ಬಹುಕೋಟಿ ಎಸ್ಬಿಐ ಹಗರಣದಿಂದ ಹರ್ಷದ್ ಮೆಹ್ತಾ ಸೋದರನಿಗೆ ಖುಲಾಸೆ

ಮುಂಬೈ, ನವೆಂಬರ್ 07: ಭಾರತದ ಅತಿದೊಡ್ಡ ಆರ್ಥಿಕ ಹಗರಣಗಳ ಪೈಕಿ ಒಂದೆನಿಸಿರುವ ಷೇರು ಹಗರಣದ ರೂವಾರಿ ಹರ್ಷದ್ ಮೆಹ್ತಾ ಅವರ ಸೋದರ ಸುಧೀರ್ ಅವರಿಗೆ ಎಸ್ಬಿಐ ವಂಚನೆ ಪ್ರಕರಣದಿಂದ ಮುಕ್ತಿ ಸಿಕ್ಕಿದೆ.

1992ರ 105 ಕೋಟಿ ರುಗಳ ಎಸ್ಬಿಐ ಬ್ಯಾಂಕ್ ಸೆಕ್ಯುರಿಟೀಸ್ ಹಗರಣಕ್ಕೆ ಸಂಬಂಧಿಸಿದಂತೆ ಹರ್ಷದ್ ಮೆಹ್ತಾ ಅವರ ಸೋದರ ಅಶ್ವಿನ್ ಮೆಹ್ತಾ ಸೇರಿದಂತೆ 9 ಮಂದಿಯನ್ನು ಖುಲಾಸೆಗೊಳಿಸಿ, ಮುಂಬೈ ವಿಶೇಷ ಕೋರ್ಟ್ ಜಸ್ಟೀಸ್ ಶಾಲಿನಿ ಫಂಸಾಲ್ಕರ್ ಜೋಶಿ ಅವರು ಆದೇಶ ನೀಡಿದರು.

ಭಾರತವನ್ನು ತಲ್ಲಣಗೊಳಿಸಿದ ಟಾಪ್ 7 ಹಗರಣಗಳು

1992ರ ಬಹುಕೋಟಿ ರೂಪಾಯಿಗಳ ಷೇರು ಹಗರಣ ಹಾಗೂ 700 ಕೋಟಿ ರೂ.ಗಳ ವಂಚನೆ ಪ್ರಕರಣದ ರೂವಾರಿ ಹರ್ಷದ್ ಮೆಹ್ತಾ ಅವರು 2002ರಲ್ಲಿ ನಿಧನರಾಗಿದ್ದಾರೆ. ಸುಧೀರ್ ಮೆಹ್ತಾ ಸೇರಿದಂತೆ ಒಂಭತ್ತು ಮಂದಿ ತಪ್ಪಿತಸ್ಥರಾಗಿದ್ದರು.

8 bank officials, Harshad Mehtas brother acquitted in SBI fraud case

ಅಶ್ವಿನ್ ಮೆಹ್ತಾ, ರಾಮಾ ಸೀತಾರಾಮನ್, ಅಧಿಕಾರಿಗಳಾದ ಭೂಷಣ್ ರಾತ್, ಸಿ ರವಿ ಕುಮಾರ್, ಎಸ್ ಸುರೇಶ್ ಪ್ರಭು,ಪಿ ಮುರಳೀಧರನ್, ಅಶೋಕ್ ಅಗರವಾಲ್, ಜನಾರ್ದನ್ ಬಂಡೋಪಾಧ್ಯಾಯ್ ಹಾಗೂ ಶ್ಯಾಮ್ ಸುಂದರ್ ಗುಪ್ತಾ ಅವರು ಖುಲಾಸೆಗೊಂಡಿದ್ದಾರೆ.

ಎಸ್ಬಿಐ ಕ್ಯಾಪ್ ಮೂಲಕ ಹರ್ಷದ್ ಮೆಹ್ತಾ ಅವರು ನಡೆಸಿದ 24 ವ್ಯವಹಾರಗಳಿಂದ 105 ಕೋಟಿ ರು ಎಸ್ಬಿಐಗೆ ನಷ್ಟವಾಗಿದೆ ಎಂದು ಸಿಬಿಐ ಆರೋಪಿಸಿತ್ತು. ಆದರೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಈ ಪ್ರಕರಣವನ್ನು ತಂದು ಸೂಕ್ತ ಸಾಕ್ಷ್ಯ ಒದಗಿಸುವಲ್ಲಿ ವಿಫಲವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+