ಕಾಂಗ್ರೆಸ್ ಗೆ ಭಾರೀ ಆಘಾತ: ಶಿವಸೇನೆ ಸೇರಿದ ಪ್ರಿಯಾಂಕಾ!
ಮುಂಬೈ, ಏಪ್ರಿಲ್ 19: ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರಲ್ಲೊಬ್ಬರಾಗಿದ್ದ, ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದು ಒಂದು ಆಘಾತವಾದರೆ, ಅವರು ಕಾಂಗ್ರೆಸ್ ನ ಯಾವತ್ತಿನ ವೈರಿ ಶಿವಸೇನೆ ಸೇರಿದ್ದು ಕಾಂಗ್ರೆಸ್ಸಿಗೆ ಮತ್ತಷ್ಟು ಆಘಾತದ ವಿಷಯವಾಗಿದೆ.
ದೇಶದಾದ್ಯಂತ ಲೋಕಸಭಾ ಚುನಾವಣೆ ನಡೆಯುತ್ತಿರುವ ಹೊತ್ತಲ್ಲಿ, ಪಕ್ಷದ ನಿಷ್ಠಾವಂತ ನಾಯಕಿಯಾಗಿ ಗುರುತಿಸಿಕೊಂಡಿದ್ದ ಪ್ರಿಯಾಂಕಾ ಚತುರ್ವೇದಿ ಅವರು ರಾಜೀನಾಮೆ ನೀಡಿದ್ದು ಪಕ್ಷಕ್ಕೆ ಭಾರೀ ಹಿನ್ನಡೆ ಎನ್ನಿಸಿದೆ.

ತಮ್ಮನ್ನು ಮೂಲೆಗುಂಪು ಮಾಡುತ್ತಿರುವ ಪಕ್ಷದ ವರಿಷ್ಟರ ವರ್ತನೆಯಿಂದ ಬೇಸರಗೊಂಡು ಅವರು ರಾಜೀನಾಮೆ ನೀಡಿದ್ದಾರೆ. ಕಳೆದ ವರ್ಷ ಪ್ರಿಯಾಂಕಾ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಕೆಲವು ನಾಯಕರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಆದರೆ ಈಗ ಚುನಾವಣೆಯ ಸಮಯದಲ್ಲಿ ಅವರನ್ನೆಲ್ಲ ಮತ್ತೆ ವಾಪಸ್ ಕರೆಸಿಕೊಂಡು, ಸ್ಥಾನ ಮಾನ ನೀಡಿದ್ದನ್ನು ಒಪ್ಪದ ಪ್ರಿಯಾಂಕಾ ಪಕ್ಷದ ವಿರುದ್ಧ ಸಿಡಿದೆದ್ದು, ರಾಜೀನಾಮೆ ನೀಡಿದ್ದರು.












Click it and Unblock the Notifications