ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ: ಪತ್ತೆಯಾದ ಹೊಸ ಕೊರೊನಾ ಪ್ರಕರಣಗಳಲ್ಲಿ ಶೇ.89 ಓಮಿಕ್ರಾನ್

|
Google Oneindia Kannada News

ಮುಂಬೈ, ಜನವರಿ 25: ಮುಂಬೈನಲ್ಲಿ ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಹೊಸ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಶೇ.89ರಷ್ಟು ಓಮಿಕ್ರಾನ್ ಸೋಂಕಿತರಿದ್ದಾರೆ ಎನ್ನುವುದು ಅಧ್ಯಯನದ ಮೂಲಕ ತಿಳಿದುಬಂದಿದೆ.

ಮುಂಬೈನಲ್ಲಿ ಇತ್ತೀಚಿಗೆ ನಡೆದ ಕೋವಿಡ್ ಪರೀಕ್ಷಾ ಸಮೀಕ್ಷೆಯು ಹೆಚ್ಚಿನ ಹೊಸ ಪ್ರಕರಣಗಳು ಓಮಿಕ್ರಾನ್ ಪ್ರಕರಣಗಳಾಗಿವೆ ಎಂದು ಹೇಳಿದೆ. ಬಿಎಂಸಿ ಪ್ರಕಾರ, ಒಟ್ಟು 280 ಮಾದರಿಗಳಲ್ಲಿ ಶೇ.89ರಷ್ಟು ಮಂದಿ ಓಮಿಕ್ರಾನ್ ಸೋಂಕಿತರಿದ್ದಾರೆ, ಶೇ.8 ರಷ್ಟು ಮಂದಿ ಡೆಲ್ಟಾ ಸೋಂಕಿತರಿದ್ದಾರೆ.

ಓಮಿಕ್ರಾನ್ ಕೊನೆಯದ್ದಲ್ಲ, ಮತ್ತಷ್ಟು ರೂಪಾಂತರಿಗಳು ಬರಬಹುದು: WHOಓಮಿಕ್ರಾನ್ ಕೊನೆಯದ್ದಲ್ಲ, ಮತ್ತಷ್ಟು ರೂಪಾಂತರಿಗಳು ಬರಬಹುದು: WHO

ಇತ್ತೀಚೆಗೆ 280 ಮಾದರಿಗಳನ್ನು ಪರೀಕ್ಷಿಸಲಾಗಿತ್ತು, ಅದರಲ್ಲಿ 248 ಓಮಿಕ್ರಾನ್ ಸೋಂಕಿತರಿದ್ದರು, ಶೇ.8ರಷ್ಟು ಮಾತ್ರ ಡೆಲ್ಟಾ ಪ್ರಕರಣಗಳಿದ್ದವು. ಉಳಿದ ಶೇ.3ರಷ್ಟು ಅಥವಾ 11 ಪ್ರಕರಣಗಳು ಇತರೆ ಉಪ ವಿಧಗಳೆಂದು ತಿಳಿದುಬಂದಿದೆ, ಈ 11ರಲ್ಲಿ ಎರಡು ಡೆಲ್ಟಾ ರೂಪಾಂತರಿಯಾಗಿದ್ದು, ಉಳಿದಿದ್ದೆಲ್ಲವೂ ಡೆಲ್ಟಾ ಉಪವಿಧಗಳಾಗಿವೆ.

89% Of Covid Patients In Mumbai Infected With Omicron

280 ರೋಗಿಗಳಲ್ಲಿ ಶೇ.34ಅಂದರೆ 96 ರೋಗಿಗಳು 21-40 ವರ್ಷ ವಯಸ್ಸಿನವರಾಗಿದ್ದಾರೆ, ಶೇ.28 ಅಥವಾ 79 ರೋಗಿಗಳು 41-60 ವರ್ಷ ವಯಸ್ಸಿನವರಾಗಿದ್ದಾರೆ, ಕೇವಲ 22 ರೋಗಿಗಳು 20 ವರ್ಷದೊಳಗಿನವರಾಗಿದ್ದಾರೆ.

280 ರೋಗಿಗಳಲ್ಲಿ ಏಳು ರೋಗಿಗಳು ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ, ಇವರಲ್ಲಿ ಆರು ರೋಗಿಗಳು ಆಸ್ಪತ್ರೆಗೆ ದಾಖಲಾಗಬೇಕಾಯಿತು, ಇಬ್ಬರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಬೇಕಾಯಿತು.

ಎರಡೂ ಡೋಸ್ ಲಸಿಕೆ ತೆಗೆದುಕೊಂಡ 174 ಮಂದಿಯಲ್ಲಿ 89 ಮಂದಿ ಆಸ್ಪತ್ರೆಗೆ ದಾಖಲಾಗಬೇಕಾಯಿತು ಇವರಲ್ಲಿ ಇಬ್ಬರಿಗೆ ಕೃತಕ ಆಮ್ಲಜನಕದ ಅಗತ್ಯವಿತ್ತು, 15 ರೋಗಿಗಳನ್ನು ತೀವ್ರ ನಿಗಾಘಟಕಕ್ಕೆ ಸೇರಿಸಬೇಕಾಯಿತು.

ಕಳೆದ ಕೆಲವು ದಿನಗಳಲ್ಲಿ ಮುಂಬೈನಲ್ಲಿ ಕೊರೊನಾ ವೈರಸ್ ಮತ್ತು ಅದರ ರೂಪಾಂತರಿ ತಳಿ ಓಮಿಕ್ರಾನ್ ಪ್ರಕರಣಗಳಲ್ಲಿ ತೀವ್ರ ಜಿಗಿತ ಕಂಡಿದೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಲ್ಲಿನ ಸರಕಾರ, ಮುಂಬೈನಲ್ಲಿ 1-9 ನೇ ತರಗತಿಯವರೆಗಿನ ಶಾಲೆಗಳನ್ನು ಜನವರಿ 31ರವರೆಗೆ ಮುಚ್ಚಲು ಆದೇಶಿಸಿದೆ. ಇದಲ್ಲದೆ, 11 ನೇ ತರಗತಿಯ ಶಾಲೆಗಳು ಸಹ ಜನವರಿ 31 ರವರೆಗೆ ಮುಚ್ಚಿರಲಿವೆ.

ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೊರಡಿಸಲಾಗಿರುವ ಆದೇಶದ ಪ್ರಕಾರ, ಮುಂಬೈನಲ್ಲಿ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಮುಚ್ಚಲಾಗುವುದಿಲ್ಲ. ಈ ಎರಡೂ ವರ್ಗದ ( 10 ಮತ್ತು 12ನೇ ತರಗತಿ) ವಿದ್ಯಾರ್ಥಿಗಳು ಶಾಲೆಗೆ ಹೋಗಿ ಓದಬೇಕಾಗುತ್ತದೆ. ಆದರೆ 1ರಿಂದ 9 ಮತ್ತು 11ನೇ ತರಗತಿ ಶಾಲೆಗಳನ್ನು ಮುಚ್ಚಲು ನಿರ್ದೇಶಿಸಲಾಗಿದ್ದು, ಈ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಪಾಠಗಳು ಮುಂದುವರಿಯುತ್ತವೆ.

English summary
The latest round of Covid test survey in Mumbai has revealed that a majority of the new cases were Omicron.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X