ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಬ್ ಡ್ರೈವರ್ ಗೆ ಬಿಜೆಪಿ ಅವಾರ್ಡ್: ಕಾರಣ ಮಾತ್ರ ಬಲುರೋಚಕ

|
Google Oneindia Kannada News

ಮುಂಬೈ, ಜನವರಿ.08: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಕ್ಯಾಬ್ ನಲ್ಲಿ ಮಾತನಾಡುತ್ತಿದ್ದ ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಿದ ಚಾಲಕನಿಗೆ ಮುಂಬೈಯಲ್ಲಿ ಬಿಜೆಪಿ ರಾಜಗೌರವ ನೀಡಿದೆ.
ಮುಂಬೈನಲ್ಲಿ ಉಬರ್ ಕಂಪನಿಯ ಕ್ಯಾಬ್ ಚಾಲಕ ರೋಹಿತ್ ಗೌರ್ ಗೆ ಬಿಜೆಪಿ ಮುಖಂಡ ಮಂಗಲ್ ಪ್ರಭಾತ್ ಲೋಧಾ ಅಲರ್ಟ್ ಸಿಟಿಜನ್ ಆಫ್ ಇಂಡಿಯಾ ಎಂಬ ಅವಾರ್ಡ್ ನ್ನು ನೀಡಿ ಗೌರವಿಸಿದ್ದಾರೆ.

ಫೋನ್ ನಲ್ಲಿ ಮಾತಾಡಿದ್ದಕ್ಕೆ ಗ್ರಾಹಕನನ್ನು ಪೊಲೀಸರಿಗೆ ಒಪ್ಪಿಸಿದ ಉಬರ್ ಡ್ರೈವರ್!
ದೇಶವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಲು ಸಂಚು ರೂಪಿಸಿದ ವ್ಯಕ್ತಿಯನ್ನು ಆ ತಕ್ಷಣಕ್ಕೆ ಪೊಲೀಸರಿಗೆ ಒಪ್ಪಿಸಿದ ಚಾಲಕ ಚಾಣಾಕ್ಷತನವನ್ನು ಭಾರತೀಯ ಜನತಾ ಪಕ್ಷದ ಮುಖಂಡರು ಹಾಡಿ ಹೊಗಳಿದ್ದಾರೆ.

ಬಿಜೆಪಿ ಮುಖಂಡರಿಂದ ಲೋಹಿತ್ ಗೌರ್ ಗೆ ಸನ್ಮಾನ

ಬಿಜೆಪಿ ಮುಖಂಡರಿಂದ ಲೋಹಿತ್ ಗೌರ್ ಗೆ ಸನ್ಮಾನ

ಮುಂಬೈನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸುವ ಬಗ್ಗೆ ಉಬರ್ ಕ್ಯಾಬ್ ನಲ್ಲಿ ಮಾತನಾಡಿದ್ದೇ ತಡ. ಆ ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಿದ ರೋಹಿತ್ ಗೌರ್ ಸಮಯಪ್ರಜ್ಞೆಯನ್ನು ಮೆಚ್ಚಿಕೊಂಡಿರುವ ಬಿಜೆಪಿ ನಾಯಕರು, ಶನಿವಾರ ಕ್ಯಾಬ್ ಚಾಲಕನ್ನು ಭೇಟಿ ಮಾಡಿ ಸನ್ಮಾನಿಸಿದರು. ಇದರ ಜೊತೆಗೆ ರೋಹಿತ್ ಗೌರ್ ಗೆ ಭಾರತದ ಜಾಗೃತ ನಾಗರಿಕ ಅವಾರ್ಡ್ ನ್ನು ನೀಡಲಾಯಿತು.

ಗೌರವ ಅರ್ಪಣೆ ಬಗ್ಗೆ ಟ್ವಿಟ್ಟರ್ ನಲ್ಲಿ ಸಂದೇಶ

ಗೌರವ ಅರ್ಪಣೆ ಬಗ್ಗೆ ಟ್ವಿಟ್ಟರ್ ನಲ್ಲಿ ಸಂದೇಶ

ಮುಂಬೈನಲ್ಲಿನ ಉಬರ್ ಕ್ಯಾಬ್ ಚಾಲಕ ರೋಹಿತ್ ಗೌರ್ ಸಮಯಪ್ರಜ್ಞೆಯನ್ನು ಬಿಜೆಪಿ ಮುಖಂಡ ಎಂ.ಪಿ.ಲೋಧಾ ಹಾಡಿ ಹೊಗಳಿದ್ದಾರೆ. ದೇಶಕ್ಕೆ ಕೆಡಕು ಉಂಟು ಮಾಡಲು ಸಂಚು ರೂಪಿಸಿದವರ ವಿರುದ್ಧ ತಕ್ಷಣ ಎಚ್ಚೆತ್ತುಕೊಂಡ ಚಾಲಕನು ದೇಶದ ಜಾಗೃತ ನಾಗರಿಕ ಎಂದು ಟ್ವಿಟ್ಟರ್ ನಲ್ಲಿ ಬರೆದು ಕೊಂಡಿದ್ದಾರೆ.

ರೋಹಿತ್ ಗೌರ್ ಸನ್ಮಾನದ ಹಿಂದಿನ ರಹಸ್ಯ

ರೋಹಿತ್ ಗೌರ್ ಸನ್ಮಾನದ ಹಿಂದಿನ ರಹಸ್ಯ

ಕಳೆದ ಫೆಬ್ರವರಿ.05ರಂದು ರಾತ್ರಿ 10 ಗಂಟೆ ಸಮಯದಲ್ಲಿ ಮುಂಬೈನ ಜುಹು ಪ್ರದೇಶದಿಂದ ಕುರ್ಲಾದಲ್ಲಿರುವ ತಮ್ಮ ನಿವಾಸಕ್ಕೆ ಸಾಹಿತಿ ಮತ್ತು ಚಳವಳಿಗಾರ ಬಪ್ಪಾದಿತ್ಯಾ ಸರ್ಕಾರ್ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಪೌರತ್ವ ತಿದ್ದುಪಡಿ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಮುಂಬೈನಲ್ಲೂ ಉಗ್ರ ಸ್ವರೂಪದ ಪ್ರತಿಭಟನೆ ನಡೆಸುವ ಬಗ್ಗೆ ಫೋನ್ ನಲ್ಲಿ ತಮ್ಮ ಸ್ನೇಹಿತರ ಜೊತೆಗೆ ಸಂಭಾಷಣೆ ನಡೆಸಿದ್ದರು. ಇದನ್ನು ರಿಕಾರ್ಡ್ ಮಾಡಿಕೊಂಡ ಕ್ಯಾಬ್ ಚಾಲಕ ರೋಹಿತ್ ಗೌರ್, ಬಪ್ಪಾದಿತ್ಯ ಸರ್ಕಾರ್ ರನ್ನು ಎಟಿಎಂ ಬಳಿ ಕ್ಯಾಬ್ ನಿಲ್ಲಿಸುವುದಾಗಿ ಹೇಳಿ ನೇರವಾಗಿ ಪೊಲೀಸರ ಜೊತೆಗೆ ವಾಪಸ್ ಆಗಿದ್ದರು. ಸಿಎಎ ವಿರುದ್ಧ ಮಾತನಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿ, ಬಪ್ಪಾದಿತ್ಯಾ ಸರ್ಕಾರ್ ರನ್ನು ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದರು.

ಇಂದಿಗೂ ಮುಂಬೈನಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ

ಇಂದಿಗೂ ಮುಂಬೈನಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ

ಇನ್ನು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಕಳೆದ ಎರಡು ವಾರಗಳಿಂದಲೂ ಮುಂಬೈ ಬಾಗ್ ನಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಯುತ್ತಿದೆ. ಶುಕ್ರವಾರವಷ್ಟೇ ಮುಂಬೈನ ಮೋರ್ಲ್ಯಾಂಡ್ ರಸ್ತೆಯಲ್ಲಿ ಕುರ್ಚಿಗಳನ್ನು ಹಾಕಿಕೊಂಡು ನಡೆಸುತ್ತಿರುವ ಪ್ರತಿಭಟನೆಯಿಂದ ಪಾಲಿಕೆ ಕಾಮಗಾರಿಗಳಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ಮುಂಬೈ ಪಾಲಿಕೆ ಆಯುಕ್ತರು ಪೊಲೀಸರಿಗೆ ದೂರು ನೀಡಿದ್ದರು. ಇದರ ಅಡಿಯಲ್ಲಿ ಪ್ರತಿಭಟನಾ ಆಯೋಜಕರು ಹಾಗೂ 300 ಮಹಿಳೆಯರ ವಿರುದ್ಧ ನಾಗ್ಪಾಡ್ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.

English summary
BJP Leader M P Lodha Give 'Alert Citizen Award' To Cab Driver Rohit Gaur In Mumbai. Who Informed About Passanger Talking About Anti-CAA Protets In Phone Call.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X