ತ ಬಿಜೆಪಿ, ಶಿವಸೇನೆ: ಬಿಜೆಪಿಗೆ ವೈಯಕ್ತಿಕ ಹಿನ್ನಡೆ

ಮುಂಬೈ, ಅಕ್ಟೋಬರ್ 24: ಹರ್ಯಾಣಾ ವಿಧಾನಸಭೆ ಚುನಾವಣೆಯಲ್ಲಿ ಅಲ್ಪ ಹಿನ್ನಡೆ ಅನುಭವಿಸುತ್ತಿರುವ ಬಿಜೆಪಿ ದೊಡ್ಡ ರಾಜ್ಯ ಮಹಾರಾಷ್ಟ್ರದಲ್ಲಿ ಮಾತ್ರ ಸ್ಪಷ್ಟ ಗೆಲುವಿನತ್ತ ದಾಪುಗಾಲು ಹಾಕಿದೆ.

ಮತೆಣಿಕೆ ಪ್ರಾರಂಭವಾಗಿ 3 ಗಂಟೆ ಬಳಿಕ ಬಿಜೆಪಿ, ಶಿವಸೇನೆ ಮೈತ್ರಿಯು 182 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ. ಕಾಂಗ್ರೆಸ್, ಎನ್‌ಸಿಪಿ ಮೈತ್ರಿಯು 87 ಸ್ಥಾನಗಳಲ್ಲಿಯಷ್ಟೆ ಮುನ್ನಡೆ ಸಾಧಿಸಿ ಹಿಂದುಳಿದಿದೆ. ಇನ್ನುಳಿದ ಸ್ಥಾನಗಳಲ್ಲಿ ಇತರೆ ಪಕ್ಷ ಹಾಗೂ ಪಕ್ಷೇತರರು ಮುನ್ನಡೆಯಲ್ಲಿದ್ದಾರೆ.

ಬಿಜೆಪಿ ಮತ್ತು ಶಿವಸೇನೆಯ ಮೈತ್ರಿ ಸ್ಪಷ್ಟ ಬಹುಮತಗಳಿಸುವತ್ತ ದಾಪುಗಾಲು ಹಾಕಿದೆಯಾದರೂ ಏಕೈಕ ಪಕ್ಷವಾಗಿ ಬಿಜೆಪಿ ಹಿಂದೆ ಉಳಿದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 122 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ 100 ಕ್ಕಿಂತ ಹೆಚ್ಚು ಗೆಲ್ಲುವುದು ಕಷ್ಟವಾಗಲಿದೆ.

 BJP, Shivsena Coalitioin Going To Win Maharashtra

ಬಿಜೆಪಿ ಮೈತ್ರಿ ಪಕ್ಷ ಶಿವಸೇನೆ ಉತ್ತಮವಾಗಿ ಮುನ್ನುಗ್ಗುತ್ತಿದ್ದ 11 ಗಂಟೆ ವೇಳೆಗೆ ಶಿವಸೇನೆಯು ಏಕೈಕ ಪಕ್ಷವಾಗಿ 70 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ವಿಧಾನಸಭೆ ಚುನಾವಣೆಗಿಂತಲೂ ಇದು ಉತ್ತಮ ಪ್ರದರ್ಶನವಾಗಿದೆ.

ಶಿವಸೇನೆ ಗೆಲ್ಲುವ ಸ್ಥಾನಗಳು ಬಿಜೆಪಿ ಸ್ಥಾನಗಳಿಗೂ ಹೆಚ್ಚು ಅಂತರ ಇಲ್ಲದಿದ್ದ ಪಕ್ಷದಲ್ಲಿ ಬಿಜೆಪಿಗೆ ಸರ್ಕಾರ ನಡೆಸುವುದು ಕಷ್ಟಕರವಾಗಲಿದೆ. ಸರ್ಕಾರದ ಮೂಗುದಾರ ಶಿವಸೇನೆ ಪಾಲಾಗಲಿದೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಎನ್‌ಸಿಪಿ ಮೈತ್ರಿ ನಿರೀಕ್ಷೆಯಂತೆಯೇ ಹಿಂದೆ ಉಳಿದಿದೆ. ಎರಡೂ ಪಕ್ಷ ಸೇರಿ 100 ಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳಲ್ಲಿ ಅಷ್ಟೆ ಮುನ್ನಡೆ ಸಾಧಿಸಿದೆ. ಏಕೈಕ ಪಕ್ಷವಾಗಿ ಕಾಂಗ್ರೆಸ್‌ಗಿಂತಲೂ ಎನ್‌ಸಿಪಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಲಕ್ಷಣಗಳು ಗೋಚರಿಸುತ್ತಿವೆ.

ಏಕೈಕ ಪಕ್ಷವಾಗಿ ಕಾಂಗ್ರೆಸ್‌ 40 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದ್ದರೆ, ಎನ್‌ಸಿಪಿಯು 53 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು 11 ಗಂಟೆಯ ಮತೆಣಿಕೆ ಟ್ರೆಂಡ್ ಹೇಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+