• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Today's Update: ಮಹಾರಾಷ್ಟ್ರದಲ್ಲಿ 2933 ಕೇಸ್, ತಮಿಳುನಾಡಿನಲ್ಲಿ 1373 ಕೇಸ್

|

ಮುಂಬೈ, ಜೂನ್ 4: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 77,793ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ ಹೊಸದಾಗಿ 2933 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ.

ಕಳೆದ 24 ಗಂಟೆಯಲ್ಲಿ 123 ಮಂದಿ ಮೃತಪಟ್ಟಿದ್ದು, ಇದುವರೆಗೂ ಮಹಾರಾಷ್ಟ್ರದಲ್ಲಿ 2710 ಜನರು ಸಾವನ್ನಪ್ಪಿದ್ದಾರೆ. ಇನ್ನು ಕೊರೊನಾ ಹಾಟ್‌ಸ್ಪಾಟ್‌ ಮುಂಬೈನಲ್ಲಿ 1442 ಕೊರೊನಾ ಕೇಸ್ ವರದಿಯಾಗಿದ್ದು, ನಗರದಲ್ಲಿ ಒಟ್ಟು 44,704 ಕೇಸ್ ವರದಿಯಾಗಿದೆ. ಮುಂಬೈನಲ್ಲಿ ಇದುವರೆಗೂ 1465 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಬ್ರೇಕಿಂಗ್: ಕರ್ನಾಟಕದಲ್ಲಿ ಕೊವಿಡ್-19ಗೆ ನಾಲ್ಕು ಮಂದಿ ಬಲಿ!

ಮಹಾರಾಷ್ಟ್ರ ನಂತರ ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಇಂದು 1373 ಮಂದಿಗೆ ಕೊವಿಡ್ ಸೋಂಕು ತಗುಲಿದೆ. ರಾಜ್ಯದಲ್ಲೀಗ ಒಟ್ಟು ಸೋಂಕಿತರ ಸಂಖ್ಯೆ 27,256ಕ್ಕೆ ಜಿಗಿದಿದೆ. ಇದುವರೆಗೂ 233 ಜನರು ಪ್ರಾಣ ಕಳೆದುಕೊಂಡಿದ್ದಾರೆ.

* ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ 368 ಜನರಿಗೆ ಕೊರೊನಾ ವೈರಸ್ ತಗುಲಿದೆ. ರಾಜ್ಯದಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 6876ಕ್ಕೆ ಏರಿದೆ.

* ಪಂಜಾಬ್‌ನಲ್ಲಿ ಇಂದು 39 ಜನರಿಗೆ ಸೋಂಕು ದೃಢವಾಗಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2415ಕ್ಕೆ ಜಿಗಿದಿದೆ.

* ಉತ್ತರ ಪ್ರದೇಶದಲ್ಲಿ ಹೊಸದಾಗಿ 371 ಕೇಸ್ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9237ಕ್ಕೆ ಏರಿಕೆಯಾಗಿದೆ.

* ಕೇರಳದಲ್ಲಿ ಹೊಸದಾಗಿ 94 ಮಂದಿಗೆ ಕೊರೊನಾ ವೈರಸ್ ತಗುಲಿದೆ. ರಾಜ್ಯದಲ್ಲಿ ಒಟ್ಟು 884 ಕೇಸ್ ಸಕ್ರಿಯವಾಗಿದೆ.

* ರಾಜಸ್ಥಾನದಲ್ಲಿ ಹೊಸದಾಗಿ 210 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಕೇಸ್ 9862ಕ್ಕೆ ಜಿಗಿದಿದೆ.

ಜಗತ್ತಿನಲ್ಲಿ ಒಟ್ಟು 66 ಲಕ್ಷ (6,609,746) ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 388,616 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 3,193,973 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ.

English summary
2933 new cases confirmed in Maharashtra and taking the total number of cases to 77,793. in TamilNadu reported 1,373 COVID19 cases & 12 deaths today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X