ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಮಾನ್‌ಗಾಗಿ ಊಟ ಬಿಟ್ಟಿದ್ದ ಸಯಾಮಿ ಸಹೋದರಿಯರು!

By Prasad
|
Google Oneindia Kannada News

ಮುಂಬೈ, ಮೇ. 08 : ಅಂತೂ ಇಂತೂ ಸಲ್ಮಾನ್ ಖಾನ್ ನಿರಾಳರಾಗಿದ್ದಾರೆ. ಹೈಕೋರ್ಟಿಂದ ಶಿಕ್ಷೆಗೆ ತಡೆ ಸಿಕ್ಕಿದ್ದರಿಂದ ಅಭಿಮಾನಿಗಳ ಹರ್ಘೋದ್ಗಾರ ಮುಗಿಲುಮುಟ್ಟಿದೆ. ಆದರೆ, ಎಲ್ಲಕ್ಕಿಂತ ಹೆಚ್ಚು ಸಂತಸ ಪಟ್ಟವರು, ಸಲ್ಮಾನ್‌ಗಾಗಿ ಊಟ ತಿಂಡಿ ಬಿಟ್ಟು ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತಿದ್ದ ಸಯಾಮಿ ಅವಳಿಗಳಾದ ಸಾಬಾ ಮತ್ತು ಫರಾಹ್.

ಬಿಹಾರದ ಹದಿನೆಂಟು ವರ್ಷ ಸಯಾಮಿ ಅವಳಿಗಳಾದ ಸಾಬಾ ಮತ್ತು ಫರಾಹ್ ಬುಧವಾರದಿಂದ ಊಟ ಮಾಡುವುದನ್ನು ನಿಲ್ಲಿಸಿದ್ದರು. ಸಲ್ಮಾನ್‌ನ ರಾಖಿ ಸಹೋದರಿಯರೆಂದು ಅಭಿಮಾನದಿಂದ ಹೇಳಿಕೊಳ್ಳುವ ಈ ಅವಳಿಗಳು ಸಲ್ಮಾನ್ ಭಯ್ಯಾ ಈ ಸಂಕಷ್ಟದಿಂದ ಬಿಡುಗಡೆಯಾಗಲೆಂದು ಅನುಕ್ಷಣವೂ ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತಿದ್ದರು. [ಸಲ್ಮಾನ್ ಮೇಲೆ ವಿಧಿಸಿದ್ದ ಶಿಕ್ಷೆ ಅಮಾನತು]

At last, Salman fans conjoined Saba and Farah can eat now

"ಸಲ್ಮಾನ್ ಖಾನ್‌ಗೆ 5 ವರ್ಷಗಳ ಜೈಲು ಶಿಕ್ಷೆಯನ್ನು ಮುಂಬೈ ಸೆಷನ್ಸ್ ಕೋರ್ಟ್ ವಿಧಿಸುತ್ತಿದ್ದಂತೆ ಕಣ್ಣೀರುಗರೆದ ಸಾಬಾ ಮತ್ತು ಫರಾಹ್ ಊಟ ಮಾಡುವುದನ್ನು ನಿಲ್ಲಿಸಿದ್ದರು. ಅವರಿಗೆ ಸಲ್ಮಾನ್ ಜೈಲು ಸೇರಲಿರುವುದು ಆಘಾತ ತಂದಿತ್ತು" ಎಂದು ಪಟ್ನಾದ ಸಾಮಾನಪುರದವರಾದ ಅವರ ತಂದೆ ಶಕೀಲ್ ಅಹ್ಮದ್ ಅವರು ಹೇಳುತ್ತಾರೆ. [ಸಲ್ಮಾನ್ ರನ್ನು ಜೈಲಿಗೆ ಕಳಿಸಿದ ಹೀರೋ]

ಸಲ್ಮಾನ್ ಖಾನ್‌ನನ್ನು ಬಾಲ್ಯದಿಂದಲೂ ಈ ಸಹೋದರಿಯರು ಎಷ್ಟು ಹಚ್ಚಿಕೊಂಡಿದ್ದರೆಂದರೆ ಆತನಿಗೆ ರಾಖಿ ಕಟ್ಟುವ ಹೆಬ್ಬಯಕೆ ವ್ಯಕ್ತಪಡಿಸಿದ್ದರು. ಇದನ್ನು ಕೇಳಿದ ಸಲ್ಮಾನ್, ಮೂರು ವರ್ಷಗಳ ಹಿಂದೆ ಅವರನ್ನು ಸ್ವತಃ ಮುಂಬೈಗೆ ಕರೆಸಿಕೊಂಡು ಅವರ ಕೈಯಿಂದ ರಾಖಿ ಕಟ್ಟಿಸಿಕೊಂಡು, ಅವರಿಗೆ 50 ಸಾವಿರ ರು. ಉಡುಗೊರೆ ಕೊಟ್ಟು ಸಂತಸ ಪಟ್ಟಿದ್ದರು.

ಒಂದೆಡೆ ಹರ್ಷದ ಹೊನಲು ಉಕ್ಕಿ ಹರಿಯುತ್ತಿದ್ದರೆ, ಮತ್ತೊಂದೆಡೆ ಗಂಡನನ್ನು ಕಳೆದುಕೊಂಡು ಪರಿಹಾರಕ್ಕಾಗಿ ಪರಿತಪಿಸುತ್ತಿರುವ, ಅಪಘಾತದಲ್ಲಿ ಸತ್ತ ನೂರುಲ್ಲಾ ಪತ್ನಿ ಪರಿತಪಿಸುತ್ತಿರಬಹುದು. ಹತ್ತು ಲಕ್ಷ ರು. ಪರಿಹಾರ ಇನ್ನೂ ಅವರಿಗೆ ಗಗನ ಕುಸುಮವಾಗಿದೆ. ಇನ್ನೂದರೂ ಅವರಿಗೆ ಪರಿಹಾರ ದೊರಕಿಸಿಕೊಡುವ ಮಾನವೀಯತೆಯನ್ನು ಸಲ್ಮಾನ್ ತೋರುವರೆ? [ಸತ್ತ ನೂರುಲ್ಲಾ ಪತ್ನಿಯ ಅಳಲು]

English summary
At last, Salman Khan's fans conjoined Saba and Farah can eat now. They had stopped eating after Mumbai sessions court had sentenced Salman to 5 years imprisonment in hit and run case happened in 2002. Salman had invited the sisters to Mumbai to tie rakhi three years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X