• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಕ್ರಮವಾಗಿ ವಿದೇಶಿ ಮದ್ಯ ಸಂಗ್ರಹ, ಬಿಗ್ ಬಾಸ್ ಮಾಜಿ ಸ್ಪರ್ಧಿ ಬಂಧನ

|

ಮುಂಬೈ, ಡಿಸೆಂಬರ್ 23: ಬಿಗ್ ಬಾಸ್ 7 ರ ಸ್ಪರ್ಧಿ, ನಟ ಅರ್ಮಾನ್ ಕೊಹ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತನ್ನ ಉಗ್ರ ಕೋಪ ತಾಪದ ಮೂಲಕವೇ ಕುಖ್ಯಾತಿ ಗಳಿಸಿರುವ ಅರ್ಮಾನ್ ಅವರು ಮತ್ತೊಮ್ಮೆ ಬೇಡದ ವಿಷಯಕ್ಕೆ ಸುದ್ದಿಯಾಗಿದ್ದಾರೆ.

ಅರ್ಮಾನ್ ಅವರು ತಮ್ಮ ಮನೆಯಲ್ಲಿ ಅಕ್ರಮವಾಗಿ ವಿದೇಶಿ ಮದ್ಯವನ್ನು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿರುವ ಬಗ್ಗೆ ತನಿಖೆಯನ್ನು ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಜುಹು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಲಾಗಿದೆ. ಸದ್ಯ ಜಾಮೀನು ಪಡೆದುಕೊಂಡಿದ್ದಾರೆ.

ಗೆಳತಿ ಮೇಲೆ ಹಲ್ಲೆ ಮಾಡಿದ ಬಿಗ್ ಬಾಸ್ ಖ್ಯಾತಿಯ ನಟ!

41 ಸ್ಕಾಚ್ ವಿಸ್ಕಿ ಬಾಟಲ್ ಗಳು ಅರ್ಮಾನ್ ಮನೆಯಲ್ಲಿ ಪತ್ತೆಯಾಗಿದ್ದು, ಎಲ್ಲವೂ ವಿದೇಶಿ ಬ್ರ್ಯಾಂಡ್ ಗಳಾಗಿದ್ದು, ಮದ್ಯ ದಾಸ್ತಾನು ಮಿತಿ ಮೀರಿದ್ದರಿಂದ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಕಾನೂನಿನ ಪ್ರಕಾರ ತಿಂಗಳಿಗೆ 12 ಯುನಿಟ್ ಹಾರ್ಡ್ ಲಿಕ್ಕರ್ ಬಾಟಲ್ ಗಳನ್ನು (ಸ್ಕಾಚ್, ವಿಸ್ಕಿ, ರಮ್ ಸಹಿತ) ಮನೆಯಲ್ಲಿ ಇಟ್ಟುಕೊಳ್ಳಬಹುದಾಗಿದೆ.

ವಿದೇಶದಿಂದ ಭಾರತಕ್ಕೆ ಬರುವಾಗ ಒಬ್ಬ ವ್ಯಕ್ತಿ ಎರಡು ಬಾಟಲ್ ಗಳನ್ನು ಮಾತ್ರ ತರುವ ಅವಕಾಶ ಇದೆ. ಹೀಗಾಗಿ ಇಷ್ಟು ಮದ್ಯದ ಬಾಟಲ್ ಗಳು ವಿದೇಶದಿಂದ ಹೇಗೆ ಬಂದವು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಅರ್ಮಾನ್ ವಿರುದ್ಧ ಬಾಂಬೆ ಮದ್ಯ ನಿಯತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅಬಕಾರಿ ಅಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಅರ್ಮಾನ್ ರನ್ನು ಬಾಂದ್ರಾದ ಸೆಷನ್ಸ್ ಕೋರ್ಟಿಗೆ ಹಾಜರುಪಡಿಸಲಾಯಿತು. ಅರ್ಮಾನ್ ಅವರಿಗೆ ಅಲ್ಲಿ ಜಾಮೀನು ಸಿಕ್ಕಿದೆ.

20000 ರು ಬಾಂಡ್ ನೀಡಿ ನಾನು ಜಾಮೀನು ಪಡೆದುಕೊಂಡಿದ್ದೇನೆ. ನಾನು ದುಬೈನಿಂದ ಈಗಷ್ಟೇ ಹಿಂತಿರುಗಿದ್ದೇನೆ. ನನ್ನ 6 ಜನ ಸ್ನೇಹಿತರು 12 ಬಾಟಲ್ ತೆರಿಗೆ ರಹಿತ ಮದ್ಯ ತಂದಿದ್ದಾರೆ. ನಾವು ಮನೆಯಲ್ಲಿ ಪಾರ್ಟಿ ಮಾಡೋಕೆ ಪ್ಲ್ಯಾನ್ ಮಾಡಿದ್ದೆವು. ನನ್ನ ಬಳಿ ಮದ್ಯ ಹೊಂದಲು ಲೈಸನ್ಸ್ ಇದೆ. 40 ಬಾಟಲ್ ಮದ್ಯ ಹಾಗೂ 19 ಹಳೆ ಬಾಟಲ್ ಇದ್ದಿದ್ದು ನಿಜ. ಬಾಂದ್ರಾ ಅಬಕಾರಿ ಇಲಾಖೆಯಲ್ಲಿ ಒಂದು ರಾತ್ರಿ ಕಳೆಯಬೇಕಾಯಿತು. ಅಗತ್ಯ ದಾಖಲೆ ಒದಗಿಸಿದ್ದರಿಂದ ಜಾಮೀನು ಸಿಕ್ಕಿತು. ಯಾರೋ ನನ್ನ ಜೀವನದ ಜತೆ ಆಟವಾಡುತ್ತಿದ್ದಾರೆ ಎಂದು ಅರ್ಮಾನ್ ಅವರು ಪ್ರತಿಕ್ರಿಯಿಸಿದ್ದಾರೆ.

English summary
Armaan Kohli, who hit the headlines recently due to his arrest by the Excise Police for carrying 41 bottles of Scotch Whiskey, secured bail yesterday. The actor was arrested on Thursday for stocking liquor beyond the permissible limit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X