• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

KBC ಯಲ್ಲಿ ಕೋಟಿ ಗೆದ್ದ ಬಿನಿತಾ ಜೈನ್ ಹಿಂದೊಂದು ಕರುಣಾಜನಕ ಕತೆ!

|

ಮುಂಬೈ, ಅಕ್ಟೋಬರ್ 03: 'ಕೆಲಸದ ಮೇಲೆ ಸದಾ ಬೇರೆ ಬೇರೆ ಊರುಗಳಿಗೆ ತೆರಳುತ್ತಿದ್ದ ಪತಿ ಒಂದು ದಿನ ವಾಪಸ್ ಬರಲಿಲ್ಲ. ಪೊಲೀಸರಿಗೆ ದೂರು ನೀಡಿ, ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾಯ್ತು. ಆದರೆ ಅವರನ್ನು ಭಯೋತ್ಪಾದಕರು ಅಪಹರಿಸಿದ್ದಾರೆ ಎಂಬುದು ತಿಳಿಯಿತು. ಅಲ್ಲಿಯವರೆಗೂ ಸುಲಲಿತವಾಗಿ ನಡೆಯುತ್ತಿದ್ದ ಬದುಕಲ್ಲಿ ಏಕಾಏಕಿ ಸುಂಟರಗಾಳಿ ಬೀಸಿತ್ತು... ವಿಧಿಯಾಟದ ಬೊಂಬೆಗಳಾದೆವು ನಾವು...' ಎನ್ನುವಾಗ ಅವರ ಕಣ್ಣಂಚಿನಲ್ಲಿ ನೀರು. ಆದರೆ ಅದನ್ನೂ ಹತ್ತಿಕ್ಕಿ ಮುಖದಲ್ಲಿ ಎಂದೂ ಮರೆಯಾಗದ ಮಂದಹಾಸ!

ಪುಟ್ಟ ವಿಮಾನದಲ್ಲಿ ವಿಶ್ವ ಪರ್ಯಟನೆ: ಇಬ್ಬರು ಮಹಿಳೆಯರ ಸಾಹಸಗಾಥೆ

ಸೋನಿ ಟಿವಿಯಲ್ಲಿ ಪ್ರಸಾರವಾಗುವ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಕೋಟಿ ರೂ ಗೆದ್ದ ಬಿನಿತಾ ಜೈನ್ ಕತೆ ಇದು. ಅವರು ಒಂದು ಕೋಟಿ ರೂ. ಗೆದ್ದಿದ್ದಷ್ಟೇ ಅಲ್ಲ, ಕೋಟ್ಯಂತರ ಭಾರತೀಯರ ಹೃದಯ ಗೆದ್ದರು. 1 ಕೋಟಿ ರೂ. ಗೆದ್ದು ಆಟವನ್ನು ಕ್ವಿಟ್ ಮಾಡಿದ ಮೇಲೆ 7 ಕೋಟಿ ರೂ ಮೌಲ್ಯದ ಪ್ರಶ್ನೆಗೂ ಊಹೆ ಮಾಡಿ ಸರಿ ಉತ್ತರವನ್ನೇ ಕೊಟ್ಟು ಸ್ವತಃ ಅಮಿತಾಬ್ ಬಚ್ಚನ್ ಅವರೇ ಅವಾಕ್ಕಾಗುವಂತೆ ಮಾಡಿದರು ಬಿನಿತಾ ಜೈನ್.

ಪತಿಯ ದುರಂತ ಕತೆ

ಪತಿಯ ದುರಂತ ಕತೆ

ಬಿನಿತಾ ಜೈನ್ ಅಸ್ಸಾಮಿನವರು. ಇಬ್ಬರು ಮುದ್ದು ಮಕ್ಕಳ ತಾಯಿ. ಸದಾ ಒಂದಿಲ್ಲೊಂದು ಕಡೆ ಬಿಸಿನೆಸ್ ಟ್ರಿಪ್ ಗೆಂದು ತೆರಳುತ್ತಿದ್ದ ಪತಿ 2003 ರಲ್ಲಿ ಒಮ್ಮೆ ಟ್ರಿಪ್ ಗೆಂದು ಹೋದವರು ವಾಪಸ್ಸಾಗಲಿಲ್ಲ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಯ್ತು. ತನಿಖೆಯ ಸಮಯದಲ್ಲಿ, ಅವರನ್ನು ಉಗ್ರರು ಅಪಹರಿಸಿದ್ದಾರೆ ಎಂಬುದು ತಿಳಿದುಬಂದು. ಅದುವರೆಗೂ ಸ್ವರ್ಗಕ್ಕೆ ಕಿಚ್ಚುಹಚ್ಚಿದಷ್ಟು ಸಂತಸದಲ್ಲಿದ್ದ ಇವರ ಬದುಕಲ್ಲಿ ಇದ್ದಕ್ಕಿದ್ದಂತೆ ಬಿರುಗಾಳಿಯೇ ಬೀಸಿತ್ತು. ಜೀವನೋಪಾಯಕ್ಕೂ ಪತಿಯ ಆದಾಯದ ಮೇಲೆಯೇ ಅವಲಂಬಿತರಾಗಿದ್ದ ಬಿನಿತಾ ಮತ್ತುವರ ಕುಟುಂಬಕ್ಕೆ ಬದುಕೇ ತೋಚಲಿಲ್ಲ. ಪತಿ ಇಂದು ಬರಬಹುದು, ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲೇ ಬದುಕು ಕಳೆಯುತ್ತಿತ್ತು. ಈಗಲೂ ಅದೇ ನಿರೀಕ್ಷೆ! ಹೊತ್ತಲ್ಲದ ಹೊತ್ತಲ್ಲಿ ಬಾಗಿಲು ತಟ್ಟಿದ ಶಬ್ದವಾದರೆ ಏನೋ ಭರವಸೆ... ಪತಿಯೇ ಬಾಗಿಲೆದುರು ಬಂದು ನಿಂತಿರಬಹುದು ಎಂದು!

ಜೀವನೋಪಾಯಕ್ಕಾಗಿ ಟ್ಯೂಷನ್

ಜೀವನೋಪಾಯಕ್ಕಾಗಿ ಟ್ಯೂಷನ್

ಸುಮಾರು 125 ಕ್ಕೂ ಹೆಚ್ಚು ಮಕ್ಕಳಿಗೆ ಟ್ಯೂಶನ್ ಇಂಗ್ಲೀಶ್ ಮತ್ತು ಸಮಾಜ ವಿಜ್ಞಾನದ ಟ್ಯೂಷನ್ ನೀಡಿ ಅದೇ ಆದಾಯದಲ್ಲೇ ಮಕ್ಕಳನ್ನೂ ಓದಿಸಿದ್ದಾರೆ ಬಿನಿತಾ. ಪುತ್ರ ದಂತವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರೆ, ಮಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳಿಗೂ ತಾಯಿ ಎಂದರೆ ಅಚ್ಚುಮೆಚ್ಚು.

ಮೋದಿ ಬಾಯ್ತುಂಬ ಹೊಗಳಿದ ಬೆಂಗಳೂರಿನ ಆದರ್ಶ ಶಿಕ್ಷಕಿ ಶೈಲಾ

ಮಕ್ಕಳೊಂದಿಗೆ ಪದವಿ ಪಡೆದ ತಾಯಿ

ಮಕ್ಕಳೊಂದಿಗೆ ಪದವಿ ಪಡೆದ ತಾಯಿ

ತಾವು ಟ್ಯೂಷನ್ ಮಾಡುತ್ತ, ಮಕ್ಕಳಿಗೂ ಓದಿಸುತ್ತ, ಮನೆಯಲ್ಲೇ ಕುಳಿತು ಎರಡು ಪದವಿ ಪಡೆದವರು ಬಿನಿತಾ ಜೈನ್. ತಮ್ಮ ಅಸ್ಸಾಂ ರಾಜ್ಯದ ಕಲೆ, ಸಂಸ್ಕೃತಿಯ ಮೇಲೆ ವಿಪರೀತ ಎಂಬಷ್ಟು ಅಭಿಮಾನ ಹೊಂದಿರುವ ಬಿನಿತಾ ಕೋಟಿ ಗೆದ್ದರೂ ಹೆಚ್ಚು ಬೀಗಲಿಲ್ಲ. ಕೊನೆಯವರೆಗೂ ಸ್ಥಿತಪ್ರಜ್ಞತೆ ಕಾಯ್ದುಕೊಂಡು ಕೋಟ್ಯಂತರ ಜನರ ಹೃದಯದಲ್ಲಿ ಮನೆ ಮಾಡಿದರು.

7 ಕೋಟಿ ಮೌಲ್ಯದ ಪ್ರಶ್ನೆಗೂ ಸರಿಯಾದ ಉತ್ತರ!

7 ಕೋಟಿ ಮೌಲ್ಯದ ಪ್ರಶ್ನೆಗೂ ಸರಿಯಾದ ಉತ್ತರ!

ಒಂದು ಕೋಟಿ ರೂ, ಗೆದ್ದ ನಂತರ ಆಟವನ್ನು ಬಿನಿತಾ ಜೈನ್ ಕ್ವಿಟ್ ಮಾಡಿದರಾದರೂ, 7 ಕೋಟಿ ರೂ. ಮೌಲ್ಯದ ಪ್ರಶ್ನೆಗೆ ಊಹಿಸಿದ ನೀಡಿದ ಉತ್ತರವೂ ಸರಿಯಾಗಿತ್ತು. ಅವರ ಜ್ಞಾನವನ್ನು ಕಂಡು ಸ್ವತಃ ಬಿಗ್ ಬಿ ಅಮಿತಾಬ್ ಬಚ್ಚನ್ ಅವಾಕ್ಕಾದರು! ವೈಯಕ್ತಿಕವಾಗಿ ಸಾಕಷ್ಟು ಪೆಟ್ಟು ತಿಂದರೂ ಅದನ್ನು ತೋರಿಸಿಕೊಳ್ಳದೆ, ಮುಖದಲ್ಲಿ ಸದಾ ಮಂದಹಾಸ ಉಳಿಸಿಕೊಂಡು, ಸಾಕಷ್ಟು ಜ್ಞಾನವಿದ್ದರೂ ಅಹಂಕಾರ ಪ್ರದರ್ಶಿಸದೆ ಸೀಸನ್ 10 ರಲ್ಲಿ ಕೋಟಿ ರೂ. ಗೆದ್ದ ಮೊದಲ ಸ್ಪರ್ಧಿಯಾಗಿ ಬಿನಿತಾ ಜೈನ್ ಎಲ್ಲರಿಗೂ ಇಷ್ಟವಾದರು.

ವೈರಲ್ ವಿಡಿಯೋ:ರೈತರೂ ಕೋಟ್ಯಧಿಪತಿಗಳಾಗಬಹುದು ಅಂತಾರೆ ರಾಯಚೂರಿನ ಕವಿತಾ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Binita Jain, who won Rs.1 crore in Amitab Bachchan's Kaun Banega Crorepati shared her tragic story with Big B. Her husband was kidnapped by terrorists in 2003, and she doesn't know any updates about him yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more