• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ಯಾನ್ಸರ್ ಪೀಡಿತ ನಫೀಸಾ ನೋಡಲು ಬಂದ ಗೆಳತಿ ಸೋನಿಯಾ

|

ಮುಂಬೈ, ನವೆಂಬರ್ 18: ನಟಿ, ರಾಜಕಾರಣಿ ನಫೀಸಾ ಅಲಿ ಅವರು ಸ್ಟೇಟ್ 3 ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ, ಅವರ ಆಪ್ತ ಗೆಳತಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಕ್ಷಣವೇ ಬಂದು ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದಾರೆ.

ನನ್ನ ಆಪ್ತ ಗೆಳತಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ನನ್ನ ಆರೋಗ್ಯ ವಿಚಾರಿಸಲು ಬಂದಿದ್ದರು. ಕ್ಯಾನ್ಸರಿನಿಂದ ಗುಣಮುಖರಾಗುವಂತೆ ಶುಭ ಹಾರೈಸಿದರು ಎಂದು ನಫೀಸಾ ಅಲಿ ಅವರು ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ನಫೀಸಾ ಅವರು ಶಶಿ ಕಪೂರ್ ಅವರ ಜುನೂನ್ ಚಿತ್ರದ ಮೂಲಕ 1979ರಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಿದರು.

ಯಮ್ಲಾ ಪಗ್ಲಾ ದಿವಾನಾ, ಸಾಹೇಬ್ ಬಿವಿ ಔರ್ ಗ್ಯಾಂಗ್ ಸ್ಟರ್ 3, ಮೇಜರ್ ಸಾಬ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ

2009ರಲ್ಲಿ ಸಮಾಜ ವಾದಿ ಪಕ್ಷದ ಟಿಕೆಟ್ ಪಡೆದು ಚುನಾವಣೆ ಸ್ಪರ್ಧಿಸಿದ್ದರು. ಅರ್ಜುನ ಪ್ರಶಸ್ತಿ ವಿಜೇತ ಗಾಲ್ಫರ್, ಕರ್ನಲ್ ಆರ್ ಎಸ್ ಸೋಧಿ ಅವರನ್ನು ಮದುವೆಯಾಗಿರುವ ನಫೀಸಾ ಅವರಿಗೆ ಮೂವರು ಮಕ್ಕಳಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ನಟಿ ಸೊನಾಲಿ ಬೇಂದ್ರೆ ಹಾಗೂ ಇರ್ಫಾನ್ ಪಠಾಣ್ ನಂತರ ನಫೀಸಾ ಅವರು ಕ್ಯಾನ್ಸರ್ ಪೀಡಿತರ ಸಾಲಿಗೆ ಸೇರಿದ್ದಾರೆ.

English summary
Veteran film and theatre actor Nafisa Ali revealed she has been recently diagnosed with stage three cancer. She made the revelation Saturday via Instagram on which she shared a picture of her with good friend and Congress leader Sonia Gandhi, who paid her a visit post the diagnosis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X