ನಟಿ ಆಯೇಷಾಗೆ ಕಿರುಕುಳ, ಮೋದಿ, ಸುಷ್ಮಾಗೆ ಟ್ವೀಟ್ ಮಾಡಿದ ಪತಿ

ಮುಂಬೈ, ಜುಲೈ 04: ಬಾಲಿವುಡ್ ನಟಿ ಆಯೇಷಾ ಟಾಕಿಯಾ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಸಾರ್ವಜನಿಕವಾಗಿ ಆಕೆಯ ಪತ್ನಿ ಫರ್ಹಾನ್ ಆಜ್ಮಿ ಮನವಿ ಮಾಡಿಕೊಂಡ ಘಟನೆ ನಡೆದಿದೆ.

'ವಾಂಟೆಡ್' ಚಿತ್ರ ಖ್ಯಾತಿಯ ಆಯೇಷಾ, ಆಕೆಯ ಅತ್ತೆ, ನಾದಿನಿಯರಿಗೆ ಬೆದರಿಕೆ ಕರೆಗಳು ಬರುತ್ತಿವೆ. ನಮ್ಮ ಕುಟುಂಬವನ್ನು ರಕ್ಷಿಸಿ ಎಂದು ಫರ್ಹಾನ್ ಆಜ್ಮಿ ಅವರು ಮುಂಬೈ ಪೊಲೀಸರ ಐಡಿಗೆ ಟ್ಯಾಗ್ ಮಾಡಿ ಸರಣಿ ಟ್ವೀಟ್ ಮಾಡಿದ್ದಾರೆ.

ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೂ ಟ್ಯಾಗ್ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಈ ವಿಷಯವನ್ನು ಏಕೆ ಹೇಳುತ್ತಿದ್ದೀರಿ? ಪೊಲೀಸರ ನೆರವು ಕೇಳಿ ಎಂದು ಸಲಹೆ ನೀಡಿದ್ದಾರೆ.

ಆದರೆ, ಮುಂಬೈ ಪೊಲೀಸರನ್ನು ನಾನು ಸಂಪರ್ಕಿಸಿದೆ, ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಡಿಸಿಪಿ ದಾಹಿಯಾ ಅವರಿಗೆ ಅನೇಕ ಬಾರಿ ಕರೆ ಮಾಡಿದೆ ಎಂದು ಫೋನ್ ಕರೆ ಮಾಡಿದ ಪಟ್ಟಿಯನ್ನು ಕೂಡಾ ಸ್ಕ್ರೀನ್ ಶಾಟ್ ತೆಗೆದುಕೊಂಡು, ಟ್ವೀಟ್ ಮಾಡಿದ್ದಾರೆ.

ಇದಲ್ಲದೆ, ದಾಹಿಯಾ ಅವರು ಅಕ್ರಮ ಖಾತೆಯನ್ನು ಹೊಂದಿದ್ದಾರೆ ಪಿಎಂ ನರೇಂದ್ರ ಮೋದಿಜಿ ಹಾಗೂ ಸುಷ್ಮಾ ಸ್ವರಾಜ್ ಅವರೇ ದಯವಿಟ್ಟು ಈ ಕಡೆ ಗಮನ ಕೊಡಿ, ಬೇಟಿ ಬಚಾವೋ ಎಂದು ಟ್ವೀಟ್ ಮಾಡಿದ್ದಾರೆ.

ಆಯೇಷಾ ಟಾಕಿಯಾ

ಆಯೇಷಾ ಟಾಕಿಯಾ

ಇಷ್ಟಕ್ಕೂ ಆಯೇಷಾ ಟಾಕಿಯಾಗೆ ಈ ರೀತಿ ಕಾಟ ಶುರುವಾಗಲು ಆಕೆಯ ಪತಿಯೇ ಕಾರಣ. ಫರ್ಹಾನ್ ವಿರುದ್ಧ ಅವರ ಬಿಸಿನೆಸ್ ಪಾರ್ಟ್ನರ್ ಕಾಸಿಫ್ ಅವರು ವಂಚನೆ ಪ್ರಕರಣ ದಾಖಲಿಸಿದ್ದಾರೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಕಾಸಿಫ್ ಅವರು ನೀಡಿದ ದೂರಿನ ಮೇರೆಗೆ ಫರ್ಹಾನ್ ವಿರುದ್ಧ ಎಫ್ಐಆರ್ ಹಾಕಲಾಗಿದೆ. ಇವರಿಬ್ಬರ ನಡುವಿನ ಕಿತ್ತಾಟಕ್ಕೆ ಆಯೇಷಾ ಟಾಕಿಯಾ ಹಾಗೂ ಕುಟುಂಬದ ಮಹಿಳೆಯರಿಗೆ ಕಾಟ ಶುರುವಾಗಿದೆ.

ಆಯೇಷಾ ಟಾಕಿಯಾಗೆ ಕಾಟ

'ವಾಂಟೆಡ್' ಚಿತ್ರ ಖ್ಯಾತಿಯ ಆಯೇಷಾ, ಆಕೆಯ ಅತ್ತೆ, ನಾದಿನಿಯರಿಗೆ ಬೆದರಿಕೆ ಕರೆಗಳು ಬರುತ್ತಿವೆ. ನಮ್ಮ ಕುಟುಂಬವನ್ನು ರಕ್ಷಿಸಿ ಎಂದು ಫರ್ಹಾನ್ ಆಜ್ಮಿ ಅವರು ಮುಂಬೈ ಪೊಲೀಸರ ಐಡಿಗೆ ಟ್ಯಾಗ್ ಮಾಡಿ ಸರಣಿ ಟ್ವೀಟ್ ಮಾಡಿದ್ದಾರೆ

ಡಿಸಿಪಿ ದಾಹಿಯಾ ಬಗ್ಗೆ ಟ್ವೀಟ್

ಮುಂಬೈ ಪೊಲೀಸರನ್ನು ನಾನು ಸಂಪರ್ಕಿಸಿದೆ, ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಡಿಸಿಪಿ ದಾಹಿಯಾ ಅವರಿಗೆ ಅನೇಕ ಬಾರಿ ಕರೆ ಮಾಡಿದೆ ಎಂದು ಫೋನ್ ಕರೆ ಮಾಡಿದ ಪಟ್ಟಿಯನ್ನು ಕೂಡಾ ಸ್ಕ್ರೀನ್ ಶಾಟ್ ತೆಗೆದುಕೊಂಡು, ಟ್ವೀಟ್ ಮಾಡಿದ್ದಾರೆ.

apples cannot spoil #theappletree 🍎 @CPMumbaiPolice @MumbaiPolice

— Farhan Azmi (@abufarhanazmi) July 3, 2018

ಪೊಲೀಸರಿಗೆ ಥ್ಯಾಂಕ್ಸ್ ಹೇಳಿ ಮತ್ತೊಂದು ಟ್ವೀಟ್

ಇದಾದ ಬಳಿಕ, ಮುಂಬೈ ಪೊಲೀಸರು ಈ ಘಟನೆ ಬಗ್ಗೆ ವಿವರ ಪಡೆದು, ಕ್ರಮ ಕೈಗೊಂಡಿದ್ದಾರೆ. ಮೂರು ಕೆಟ್ಟ ಸೇಬುಗಳಿಂದ ಇಡೀ ಸೇಬಿನ ಮರ ಹಾಳಾಗುವುದಿಲ್ಲ ಎಂದು ಮಾರ್ಮಿಕವಾಗಿ ಮುಂಬೈ ಪೊಲೀಸರಿಗೆ ಥ್ಯಾಂಕ್ಸ್ ಹೇಳಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ನಮ್ಮ ಕುಟುಂಬವನ್ನು ರಕ್ಷಿಸಿ ಎಂದು ಟ್ವೀಟ್

'ವಾಂಟೆಡ್' ಚಿತ್ರ ಖ್ಯಾತಿಯ ಆಯೇಷಾ, ಆಕೆಯ ಅತ್ತೆ, ನಾದಿನಿಯರಿಗೆ ಬೆದರಿಕೆ ಕರೆಗಳು ಬರುತ್ತಿವೆ. ನಮ್ಮ ಕುಟುಂಬವನ್ನು ರಕ್ಷಿಸಿ ಎಂದು ಫರ್ಹಾನ್ ಆಜ್ಮಿ ಅವರು ಮುಂಬೈ ಪೊಲೀಸರ ಐಡಿಗೆ ಟ್ಯಾಗ್ ಮಾಡಿ ಸರಣಿ ಟ್ವೀಟ್ ಮಾಡಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+