ಉಸಿರಾಟದ ತೊಂದರೆ, ಆಸ್ಪತ್ರೆಗೆ ದಾಖಲಾದ ಬಿಪಾಶಾ
ಮುಂಬೈ, ಜೂನ್ 03 : ಹಿಂದಿ ಚಿತ್ರರಂಗದ ಜನಪ್ರಿಯ ತಾರೆ ಬಿಪಾಶಾ ಬಸು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ತೊಂದರೆ ಅನುಭವಿಸುತ್ತಿರುವ ಬಿಪಾಶಾ ಅವರು ಕೆಲ ಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ, ತೊಂದರೆ ತೀವ್ರವಾದ ಹಿನ್ನಲೆಯಲ್ಲಿ ತಜ್ಞ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಿಲ್ಲ.
ಕಳೆದ ವಾರ, ಬಿಪಾಶಾ ಅವರು ಹಿಂದೂಜಾ ಆಸ್ಪತ್ರೆಯಲ್ಲಿ ಹಿರಿಯ ಶ್ವಾಸಕೋಶ ತಜ್ಞ ವೈದ್ಯರ ಬಳಿ ಸಲಹೆ ಪಡೆದುಕೊಂಡಿದ್ದರು. ಆದರೆ, ಆರೋಗ್ಯ ಸುಧಾರಣೆಯಾಗದ ಕಾರಣ, ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುಮಾರು ಮೂರು ವರ್ಷಗಳಿಂದ ಚಿತ್ರರಂಗದಿಂದ ಬಹುತೇಕ ದೂರವುಳಿದಿರುವ ಬಿಪಾಶಾ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಮತ್ತೊಮ್ಮೆ ತೊಡಗಿಕೊಂಡಿದ್ದರು.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !