ಮಹಾರಾಷ್ಟ್ರದಲ್ಲಿ ಕೊರೊನಾ ಆರ್ಭಟ, ತಮಿಳುನಾಡಿನಲ್ಲಿ ರಣಕೇಕೆ

ಮುಂಬೈ, ಜುಲೈ 2: ಮಹಾರಾಷ್ಟ್ರದಲ್ಲಿಂದು ಕೊರೊನಾ ವೈರಸ್ ಮಹಾಸ್ಫೋಟಗೊಂಡಿದೆ. ಇಂದು ಒಂದೇ ದಿನ ಮಹಾರಾಜ್ಯದಲ್ಲಿ 6330 ಜನರಿಗೆ ಕೊವಿಡ್ ಸೋಂಕು ತಗುಲಿದೆ. ಈವರೆಗೂ ಮಹಾರಾಷ್ಟ್ರದಲ್ಲಿ ವರದಿಯಾಗಿರುವ ದೈನಂದಿನ ಪ್ರಕರಣಗಳ ಪೈಕಿ ಇಂದಿನ ಸಂಖ್ಯೆ ದೊಡ್ಡದು.

Recommended Video

      Nikhil Kumaraswamy to start agriculture ತಾತನಂತೆ ಮಣ್ಣಿನ ಮಗನಾಗಲು ಹೊರಟ ನಿಖಿಲ್ ಕುಮಾರಸ್ವಾಮಿ

      ಇಂದಿನ ವರದಿ ಬಳಿಕ ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿನ ಸಂಖ್ಯೆ 1,86,626ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ಹೊಂದಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಒಟ್ಟು ಕೇಸ್‌ಗಳ ಸಂಖ್ಯೆ 6 ಲಕ್ಷ ಗಡಿದಾಟಿದೆ. ಅದರಲ್ಲಿ ಮಹಾರಾಷ್ಟ್ರ ಒಂದರಲ್ಲೇ 1.86 ಲಕ್ಷ ವರದಿಯಾಗಿದೆ.

      ಮುಂಬೈ ನಗರದಲ್ಲಿಂದು 1,554 ಜನರಿಗೆ ಸೋಂಕು ತಗುಲಿದೆ. ವಾಣಿಜ್ಯ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 80,262ಕ್ಕೆ ಏರಿದೆ. 4,686 ಮಂದಿ ಕೊವಿಡ್‌ಗೆ ಬಲಿಯಾಗಿದ್ದಾರೆ.

      6,330 Covid19 Cases Reported In Maharashtra Today

      ಇಂದು ಮಹಾರಾಷ್ಟ್ರದಲ್ಲಿ 125 ಜನರು ಮೃತಪಟ್ಟಿದ್ದು, ಒಟ್ಟು ರಾಜ್ಯದಲ್ಲಿ 8,178 ಜನರು ಸಾವನ್ನಪ್ಪಿದ್ದಾರೆ. ಇಂದು ಒಂದೇ ದಿನ 8,018 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೂ ರಾಜ್ಯದಲ್ಲಿ 1,01,172 ಚೇತರಿಸಿಕೊಂಡಿದ್ದಾರೆ.

      ಇನ್ನು ತಮಿಳುನಾಡಿನಲ್ಲಿಂದು 4,343 ಮಂದಿಗೆ ಕೊವಿಡ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 98,392ಕ್ಕೆ ಬಂದು ನಿಂತಿದೆ. ಇಂದು 57 ಮಂದಿ ಪ್ರಾಣ ಕಳೆದುಕೊಂಡಿದ್ದು, ಈವರೆಗೂ ರಾಜ್ಯದಲ್ಲಿ 1,321 ಜನರು ಸಾವನ್ನಪ್ಪಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+