• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಕಲಿ ಟಿಆರ್‌ಪಿ ಹಗರಣ: ಐದನೇ ಆರೋಪಿಯ ಬಂಧನ

|

ಮುಂಬೈ, ಅಕ್ಟೋಬರ್ 13: ನಕಲಿ ಟಿಆರ್‌ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ಸ್ ರಿಸರ್ಚ್ ಗ್ರೂಪ್‌ನ ಮಾಜಿ ಸಿಬ್ಬಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಮಿರ್ಜಾಪುರ್‌ನಲ್ಲಿ ವಿನಯ್ ತ್ರಿಪಾಠಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಿದಂತಾಗಿದೆ.

ಟಿಆರ್‌ಪಿ ನಕಲಿ ಜಾಲ: ರಿಪಬ್ಲಿಕ್ ಟಿವಿ ಸೇರಿ 3 ಚಾನೆಲ್‌ಗಳ ವಿಚಾರಣೆ

ಬಳಕೆದಾರರಿಗೆ ಹಣ ಹಂಚಿಕೆ ಹಾಗೂ ಟಿವಿ ಚಾನೆಲ್‌ಗಳೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ವಿನಯ್ ತ್ರಿಪಾಠಿ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನುವುದು ಮುಂಬೈ ಪೊಲೀಸರ ವಾದವಾಗಿದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ, ಬಾಕ್ಸ್ ಸಿನಿಮಾ ಹಾಗೂ ಫಕ್ತ್ ಮರಾಠಿ ವಾಹಿನಿ ಹಾಗೂ ಅದರ ಮುಖ್ಯಸ್ಥರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ ಹನ್ಸ್ ರಿಸರ್ಚ್ ಗ್ರೂಪ್‌ನ ಸಿಇಒ ಹೇಳಿಕೆಯನ್ನು ಕೂಡ ಪಡೆಯಲಾಗಿದೆ, ಮತ್ತು ದೂರುದಾರರ ಹೇಳಿಕೆಯನ್ನೂ ದಾಖಲಿಸಲಾಗಿದೆ.

ಇನ್ನೊಂದೆಡೆ ರಿಪಬ್ಲಿಕ್ ಟಿವಿಯ ಸಿಇಒ ವಿಕಾಸ್ ಕಂಚನ್‌ದಾನಿ ಹಾಗೂ ವಾಹಿನಿಯ ಪ್ರಸರಣ ಮುಖ್ಯಸ್ಥ ಘನಶ್ಯಾಂ ಸಿಂಗ್ ಅವರ ಹೇಳಿಕೆಯನ್ನು ಸತತ ಎರಡನೇ ದಿನ ದಾಖಲಿಸಿಕೊಳ್ಳಲಾಗಿದೆ.

ಈಗಾಗಲೇ ರಿಪಬ್ಲಿಕ್ ಸಿಒಒ ಹರ್ಷ್ ಭಂಡಾರಿಯನ್ನು ಭಾನುವಾರ ವಿಚಾರಣೆ ನಡೆಸಲಾಗಿದೆ. ಮುಂಬೈ ಪೊಲೀಸರ ಪ್ರಕಾರ ಬಂಧಿತ ವಿಶಾಲ್ ಭಂಡಾರಿ ಹೇಳಿದಂತೆ ವಿನಯ್ ತ್ರಿಪಾಠಿಯ ಬಳಕೆದಾರರಿಗೆ ಹಣ ಹಂಚುತ್ತಿದ್ದ, ಹಾಗೆಯೇ ಅವರಿಗೆ ನಿರ್ದಿಷ್ಟ ಚಾನೆಲ್‌ಗಳನ್ನು ನೋಡುವಂತೆ ಸೂಚನೆ ನೀಡುತ್ತಿದ್ದ, ಹೀಗಾಗಿ ತ್ರಿಪಾಠಿ ಪ್ರಕರಣದ ಪ್ರಮುಖ ಆರೋಪಿಯಾಗಲಿದ್ದಾರೆ.

ಈ ಹಿಂದೆ ವಿನಯ್ ತ್ರಿಪಾಠಿ ಹನ್ಸ್ ರಸರ್ಚ್ ಗ್ರೂಪ್‌ನ ಸಿಬ್ಬಂದಿಯಾಗಿದ್ದಾಗ ಟಿಆರ್‌ಪಿಯಲ್ಲಿ ವ್ಯತ್ಯಾಸವಾಗುತ್ತಿರುವುದರ ಬಗ್ಗೆ ಹನ್ಸ್ ಸಂಸ್ಥೆಗೆ ಸಂದೇಹ ಬಂದಿತ್ತು, ಇದರಲ್ಲಿ ತ್ರಿಪಾಠಿ ಭಾಗಿಯಾಗಿದ್ದಾರೆ ಎನ್ನುವ ಅನುಮಾನದ ಮೇರೆಗೆ ಆತಂತಿಕ ತನಿಖೆಗೆ ಆದೇಶಿಸಿತ್ತು.ಈ ಹಂತದಲ್ಲಿಯೇ ವಿನಯ್ ತ್ರಿಪಾಠಿ ಕೆಲಸವನ್ನು ಬಿಟ್ಟಿದ್ದ.

English summary
The Mumbai Police's Crime Branch investigating the television rating points (TRPs) scam has arrested Vinay Tripathi, a former employee of the Hansa Research Group, from Uttar Pradesh's Mirzapur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X