ಮಹಾರಾಷ್ಟ್ರದಲ್ಲಿ ತರಬೇತಿ ವಿಮಾನ ಅಪಘಾತ : 2 ಸಾವು
ಮುಂಬೈ, ಏಪ್ರಿಲ್ 26 : ಗೋಂದಿಯಾದ ರಾಷ್ಟ್ರೀಯ ಫ್ಲೈಯಿಂಗ್ ತರಬೇತಿ ಸಂಸ್ಥೆಗೆ ಸೇರಿದ ತರಬೇತಿ ವಿಮಾನವೊಂದು ಅಪಘಾತಕ್ಕೀಡಾದ ಪರಿಣಾಮ ಇಬ್ಬರು ಪೈಲೆಟ್ ಗಳು ಸಾವನ್ನಪ್ಪಿರುವ ಘಟನೆ ಗೋಂದಿಯಾ ನದಿ ಸಮೀಪದ ಕಿರೋರಿ ಪಟ್ಟಣದ ಬಳಿ ಬುಧವಾರ ನಡೆದಿದೆ.
ಡಿಎ42 ಹೆಸರಿನ ವಿಮಾನ ತರಬೇತಿ ವೇಳೆ ದುರಂತಕ್ಕೀಡಾಗಿದೆ. ಇದರಲ್ಲಿ ಹಿರಿಯ ತರಬೇತುದಾರ ರಾಜನ್ ಗುಪ್ತಾ ಹಾಗೂ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಶಿವಾನಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ದುರಂತದ ಬಗ್ಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ದುರಂತ ನಡೆಯುವ ಮುನ್ನ ಈ ವಿಮಾನ ಸುಮಾರು 9 ಗಂಟೆ 40 ನಿಮಿಷಗಳ ಕಾಲ ಮುಂಬೈ ಏರ್ ಟ್ರಾಫಿಕ್ ಕಂಟ್ರೋಲರ್(ಎಟಿಸಿ) ಜೊತೆಗೆ ಸಂಪರ್ಕದಲ್ಲಿರಲಿಲ್ಲ ಎಂದು ಮೂಲಗಳು ತಿಳಿಸಿವೆ












Click it and Unblock the Notifications