ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ "ನವ-ಹಿಂದುತ್ವವಾದಿಗಳಿಂದ" ಪೂರ್ವ ವಿಭಜನೆ ವಾತಾವರಣ ಸೃಷ್ಟಿ: ಶಿವಸೇನೆ ವಾಗ್ದಾಳಿ

|
Google Oneindia Kannada News

ಮುಂಬೈ, ಏಪ್ರಿಲ್ 12: ದೇಶದಲ್ಲಿ ಪಸ್ತುತ ನಡೆಯುತ್ತಿರುವ ಕೋಮು ಸಂಘರ್ಷಗಳ ವಿಚಾರದಲ್ಲಿ ಬಿಜೆಪಿಯ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ. ಬಿಜೆಪಿಯ ಹಿಂದುತ್ವವು ಸ್ವಾರ್ಥದ್ದು ಮತ್ತು ಪೊಳ್ಳು ಎಂದು ಟೀಕೆ ಮಾಡಿರುವ ಬಿಜೆಪಿಯ ಮಾಜಿ ಮಿತ್ರ ಪಕ್ಷ ಶಿವಸೇನೆ, ಬಿಜೆಪಿಯ "ನವ-ಹಿಂದುತ್ವವಾದಿಗಳು" ದೇಶದಲ್ಲಿ ವಿಭಜನೆಯ ಪೂರ್ವ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ದೂರಿದೆ.

ಶಿವಸೇನೆಯ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ಬಿಜೆಪಿಗೂ ಹಿಂದುತ್ವಕ್ಕೂ ಯಾವುದೇ ಸಂಬಂಧವಿಲ್ಲ. ಬಿಜೆಪಿಗೆ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಬಿರುಕು ಮೂಡಿಸುವುದನ್ನು ಬಿಟ್ಟು ಬೇರೆ ಯಾವುದೇ ಅಜೆಂಡಾ ಇಲ್ಲ ಎಂದು ಆರೋಪ ಮಾಡಿದೆ.

The Kashmir Files: 'ಗುಜರಾತ್ ಚುನಾವಣೆ ಮೇಲೆ ಕಣ್ಣಿಟ್ಟು ಬಿಜೆಪಿಯಿಂದ ಸಿನಿಮಾ ಪ್ರಚಾರThe Kashmir Files: 'ಗುಜರಾತ್ ಚುನಾವಣೆ ಮೇಲೆ ಕಣ್ಣಿಟ್ಟು ಬಿಜೆಪಿಯಿಂದ ಸಿನಿಮಾ ಪ್ರಚಾರ

ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಮರಾಠಿ ದೈನಿಕವು 'ಹನುಮಾನ್ ಚಾಲೀಸಾ' (ಹಿಂದೂ ಭಕ್ತಿ ಗೀತೆ) ನುಡಿಸುವ ಕಾರಣದಿಂದಾಗಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಹಿಂದೆ ಸರಿಯಲು ಹೊರಡುವುದಾದರೆ ಪರವಾಗಿಲ್ಲ ಎಂದು ಹೇಳಿದೆ.

BJPs Neo-Hindutvavadis Creating Pre-Partition Like Atmosphere Says Shiv Sena

ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾಕ್ಕೆ ಶಿವಸೇನೆ ಟೀಕೆ

ಮಸೀದಿಗಳ ಹೊರಗೆ 'ಹನುಮಾನ್ ಚಾಲೀಸಾ' ನುಡಿಸುವ ಮೂಲಕ ಕಾಶ್ಮೀರಿ ಪಂಡಿತರ ಸಮಸ್ಯೆಗಳು, ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಬಹುದೇ ಎಂದು ಪಕ್ಷವು ಪ್ರಶ್ನಿಸಿದೆ. "ಬಿಜೆಪಿಯ ಹಿಂದುತ್ವ ಸ್ವಾರ್ಥ ಉಳ್ಳದ್ದು ಮತ್ತು ಪೊಳ್ಳು ಎಂಬುದು ಸ್ಪಷ್ಟವಾಗಿದೆ. ಚುನಾವಣೆಯ ಮತ ಬ್ಯಾಂಕ್‌ಗಾಗಿ ಈ ಬಿಜೆಪಿಯ ಜನರು ಗಲಭೆಗಳನ್ನು ರೂಪಿಸುವ ಮತ್ತು ಬಿರುಕು ಸೃಷ್ಟಿಸುವಲ್ಲಿ ತೊಡಗಿದ್ದಾರೆ ಎಂಬ ಅನುಮಾನ ನಿಜವಾಗಿಯೂ ಬಲವಾಗುತ್ತಿದೆ," ಎಂದು ಶಿವಸೇನೆ ಹೇಳಿದೆ.

ಉತ್ತರ ಪ್ರದೇಶ: ಸೋಲುವ ಭಯದಲ್ಲಿ ಬಿಜೆಪಿ ಆರೋಪ ಮಾಡುತ್ತಿದೆ ಎಂದ ರಾವತ್ಉತ್ತರ ಪ್ರದೇಶ: ಸೋಲುವ ಭಯದಲ್ಲಿ ಬಿಜೆಪಿ ಆರೋಪ ಮಾಡುತ್ತಿದೆ ಎಂದ ರಾವತ್

"ಬಿಜೆಪಿಯ ನವ-ಹಿಂದುತ್ವವಾದಿಗಳು ವಿಭಜನೆಯಂತಹ ಪೂರ್ವಭಾವಿ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ," ಎಂದು ಪ್ರತಿಪಾದಿಸಿದ ಶಿವಸೇನೆ, ಹಿಜಾಬ್ ವಿವಾದ ಮತ್ತು ಮುಸ್ಲಿಮರು ದೇವಾಲಯಗಳ ಹೊರಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂಬಂತಹ ಕೆಲವು ಬಲಪಂಥೀಯ ಗುಂಪುಗಳ ಬೇಡಿಕೆಯನ್ನು ಉಲ್ಲೇಖ ಮಾಡಿದೆ.

ಗಮನಾರ್ಹವಾಗಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಇತ್ತೀಚೆಗೆ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಇದನ್ನು ನಿಲ್ಲಿಸದಿದ್ದರೆ, "ಮಸೀದಿಗಳ ಹೊರಗೆ ಸ್ಪೀಕರ್‌ಗಳಲ್ಲಿ ಹೆಚ್ಚಿನ ಧ್ವನಿಯಲ್ಲಿ 'ಹನುಮಾನ್ ಚಾಲೀಸಾ' ನುಡಿಸಲಾಗುವುದು," ಎಂದು ಹೇಳಿದ್ದಾರೆ.

BJPs Neo-Hindutvavadis Creating Pre-Partition Like Atmosphere Says Shiv Sena

ಗಮನ ಬೇರೆಡೆ ಸೆಳೆಯಲು ಬಿಜೆಪಿ ಯತ್ನ

ಭಾನುವಾರ ರಾಮನವಮಿಯಲ್ಲಿ ಮಾಂಸಾಹಾರ ಬಡಿಸುವ ವಿಚಾರದಲ್ಲಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ನಡೆದ ಘರ್ಷಣೆಯನ್ನು ಉಲ್ಲೇಖಿಸಿ ಶಿವಸೇನೆಯ ಸಂಪಾದಕೀಯವು ಹಣದುಬ್ಬರ ಮತ್ತು ನಿರುದ್ಯೋಗದಂತಹ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿದೆ.

"ಧರ್ಮವು ಒಂದು ಅಫೀಮು ಮತ್ತು ಅದು ಭಾರತದಲ್ಲಿ ಪ್ರತಿದಿನವೂ ಕಂಡುಬರುವುದಿಲ್ಲ. ಜೆಎನ್‌ಯುನಲ್ಲಿ ಮಾಂಸಾಹಾರದ ಕಾರಣದಿಂದ ಹಿಂಸಾಚಾರ ನಡೆದಿದೆ. ಆದರೆ ಬಿಜೆಪಿಯು ಭಗವಾನ್ ರಾಮನ ಹೆಸರನ್ನು ಕೆಡಿಸುತ್ತಿದೆ," ಎಂದು ಶಿವಸೇನೆ ಪ್ರತಿಪಾದಿಸಿದೆ.

ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಸಂಜಯ್ ರಾವತ್

ಈ ಹಿಂದೆ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಪ್ರಚಾರ ಮಾಡುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಭಾನುವಾರ ಆರೋಪ ಮಾಡಿದ್ದಾರೆ. ಚಿತ್ರದಲ್ಲಿ ಹಲವಾರು "ಕಠಿಣ ಸತ್ಯಗಳನ್ನು" ಹತ್ತಿಕ್ಕುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಕೂಡಾ ಆರೋಪಿಸಿದ್ದಾರೆ.

ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ತಮ್ಮ ಸಾಪ್ತಾಹಿಕ ಅಂಕಣ 'ರೋಖ್‌ಥೋಕ್'ನಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್, ಕಾಶ್ಮೀರಕ್ಕೆ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರನ್ನು ಹಿಂದಿರುಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಬಿಜೆಪಿಯ ಭರವಸೆಯಾಗಿದೆ. ಆದರೆ 370 ನೇ ವಿಧಿಯನ್ನು ರದ್ದುಗೊಳಿಸಿದರೂ ಅದೇ ಸಂಭವಿಸಿಲ್ಲ. ಅದು ಯಾರ ವೈಫಲ್ಯ ಎಂದು ತಿಳಿಯಬೇಕು," ಎಂದು ಉಲ್ಲೇಖ ಮಾಡಲಾಗಿದೆ.

English summary
BJP's "Neo-Hindutvavadis" Creating Pre-Partition Like Atmosphere Says Shiv Sena.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X