ಒಬ್ಬರ ಅವನತಿಯಿಂದ ಪ್ರಯಾಣ ಆರಂಭ: ಉದ್ಧವ್ ಟೀಕಿಸಿದ ರಾಜ್
ಮುಂಬೈ, ಜುಲೈ 01: ಮಹಾರಾಷ್ಟ್ರದ ಹೊಸ ಸಿಎಂ ಆಗಿ ಏಕನಾಥ್ ಶಿಂಧೆ ನೇಮಕವಾದ ಬಳಿಕ ಸಂತೋಷ ಕೂಟ ಆಚರಿಸಿದ ಕೆಲವೇ ಜನರಲ್ಲಿ ಒಬ್ಬರಾದ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ತಮ್ಮ ಸಹೋದರ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆಯನ್ನು ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಸುಖಾಂತ್ಯವಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿ ಸ್ಥಾನವನ್ನು ವಹಿಸುವುದರೊಂದಿಗೆ ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಗುರುವಾರ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಜ್ ಠಾಕ್ರೆ ತಮ್ಮ ಸೋದರನನ್ನು ಗೇಲಿ ಮಾಡಿದಂತೆ ಟ್ವಿಟ್‌ನಲ್ಲಿ ಬರೆದು ಒಬ್ಬ ವ್ಯಕ್ತಿಯ ಅದೃಷ್ಟವು ಇನ್ನೊಬ್ಬರ ಅವನತಿಯ ಕಡೆಗೆ ಹೇಗೆ ಕಾರಣವಾಗುತ್ತದೆ ಎಂದು ಬರೆದಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ರಾಜ್ ಠಾಕ್ರೆ , ಯಾರಾದರೂ ಅದೃಷ್ಟವನ್ನು ಒಬ್ಬರ ವೈಯಕ್ತಿಕ ಸಾಧನೆ ಎಂದು ತಪ್ಪಾಗಿ ಅರ್ಥೈಸಿಕೊಂಡಾಗ ಒಬ್ಬರ ಅವನತಿಯ ಕಡೆಗೆ ಪ್ರಯಾಣವು ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.

ಶಿವಸೇನಾ ಪಕ್ಷದಲ್ಲಿನ ಆಂತರಿಕ ಬಂಡಾಯದಿಂದಾಗಿ ಉದ್ಧವ್ ಠಾಕ್ರೆ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಗುರುವಾರ ರಾಜಭವನದಲ್ಲಿ ಬಂಡಾಯ ಶಿವಸೇನೆ ನಾಯಕ ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಈ ಟ್ವಿಟ್ ಬಂದಿದೆ.
ಶಿವಸೇನೆಯ ಬಹುತೇಕ ಶಾಸಕರು ಬಂಡಾಯದ ಸಮಯದಲ್ಲಿ ಶಿಂಧೆಯವರ ಪರವಾಗಿ ನಿಂತರು ಮತ್ತು ಅಂತಿಮವಾಗಿ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರವನ್ನು ರಚಿಸಲು ಬಿಜೆಪಿಯೊಂದಿಗೆ ಕೈಜೋಡಿಸಿದರು. ಈಗ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ.

ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವೀಸ್ ಇಬ್ಬರೂ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಸೇನೆಯ ನೈಜ ಮೌಲ್ಯಗಳನ್ನು ಹೇಗೆ ಮರಳಿ ತರುತ್ತಾರೆ, ಬಾಳಾಸಾಹೇಬ್ ಠಾಕ್ರೆ ಮತ್ತು ಪಕ್ಷಕ್ಕಾಗಿ ಅವರ ಆದರ್ಶಗಳನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಶಿಂಧೆ ಫಡ್ನವೀಸ್‌ಗೆ ವಿಶಾಲ ಹೃದಯವಂತ ಮತ್ತು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿದರು. ಮಹಾರಾಷ್ಟ್ರದ ಹೊಸ ಸರ್ಕಾರದ ಭಾಗವಾಗುವುದಿಲ್ಲ ಎಂದು ಫಡ್ನವೀಸ್ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ, ಅವರ ಹೇಳಿಕೆಯ ಸಂಪೂರ್ಣ ತಿರುವು ಪಡೆದು ಫಡ್ನವೀಸ್ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.












Click it and Unblock the Notifications