• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದ ಒಂದೇ ಕುಟುಂಬದ 22 ಮಂದಿಗೆ ಕೊರೊನಾ ಸೋಂಕು

|

ಮುಂಬೈ, ಮಾರ್ಚ್ 31: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಒಟ್ಟು 25 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು ಅದರಲ್ಲಿ 22 ಮಂದಿ ಒಂದೇ ಕುಟುಂಬದವರಾಗಿದ್ದಾರೆ ಎನ್ನುವ ವಿಷಯ ಬೆಳಕಿಗೆ ಬಂದಿದೆ.

ಈ ಕುಟುಂಬದ ನಾಲ್ಕು ಜನರು ಸೌದಿ ಅರೇಬಿಯಾದ ಹಜ್ ಯಾತ್ರೆಗೆ ಹೋಗಿ ವಾಪಸ್ ಆಗಿದ್ದರು. ಈ ನಾಲ್ವರಿಗೆ ಮಾರ್ಚ್ 19ರಂದು ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿತ್ತು.

ಕೊರೊನಾ: ದೆಹಲಿಯಲ್ಲಿ ಮಸೀದಿಗೆ ತೆರಳಿದ್ದ ತೆಲಂಗಾಣದ 6 ಮಂದಿ ಸಾವುಕೊರೊನಾ: ದೆಹಲಿಯಲ್ಲಿ ಮಸೀದಿಗೆ ತೆರಳಿದ್ದ ತೆಲಂಗಾಣದ 6 ಮಂದಿ ಸಾವು

ಆಗ ಅವರ ಜೊತೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ನಾಲ್ವರನ್ನು ಮಾರ್ಚ್ 19ರಂದು ಮೀರಜ್‍ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇದುವರೆಗೂ ದೇಶದಲ್ಲಿ 33 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

22 ಮಂದಿ ಒಂದೇ ಕುಟುಂಬದವರು

22 ಮಂದಿ ಒಂದೇ ಕುಟುಂಬದವರು

ಜಿಲ್ಲಾಧಿಕಾರಿ ಅಭಿಜೀತ್ ಚೌಧರಿ ಮಾತನಾಡಿ, 22 ಸೋಂಕಿತರು ದೊಡ್ಡ ಕುಟುಂಬಕ್ಕೆ ಸೇರಿದವರು ಎಂದು ದೃಢಪಟ್ಟಿದೆ. ಈ ಕುಟುಂಬ ಸಾಂಗ್ಲಿಯ ಇಸ್ಲಾಂಪುರ್ ತಹಸಿಲ್‌ನಲ್ಲಿ ಇರುವ ಒಂದು ಸಣ್ಣ ಮನೆಯಲ್ಲಿ ಈ ಕುಟುಂಬ ವಾಸಿಸುತ್ತಿದೆ. ಇತ್ತೀಚೆಗೆ ಈ ಕುಟುಂಬದ ನಾಲ್ಕು ಜನರು ವಿದೇಶಕ್ಕೆ ಹೋಗಿ ಸೋಂಕಿಗೆ ಒಳಗಾಗಿದ್ದಾರೆ. ಈ ನಾಲ್ವರು ವಾಪಸ್ ಬಂದಾಗ ಮನೆಯವರು ಇವರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದ ಕಾರಣ ಎಲ್ಲರಿಗೂ ರೋಗ ತಗುಲಿದೆ ಎಂದು ತಿಳಿಸಿದ್ದಾರೆ.

ಮಾರ್ಚ್ 21 ರಂದು ಕುಟುಂಬದ ಮತ್ತೈವರ ಪರೀಕ್ಷೆ

ಮಾರ್ಚ್ 21 ರಂದು ಕುಟುಂಬದ ಮತ್ತೈವರ ಪರೀಕ್ಷೆ

ಮಾರ್ಚ್ 21ರಂದು ಇದೇ ಕುಟುಂಬದ ಇನ್ನೂ ಐವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಇದರಿಂದ ಭಯಬಿದ್ದ ಸರ್ಕಾರ ಕುಟುಂಬದ ಎಲ್ಲಾ ಸದಸ್ಯರನ್ನು ಚಿಕಿತ್ಸೆಗೆ ಒಳಪಡಿಸಿದ್ದರು. ಈ ವೇಳೆ ಮಾರ್ಚ್ 27 ಇದೇ ಕುಟುಂಬದ ಮೂವರಿಗೂ ಮತ್ತೆ ಕೊರೊನಾ ವೈರಸ್ ಇರುವುದು ಪರೀಕ್ಷೆ ನಡೆಸಿದಾಗ ದೃಢಪಟ್ಟಿತ್ತು. ಈ ಮೂಲಕ ಕುಟುಂಬದ 12 ಮಂದಿಗೆ ಕೊರೊನಾ ಇರುವುದು ಪತ್ತೆಯಾಗಿತ್ತು.

ಮಾರಣಾಂತಿಕ ಕೊರೊನಾ ವಿರುದ್ಧ ಹೋರಾಡಿ ಗೆದ್ದ ಕೇರಳದ ವೃದ್ಧ ದಂಪತಿಮಾರಣಾಂತಿಕ ಕೊರೊನಾ ವಿರುದ್ಧ ಹೋರಾಡಿ ಗೆದ್ದ ಕೇರಳದ ವೃದ್ಧ ದಂಪತಿ

ಕುಟುಂಬದ ಸಂಪರ್ಕದಲ್ಲಿದ್ದ 325 ಮಂದಿಗೆ ಗೃಹ ಬಂಧನ

ಕುಟುಂಬದ ಸಂಪರ್ಕದಲ್ಲಿದ್ದ 325 ಮಂದಿಗೆ ಗೃಹ ಬಂಧನ

ಈ 12 ಜನ ಆದ ಮೇಲೆ ಪರೀಕ್ಷೆ ಮಾಡಿದ ಕುಟುಂಬ ಉಳಿದ 13 ಜನರಲ್ಲೂ ಇಂದು ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಇದರಲ್ಲಿ ಎರಡು ವರ್ಷದ ಗಂಡು ಮಗುವಿದೆ. ಹೀಗಾಗಿ ಕುಟುಂಬದ ಜೊತೆ ಸಂಪರ್ಕದಲ್ಲಿ ಇದ್ದ ಸುಮಾರು 325 ಜನರನ್ನು ಸರ್ಕಾರ ಹೋಂ ಕ್ವಾರೆಂಟೈನ್ ಇರುವಂತೆ ಸೂಚಿಸಿದ್ದು, ಜೊತೆಗೆ ಸೋಂಕಿತರನ್ನು ಮೀರಾಜ್‍ನ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎಲ್ಲರೂ ಒಟ್ಟಿಗೆ ಇದ್ದಿದ್ದರಿಂದ ಸೋಂಕು ಹರಡಿದೆ

ಎಲ್ಲರೂ ಒಟ್ಟಿಗೆ ಇದ್ದಿದ್ದರಿಂದ ಸೋಂಕು ಹರಡಿದೆ

ಜಿಲ್ಲಾ ವೈದ್ಯಾಧಿಕಾರಿ ಸುಲಿಂಖೆ ಮಾತನಾಡಿ, ಈ ಕುಟುಂಬದವರು ಪರಸ್ಪರ ಒಟ್ಟಿಗೆ ಇದ್ದರು. ಕುಟುಂಬದವರೆಲ್ಲ ಒಟ್ಟಿಗೆ ಇದ್ದ ಕಾರಣ ಕೊರೊನಾ ಎಲ್ಲರಿಗೂ ಹಬ್ಬಿದೆ. ಕೊರೊನಾ ವೈರಸ್ ಇರುವ ವ್ಯಕ್ತಿ ಕೆಮ್ಮಿದರೆ ಆ ಜಾಗದಲ್ಲಿ ವೈರಸ್ ಇರುತ್ತದೆ. ಅದನ್ನು ಮನೆಯವರು ಮುಟ್ಟಿದರೆ ಅವರಿಗೂ ಸೋಂಕು ಹರಡುತ್ತದೆ. ಹೀಗಾಗಿ ಈಗ ಕುಟುಂಬದ ಎಲ್ಲರಿಗೂ ಸೋಂಕು ತಗುಲಿದೆ ಎಂದು ಹೇಳಿದ್ದಾರೆ.

ಕೇರಳದಲ್ಲಿ ಕೊರೊನಾ ವೈರಸ್‌ಗೆ 2ನೇ ಬಲಿಕೇರಳದಲ್ಲಿ ಕೊರೊನಾ ವೈರಸ್‌ಗೆ 2ನೇ ಬಲಿ

English summary
22 People Tested Positive For Coronavirus In Maharashtra's Sangli .these patients are related to or had come in contact with a single family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X