ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಪೂರ್ಜಿ ಪಲ್ಲೋಂಜಿ ಗ್ರೂಪ್‌ ಅಧ್ಯಕ್ಷರಾಗಿದ್ದ ಪಲ್ಲೋಂಜಿ ಮಿಸ್ತ್ರಿ ನಿಧನ

|
Google Oneindia Kannada News

ಮುಂಬೈ, ಜೂನ್ 28: ಶಾಪೂರ್ಜಿ ಪಲ್ಲೋಂಜಿ ಸಮೂಹದ ಅಧ್ಯಕ್ಷ, ಬಿಲಿಯನೇರ್ ಕೈಗಾರಿಕೋದ್ಯಮಿ ಪಲ್ಲೋಂಜಿ ಮಿಸ್ತ್ರಿ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಸೈರಸ್‌ ಮಿಸ್ತ್ರಿ, ಶಾಪೂರ್‌ ಮಿಸ್ತ್ರಿ ಎಂಬ ಇಬ್ಬರು ಪುತ್ರರಲ್ಲದೆ, ಪಲ್ಲೋಂಜಿ ಮಿಸ್ತ್ರಿ ಅವರಿಗೆ ಲೈಲಾ ಮತ್ತು ಆಲೂ ಎಂಬ ಇಬ್ಬರು ಪುತ್ರಿಯರು ಇದ್ದಾರೆ. ಪಲ್ಲೋಂಜಿ ಮಿಸ್ತ್ರಿ ಅವರು ರತನ್ ಟಾಟಾ ಮಲಸಹೋದರಿ ನೋಯೆಲ್ ಟಾಟಾ ಅವರನ್ನು ವಿವಾಹವಾಗಿದ್ದರು.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅವರ ಸಂಪತ್ತು 9 ಏಪ್ರಿಲ್ 2021 ರಂತೆ 28 ಶತಕೋಟಿ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ. ಗುಜರಾತ್‌ನ ಪಾರ್ಸಿ ಕುಟುಂಬದಲ್ಲಿ ಜನಿಸಿದರು. ಭಾರತದ ಅತಿ ಶ್ರೀಮಂತರಲ್ಲಿ ಮಿಸ್ತ್ರಿ ಒಬ್ಬರು.

ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಸಂಪತ್ತು ಎಷ್ಟು ಹೆಚ್ಚಿದೆ ಗೊತ್ತೇ?ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಸಂಪತ್ತು ಎಷ್ಟು ಹೆಚ್ಚಿದೆ ಗೊತ್ತೇ?

1865ರಲ್ಲಿ ಸ್ಥಾಪನೆಯಾದ ಎಸ್‌ಪಿ ಗ್ರೂಪ್ ಮುಖ್ಯವಾದ ಕಟ್ಟಡಗಳ ನಿರ್ಮಾಣಕ್ಕೆ ಹೆಸರಾಗಿದೆ. ಹಾಂಗ್ ಕಾಂಗ್ ಮತ್ತು ಶಾಂಘೈ ಬ್ಯಾಂಕ್, ಗ್ರಿಂಡ್ಲೇಸ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಟ್ಟಡಗಳ ನಿರ್ಮಾಣ ಮಾಡಿದ ಹೆಗ್ಗಳಿಕೆ ಇವರಿಗಿದೆ.

50 ಸಾವಿರ ಮಂದಿಗೆ ಉದ್ಯೋಗ

50 ಸಾವಿರ ಮಂದಿಗೆ ಉದ್ಯೋಗ

ಶಾಪೂರ್ಜಿ ಪಲ್ಲೋಂಜಿ ಸಮೂಹವು ಇಂಜಿನಿಯರಿಂಗ್ ಮತ್ತು ನಿರ್ಮಾಣ, ಮೂಲಸೌಕರ್ಯ, ರಿಯಲ್ ಎಸ್ಟೇಟ್, ನೀರು, ಇಂಧನ ಮತ್ತು ಹಣಕಾಸು ಉದ್ಯಮದಲ್ಲಿ ತೊಡಗಿಸಿಕೊಂಡಿದೆ ಹೊಂದಿದೆ. 50,000 ಕ್ಕೂ ಹೆಚ್ಚು ಉದ್ಯೋಗಿಗಳೊಂದಿಗೆ, 50 ರಾಷ್ಟ್ರಗಳಲ್ಲಿ ವಹಿವಾಟು ಹೊಂದಿದೆ. ಟಾಟಾ ಸಮೂಹದ ಮೂಲ ಕಂಪನಿಯಾದ ಟಾಟಾ ಸನ್ಸ್‌ನಲ್ಲಿ ಪಲ್ಲೋಂಜಿ ಕುಟುಂಬವು ಶೇಕಡ 18.4 ಪಾಲು ಹೊಂದಿದೆ.

ಸೈರಸ್ ಮಿಸ್ತ್ರಿ ವಿರುದ್ಧ 500 ಕೋಟಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಸೈರಸ್ ಮಿಸ್ತ್ರಿ ವಿರುದ್ಧ 500 ಕೋಟಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ

ವಿದೇಶಗಳಲ್ಲೂ ವಿಸ್ತರಿಸಿದ ಉದ್ಯಮ

ವಿದೇಶಗಳಲ್ಲೂ ವಿಸ್ತರಿಸಿದ ಉದ್ಯಮ

ಪಲ್ಲೋಂಜಿ ಮಿಸ್ತ್ರಿ ಅವರು 1970 ರಲ್ಲಿ ಅಬುಧಾಬಿ, ಕತಾರ್ ಮತ್ತು ದುಬೈ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಉದ್ಯಮವನ್ನು ವಿಸ್ತರಿಸಿದರು. ಇದು 1971 ರಲ್ಲಿ ಓಮನ್‌ನ ಅರಮನೆಯ ಸುಲ್ತಾನ್ ಮತ್ತು ಅಲ್ಲಿ ಅನೇಕ ಮಂತ್ರಿ ಕಟ್ಟಡಗಳನ್ನು ನಿರ್ಮಿಸುವ ಕಾಂಟ್ರಾಕ್ಟ್‌ ಪಡೆದುಕೊಂಡರು. ಅವರ ಮೇಲ್ವಿಚಾರಣೆಯಲ್ಲಿ, ವ್ಯಾಪಾರವು ರಿಯಲ್ ಎಸ್ಟೇಟ್, ನೀರು, ಶಕ್ತಿ ಮತ್ತು ಹಣಕಾಸು ಸೇವೆಗಳನ್ನು ಒಳಗೊಂಡಿರುವ ಒಂದು ಸಂಘಟಿತ ಉದ್ಯಮ ಸಾಮ್ರಾಜ್ಯವಾಗಿ ಅಭಿವೃದ್ಧಿಗೊಂಡಿತು.

2016ರಲ್ಲಿ ಪದ್ಮಭೂಷಣ ಪ್ರಶಸ್ತಿ

2016ರಲ್ಲಿ ಪದ್ಮಭೂಷಣ ಪ್ರಶಸ್ತಿ

2004 ರಲ್ಲಿ ಅವರ ಹಿರಿಯ ಮಗ ಶಾಪೂರ್ ಮಿಸ್ತ್ರಿ ಎಸ್‌ಪಿ ಗ್ರೂಪ್ ಕಂಪನಿಗಳ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮಿಸ್ತ್ರಿ ನೇಪಥ್ಯಕ್ಕೆ ಸರಿದರು.

2016 ರಲ್ಲಿ, ಅವರು ಕೈಗಾರಿಕೋದ್ಯಮಿಯಾಗಿ ಅವರ ಕೊಡುಗೆಗಾಗಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ಪಡೆದರು. ಅವರು ಭಾರತ ಕಂಡ ಅತ್ಯಂತ ಹಿರಿಯ ಬಿಲಿಯನೇರ್‌ಗಳಲ್ಲಿ ಒಬ್ಬರು.

1930 ರ ದಶಕದಲ್ಲಿ ಪಲ್ಲೋಂಜಿ ಮಿಸ್ತ್ರಿ ತಂದೆ ಮೊದಲು ಟಾಟಾ ಸನ್ಸ್‌ನಲ್ಲಿ ಷೇರುಗಳನ್ನು ಖರೀದಿಸಿದರು, ಇಂದು ಪ್ರಸ್ತುತ ಶೇಕಡಾ 18.4 ರಷ್ಟಿರುವ ಪಾಲನ್ನು ಹೊಂದಿದ್ದು, ಟಾಟಾ ಸನ್ಸ್‌ನಲ್ಲಿ ಮಿಸ್ತ್ರಿ ಅತಿದೊಡ್ಡ ವೈಯಕ್ತಿಕ ಷೇರುದಾರ ಎನಿಸಿಕೊಂಡಿದ್ದಾರೆ.

ಟಾಟಾ ಗ್ರೂಪ್ ಮತ್ತು ಮಿಸ್ತ್ರಿ ಕುಟುಂಬ

ಟಾಟಾ ಗ್ರೂಪ್ ಮತ್ತು ಮಿಸ್ತ್ರಿ ಕುಟುಂಬ

ಟಾಟಾ ಗ್ರೂಪ್ ಅನ್ನು ಮುನ್ನಡೆಸಲು 2012ರಲ್ಲಿ ಪಲ್ಲೋಂಜಿ ಮಿಸ್ತ್ರಿಯವರ ಕಿರಿಯ ಮಗ ಸೈರಸ್ ಮಿಸ್ತ್ರಿ ಆಯ್ಕೆಯಾದಾಗ ಅವರ ಕುಟುಂಬವು ಜಗತ್ತಿನ ಗಮನಸೆಳೆದಿತ್ತು. ರತನ್ ಟಾಟಾ ಅವರು ನಿವೃತ್ತಿ ಘೋಷಿಸಿದ ನಂತರ ಅವರು ಡಿಸೆಂಬರ್ 2012 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಅಕ್ಟೋಬರ್ 2016 ರಲ್ಲಿ ಟಾಟಾ ಗ್ರೂಪ್ ಸೈರಸ್ ಮಿಸ್ತ್ರಿ ಅವರನ್ನು ಉಚ್ಚಾಟಿಸಿತ್ತು. ಇದು ಭಾರತದ ಕೆಟ್ಟ ಕಾರ್ಪೊರೇಟ್ ಘಟನೆಗಳಲ್ಲಿ ಒಂದೆನಿಸಿಕೊಂಡಿದೆ. ಟಾಟಾದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಟಾಟಾದ ಅಧ್ಯಕ್ಷರಾಗಿ ಸೈರಸ್ ಪಿ.ಮಿಸ್ತ್ರಿ ಅವರನ್ನು 2016 ರಲ್ಲಿ ಉಚ್ಚಾಟಿಸುವುದು ಕಾನೂನುಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಹೇಳಿತು.

2022ರ ಮೇನಲ್ಲಿ ಟಾಟಾ ವರ್ಸಸ್ ಮಿಸ್ತ್ರಿ ಕಾನೂನು ಪ್ರಕರಣದಲ್ಲಿ ಸೈರಸ್ ಮಿಸ್ತ್ರಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

English summary
Billionaire industrialist Pallonji Mistry, chairman of the Shapoorji Pallonji Group, has died at his residence in Mumbai. He was 93 years old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X