ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಭವವಿಲ್ಲದ ಆದಿತ್ಯ ಠಾಕ್ರೆ ಸಿಎಂ ಆದ್ರೆ ಅವಮಾನ :ರಾಮದಾಸ್ ಅತಾವಳೆ

|
Google Oneindia Kannada News

ಮುಂಬೈ, ನವೆಂಬರ್ 2: ಏನೂ ಅನುಭವವಿಲ್ಲದ ಆದಿತ್ಯ ಠಾಕ್ರೆ ಮುಖ್ಯಮಂತ್ರಿಯಾದರೆ ಅದು ನಮಗೆ ಮಾಡುವ ಅವಮಾನ ಎಂದು ಕೇಂದ್ರ ಸಚಿವ ರಾಮ್‌ದಾದ ಅತಾವಳೆ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿ ಬಿಜೆಪಿಯವರು ಆಗಿರಬೇಕು. ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಸಿಎಂ ಆದರೆ ಅವರಿಗೆ ಯಾವುದೇ ಅನುಭವವಿಲ್ಲದ ಕಾರಣ ಅದು ಹಿರಿಯ ನಾಯಕರಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ತಿರುವು, ಪವಾರ್ ಗೆ ಠಾಕ್ರೆ ಕರೆ!ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ತಿರುವು, ಪವಾರ್ ಗೆ ಠಾಕ್ರೆ ಕರೆ!

'ಮುಖ್ಯಮಂತ್ರಿ ಬಿಜೆಪಿಯವರಾಗಿರಬೇಕು. ದೇವೇಂದ್ರ ಫಡ್ನವೀಸ್ ಅವರಿಗೆ ಅವಕಾಶ ನೀಡಬೇಕು. ಆದಿತ್ಯ ಠಾಕ್ರೆ ಅವರಿಗೆ ಯಾವುದೇ ಅನುಭವವಿಲ್ಲ. ಅವರು ಸಿಎಂ ಆದರೆ ಅದು ನಮಗೆ ಅವಮಾನವಾಗುತ್ತದೆ' ಎಂದಿದ್ದಾರೆ.

Adiya Thackeray As Maharashtra CM Will Be An Insult To Us

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಶಿವಸೇನೆ ರಾಜಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಆ ಮೂಲಕ ಈಗ ಶಿವಸೇನಾ ಮತ್ತು ಬಿಜೆಪಿ ನಡುವೆ ಸಿಎಂ ಹುದ್ದೆಗಾಗಿ ನಡೆದಿರುವ ಗದ್ದಲದಲ್ಲಿ ಮಹಾರಾಷ್ಟ್ರ ಸಿಎಂಗೆ ಫಡ್ನವೀಸ್ ಅವರ ಉಮೇದುವಾರಿಕೆಯನ್ನು ಅಥವಾಳೆ ಬೆಂಬಲಿಸಿದ್ದಾರೆ. ಅವರ ಪಕ್ಷವು ಎನ್‌ಡಿಎ ಸರ್ಕಾರದ ಮಿತ್ರ ಪಕ್ಷವಾಗಿದೆ.

ಮಹಾಯುತಿ (ಬಿಜೆಪಿ-ಶಿವಸೇನೆ ಮೈತ್ರಿ) ಸ್ಪಷ್ಟ ಬಹುಮತವನ್ನು ಪಡೆದಿದೆ. ದೇವೇಂದ್ರ ಫಡ್ನವೀಸ್ ಅವರು ಬಿಜೆಪಿ ಶಾಸಕಾಂಗ ನಾಯಕರಾಗಿ ಆಯ್ಕೆಯಾದರು. ಮುಖ್ಯಮಂತ್ರಿಯವರ ಹೆಸರನ್ನು ಬೆಂಬಲಿಸಲು ನಾವು ನಿರ್ಧರಿಸಿದ್ದೇವೆ, ಏಕೆಂದರೆ ಅವರು ನಮಗೆ ಏಕೈಕ ಮುಂಚೂಣಿಯಲ್ಲಿದ್ದಾರೆ ಎಂದರು.

English summary
Republican Party of India (RPI) chief and Union minister Ramdas Athawale on Saturday said that Chief Minister of Maharashtra should be from the Bharatiya Janata Party (BJP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X