ಭೋಜಪುರಿ ನಟಿ ಫೇಸ್ಬುಕ್ ಲೈವ್ ನಂತರ ಆತ್ಮಹತ್ಯೆಗೆ ಶರಣು

ಮುಂಬೈ, ಆ.6: ಭೋಜ್ ಪುರಿ ಚಿತ್ರರಂಗದ ನಟಿಯೊಬ್ಬರು ಫೇಸ್ಬುಕ್ ಲೈವ್ ಮಾಡಿದ ನಂತರ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. 40ವರ್ಷ ವಯಸ್ಸಿನ ಅನುಪಮ ಪಾಠಕ್ ಅವರು ದಾಹಸಿರ್ ನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ನನಗೆ ಎಲ್ಲರ ಮೇಲೆ ನಂಬಿಕೆ ಹೊರಟು ಹೋಗಿದೆ. ನಾನು ವಂಚನೆಗೊಳಗಾಗಿದ್ದೇನೆ ಎಂದು ಸಾಯುವುದಕ್ಕೂ ಒಂದು ದಿನ ಮುಂಚಿತವಾಗಿ ಫೇಸ್ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದರು.

ಸಮಸ್ಯೆಯಲ್ಲಿದ್ದೇನೆ ಎಂದು ಯಾರನ್ನಾದರೂ ಸಹಾಯ ಕೇಳಿದರೆ, ಎಂಥಾ ಒಳ್ಳೆ ಸ್ನೇಹಿತರಾದರೂ ದೂರ ಉಳಿಯಲು ಯತ್ನಿಸುತ್ತಾರೆ. ನೀವು ಸತ್ತ ಬಳಿಕ ತಮ್ಮ ಮೇಲೆ ಸಮಸ್ಯೆ ಎಳೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಯಾರೊಂದಿಗೂ ನಿಮ್ಮ ಸಮಸ್ಯೆ, ಭಾವನೆಗಳನ್ನು ಹಂಚಿಕೊಳ್ಳಬೇಡಿ ಎಂದು ಫೇಸ್ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದರು.

Bhojpuri Actress Anupama Pathak Dies By Suicide At Her Residence In Mumbai

ಎಲ್ಲರೂ ಸ್ವಾರ್ಥಪರರಾಗಿದ್ದು, ನಿಮ್ಮ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದರು.

ಬಿಹಾರದ ಪೂರ್ನಿಯಾ ಜಿಲ್ಲೆಯವರಾದ ಭೋಜ್ ಪುರಿ ಸಿನಿಮಾ, ಕಿರುತೆರೆ ನಟಿ ಅನುಪಮಾ ಅವರು ಮುಂಬೈಗೆ ಕಾರ್ಯ ನಿಮಿತ್ತ ಬಂದಿದ್ದರು ಎಂದು ತಿಳಿದು ಬಂದಿದೆ.

ಮಲಾಡ್ ನಲ್ಲಿರುವ ವಿಸ್ಡಂ ನಿರ್ಮಾಣ ಸಂಸ್ಥೆ ತನಗೆ 10,000ರು ಮೋಸ ಮಾಡಿದೆ ಎಂದು ಕೂಡಾ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ. ಮನೀಶ್ ಶಾ ಎಂಬ ವ್ಯಕ್ತಿ ಆಕೆಯ ದ್ವಿಚಕ್ರ ವಾಹನ ಪಡೆದುಕೊಂಡು ಹಿಂತಿರುಗಿಸಿಲ್ಲ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+