ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯಿಂದ ಕೊರೊನಾ ರೋಗಿ ಕಾಣೆ, 6 ದಿನ ಬಳಿಕ ಟಾಯ್ಲೆಟ್‌ನಲ್ಲಿ ಶವ

|
Google Oneindia Kannada News

ಮುಂಬೈ, ಜೂನ್ 11: 82 ವರ್ಷದ ಕೊರೊನಾ ಸೋಂಕಿತ ಮಹಿಳೆ ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

ಜಲ್ಗಾಂವ್‌ನ ಸಿವಿಲ್ ಆಸ್ಪತ್ರೆಯಲ್ಲಿ ಜೂನ್ 2 ರಿಂದ ಈ ಮಹಿಳೆ ಕಾಣೆಯಾಗಿದ್ದರು ಎಂಬ ಮಾಹಿತಿ ಇದೆ. ಈ ಕುರಿತು ಆರೋಗ್ಯ ಅಧಿಕಾರಿಗಳಿಗೆ, ಪೊಲೀಸರಿಗೆ ಸಹ ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿತ್ತು. ಆದರೆ, ಆರು ದಿನಗಳ ಬಳಿಕ ಅದೇ ಆಸ್ಪತ್ರೆಯಲ್ಲಿರುವ ಟಾಯ್ಲೆಟ್‌ನ ಸ್ನಾನಗೃಹವೊಂದರಲ್ಲಿ ಶವವಾಗಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಈ ಕುರಿತು ಮಹಾರಾಷ್ಟ್ರ ಪೊಲೀಸರು ಪ್ರತಿಕ್ರಿಯೆ ನೀಡಿದ್ದು ''ಜೂನ್ 6 ರಂದು ನಮಗೆ ದೂರು ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದೇವೆ'' ಎಂದಿದ್ದಾರೆ.

ದೆಹಲಿಯಲ್ಲಿ 5.5 ಲಕ್ಷ ಕೊರೊನಾ ಕೇಸ್: ಸರ್ಕಾರದಿಂದಲೇ ಸ್ಫೋಟಕ ಮಾಹಿತಿದೆಹಲಿಯಲ್ಲಿ 5.5 ಲಕ್ಷ ಕೊರೊನಾ ಕೇಸ್: ಸರ್ಕಾರದಿಂದಲೇ ಸ್ಫೋಟಕ ಮಾಹಿತಿ

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ''ಮಹಿಳೆಯ ಮೊಮ್ಮಗ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್‌ಗೆ ಟ್ವಿಟ್ಟರ್‌ನಲ್ಲಿ ಟ್ಯಾಗ್ ಮಾಡಿ, 'ಇದು ಆಘಾತಕಾರಿ, ನನಗೆ ನ್ಯಾಯ ಕೊಡಿಸಿ' ಎಂದು ಕೇಳಿಕೊಂಡಿದ್ದಾರೆ'' ಎಂದು ಹೇಳಿದ್ದಾರೆ.

82 year old woman COVID19 patient dead in hospital toilet

ಇದಕ್ಕೂ ಮುಂಚೆ ಸರ್ಕಾರಿ ಆಸ್ಪತ್ರೆಯ ಕೊರೊನಾ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 80 ವರ್ಷದ ರೋಗಿಯೊಬ್ಬರು ಸೋಮವಾರ ನಾಪತ್ತೆಯಾಗಿದ್ದರು. ಆದರೆ, ಒಂದು ದಿನದ ಬಳಿಕ ಬೊರಿವಾಲಿ ರೈಲ್ವೆ ನಿಲ್ದಾಣದ ಹತ್ತಿರ ಶವವಾಗಿ ಪತ್ತೆಯಾಗಿದ್ದರು.

English summary
Body of an 82-year-old woman COVID19 patient who had gone missing from Jalgaon Civil Hospital on June 2 was found dead inside a toilet of the hospital yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X