ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣಾ ನಿಯಂತ್ರಣ ಅದಾನಿ ಗ್ರೂ‌ಪ್‌ಗೆ

|
Google Oneindia Kannada News

ಮುಂಬೈ, ಜು.14: ಭಾರತದ ಖ್ಯಾತ ಉದ್ಯಮಿ, ಬಿಲಿಯನೇರ್ ಗೌತಮ್ ಅದಾನಿ ನೇತೃತ್ವದ ಅದಾನಿ ಗುಂಪು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣಾ ನಿಯಂತ್ರಣವನ್ನು ಜಿವಿಕೆ ಸಮೂಹದಿಂದ ತನ್ನ ಉಸ್ತುವಾರಿಗೆ ಪಡೆದುಕೊಂಡಿದೆ. ಈ ಮೂಲಕ ದೇಶದ ಅತಿದೊಡ್ಡ ವಿಮಾನ ನಿಲ್ದಾಣ ಮೂಲಸೌಕರ್ಯ ಕಂಪನಿಯಾಗಲು ಅದಾನಿ ಗುಂಪು ಹೆಜ್ಜೆಇಟ್ಟಿದೆ.

ಬಹುರಾಷ್ಟ್ರೀಯ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಈಗ ವಿಮಾನ ನಿಲ್ದಾಣದ 25 ಪ್ರತಿಶತದಷ್ಟು ಪಾಲನ್ನು ಹೊಂದಿದೆ. ನಿರ್ವಹಣೆ ಮತ್ತು ಅಭಿವೃದ್ಧಿ ಹಿನ್ನೆಲೆ ಒಟ್ಟು ಎಂಟು ವಿಮಾನ ನಿಲ್ದಾಣಗಳ ನಿರ್ವಹಣೆ ಹೊಣೆಯನ್ನು ವಹಿಸಿಕೊಂಡಿದೆ. ಅದಾನಿ ಗುಂಪು ದೇಶದ ವಾಯು ಸರಕು ಸಂಚಾರದ ಶೇಕಡ 33 ರಷ್ಟು ನಿಯಂತ್ರಣವನ್ನು ಹೊಂದಿದೆ.

ಅದಾನಿ ಷೇರು ಕುಸಿತ: ಟ್ವಿಟರ್‌ನಲ್ಲಿ ಪತ್ರಕರ್ತೆ ಸುಚೇತಾ ದಲಾಲ್ ಟ್ರೆಂಡ್‌ಅದಾನಿ ಷೇರು ಕುಸಿತ: ಟ್ವಿಟರ್‌ನಲ್ಲಿ ಪತ್ರಕರ್ತೆ ಸುಚೇತಾ ದಲಾಲ್ ಟ್ರೆಂಡ್‌

ಈ ಬಗ್ಗೆ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿರುವ ಅದಾನಿ ಗ್ರೂಪ್, ಮುಂಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಮಂಡಳಿಯ ಸಭೆ ನಡೆದಿದೆ. ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ ಮತ್ತು ಮಹಾರಾಷ್ಟ್ರದ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ (ಸಿಡ್ಕೊ) ದಿಂದ ಪಡೆದ ಅನುಮೋದನೆಗಳನ್ನು ಅನುಸರಿಸುತ್ತೇವೆ ಎಂದು ತಿಳಿಸಿದೆ.

Adani Group finally takes over Management Control Of Mumbai International Airport

ಅದಾನಿ ಗ್ರೂಪ್ ಮುಂದಿನ ತಿಂಗಳು ನವೀ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣವನ್ನು ಪ್ರಾರಂಭಿಸಿ ಮುಂದಿನ 90 ದಿನಗಳಲ್ಲಿ ಆರ್ಥಿಕ ಮುಚ್ಚುವಿಕೆಯನ್ನು ಪೂರ್ಣಗೊಳಿಸಲಿದೆ. 2024 ರಲ್ಲಿ ವಿಮಾನ ನಿಲ್ದಾಣವನ್ನು ಕಾರ್ಯಾರಂಭ ಮಾಡಲಿದೆ.

"ನಮ್ಮ ವಿಮಾನ ನಿಲ್ದಾಣ ವಿಸ್ತರಣಾ ಕಾರ್ಯತಂತ್ರವು ನಮ್ಮ ರಾಷ್ಟ್ರದ ಶ್ರೇಣಿ 1 ನಗರಗಳನ್ನು ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳೊಂದಿಗೆ ಮಾದರಿಯಲ್ಲಿ ಪರಿವರ್ತಿಸುವ ಉದ್ದೇಶವನ್ನು ಒಳಗೊಂಡಿದೆ. ಇದು ಭಾರತದ ನಗರ-ಗ್ರಾಮೀಣ ವಿಭಜನೆಯ ಬೇರ್ಪಡಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಗಮವಾಗಿ ಪ್ರಯಾಣಿಸಲು ಅನುವು ಮಾಡಿಕೊಡಲಿದೆ," ಎಂದು ಅದಾನಿ ಸಮೂಹದ ಅಧ್ಯಕ್ಷರಾದ ಗೌತಮ್ ಅದಾನಿ ಹೇಳಿದರು.

ಸಂಪತ್ತಿನಲ್ಲಿ ಭಾರಿ ಏರಿಕೆ: ಮಸ್ಕ್, ಬೆಜೊಸ್‌ರನ್ನೂ ಹಿಂದಿಕ್ಕಿದ ಅದಾನಿಸಂಪತ್ತಿನಲ್ಲಿ ಭಾರಿ ಏರಿಕೆ: ಮಸ್ಕ್, ಬೆಜೊಸ್‌ರನ್ನೂ ಹಿಂದಿಕ್ಕಿದ ಅದಾನಿ

2020 ರಲ್ಲಿ ಲಕ್ನೋ, ಅಹಮದಾಬಾದ್ ಮತ್ತು ಮಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ವಹಿಸಿಕೊಂಡ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್, ಲಕ್ನೋ, ಅಹಮದಾಬಾದ್, ಮಂಗಳೂರು, ಗುವಾಹಟಿ, ಜೈಪುರ, ಮತ್ತು ತಿರುವನಂತಪುರಂನ ಆರು ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ಮತ್ತು ಆಧುನೀಕರಿಸಲಿದೆ.

(ಒನ್‌ಇಂಡಿಯಾ ಸುದ್ದಿ)

English summary
Adani Group finally takes over Management Control Of Mumbai International Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X