• search
For mumbai Updates
Allow Notification  

  ಸಾಂಗ್ಲಿಯಲ್ಲಿ 8 ತಿಂಗಳ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ

  By Nayana
  |

  ಮುಂಬೈ, ಆಗಸ್ಟ್ 3: ಎಂಟು ತಿಂಗಳ ತುಂಬು ಗರ್ಭಿಣಿ ಮೇಲೆ ಎಂಟು ಜನ ಕಾಮುಕರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಸಾಂಗ್ಲಿಯಲ್ಲಿ ನಡೆದಿದೆ, ಈ ಕುರಿತು ಮಹಾರಾಷ್ಟ್ರ ಮಹಿಳಾ ಆಯೋಗ ಪೊಲೀಸರಿಂದ ವರದಿ ಕೇಳಿದೆ.

  ಗರ್ಭಿಣಿ ತನ್ನ ಗಂಡನೊಂದಿಗೆ ಟಾಸ್ಗಾವ್‌ನಲ್ಲಿರುವ ತುರ್ಚಿ ಫಾಟಾ ಎಂಬ ಪ್ರದೇಶಕ್ಕೆ ತೆರಳಿದ್ದಾಗ ಬೆಳಗಿನ ಜಾವ ಈ ಘಟನೆ ನಡೆದಿದೆ. ದಂಪತಿ ಹೋಟೆಲ್‌ ಕೆಲಸಕ್ಕಾಗಿ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದರು.

  ವೈರಲ್ ವಿಡಿಯೋ : ಪ್ರವಾಹದಲ್ಲಿ ಗರ್ಭಿಣಿಯ ಪರದಾಟ

  ತಮ್ಮ ಹೋಟೆಲ್ ವ್ಯಾಪಾರಕ್ಕಾಗಿ ಸಹಾಯಕರನ್ನು ನೇಮಕ ಮಾಡಿಕೊಳ್ಳಲು ಸಾಂಗ್ಲಿಯ ತಸ್ಗಾವ್‌ ತುರ್ಚಿ ಫಾಟಾ ಎಂಬ ಪ್ರದೇಶಕ್ಕೆ ಈ ದಂಪತಿ ತೆರಳಿದ್ದಾಗ ಈ ಹೀನ ಕೃತ್ಯ ನಡೆದಿದೆ. ನಿಮ್ಮ ಹೋಟೆಲ್ ವ್ಯವಹಾರಕ್ಕಾಗಿ ನೆರವು ನೀಡಲು ಸಹಾಯಕರಾಗಿ ದಂಪತಿಯನ್ನು ನಾನು ಹುಡುಕಿದ್ದೇನೆ. ಅವರಿಗೆ ಮುಂಗಡ 20,000 ರೂ.ಗಳೊಂದಿಗೆ ತುರ್ಚಿ ಫಾಟಾಗೆ ಬರುವಂತೆ ಮುಕುಂದ ಮಾನೆ ಎಂಬಾತ ಹೊಟೇಲ್ ಮಾಲೀಕನಿಗೆ ತಿಳಿಸಿದ್ದಾನೆ.

  ಅವರಿಬ್ಬರು ಆ ಸ್ಥಳಕ್ಕೆ ತಲುಪಿದ ನಂತರ ಮಾನೆ ಮತ್ತು ಆತನ ಜತೆ ಇದ್ದವರು ಅವರಿಬ್ಬರನ್ನು ಪೈಪ್‌ ಮತ್ತು ಕೋಲುಗಳಿಂದ ಹೊಡೆದು ಮಹಿಳೆ ಬಳಿಯಿದ್ದ ಒಡವೆಗಳನ್ನು ದೋಚಿದ್ದಾರೆ. ನಂತರ ಆಕೆಯ ಗಂಡನನ್ನು ಕಟ್ಟಿಹಾಕಿ, ಮಹಿಳೆಯನ್ನು ವಾಹನದ ಒಳಗೆ ಕೂಡಿಹಾಕಿ ಆಕೆ ಬೇಡಿಕೊಂಡರೂ ಬಿಡದೆ ಸಾಮೂಹಿಕ ಅತ್ಯಾಚಾರ ಎಸಗಿ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಬೆದರಿಸಿದ್ದಾರೆ.

  ಸಂತ್ರಸ್ತ ದಂಪತಿ ತಸ್ಗಾವ್‌ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಎಂಟು ಆರೋಪಿಗಳಲ್ಲಿ ಮುಕುಂದ್ ಮಾನೆ, ಸಾಗರ್, ಜಾವೇದ್ ಖಾನ್ ಮತ್ತು ವಿನೋದ್ ಅವರ ಹೆಸರುಗಳನ್ನು ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.

  ಘಟನೆ ಕುರಿತು ಮಹಾರಾಷ್ಟ್ರದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ ರಾಹತ್ಕರ್‌ ಸಾಂಗ್ಲಿ ಎಸ್‌ಪಿಗೆ ಪತ್ರ ಬರೆದು ಪ್ರಕರಣ ಕುರಿತಂತೆ ಸಮಗ್ರ ವರದಿಯನ್ನು ನೀಡುವಂತೆ ಕೇಳಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ಮುಂಬೈ ಸುದ್ದಿಗಳುView All

  English summary
  An eight-month pregnant woman from Satara was allegedly gang-raped by eight men in Sangli, following which Maharashtra’s women’s panel, took a serious note amid widespread condemnation and sought a report from police, an official said.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more