• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈ : ಕೊರೊನಾ ಸೋಂಕಿತರಿಗಾಗಿ 1000 ಹಾಸಿಗೆ ಆಸ್ಪತ್ರೆ ನಿರ್ಮಾಣ

|

ಮುಂಬೈ, ಮೇ 03 : ಕೊರೊನಾ ಸೋಂಕಿತ ವಿಚಾರದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ರಾಜ್ಯ ಮಹಾರಾಷ್ಟ್ರ. 12,296 ಪ್ರಕರಣಳು ಇದುವರೆಗೂ ರಾಜ್ಯದಲ್ಲಿ ದಾಖಲಾಗಿವೆ. 521 ಜನರು ಮೃತಪಟ್ಟಿದ್ದಾರೆ. ಸೋಂಕು ಹರಡುವುದನ್ನು ತಡೆಯಲು ಪ್ರಯತ್ನ ಮಾಡಲಾಗುತ್ತಿದೆ.

ಮುಂಬೈ ಮಹಾನಗರ ಕ್ಷೇತ್ರ ವಿಕಾಸ ಪ್ರಾಧಿಕರಣ ಮುಂಬೈನಗರದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯೊಂದನ್ನು ಸಿದ್ಧಪಡಿಸುತ್ತಿದೆ. ಬಾಂದ್ರಾ ಸಮೀಪದ ಮೈದಾನದಲ್ಲಿ ಈ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದೆ.

ದೇಶದಲ್ಲಿ 130 ಜಿಲ್ಲೆ ರೆಡ್ ಜೋನ್: ದೆಹಲಿ, ಮುಂಬೈ, ಬೆಂಗಳೂರು ಡೇಂಜರ್

ಇದುವರೆಗೂ ಮುಂಬೈ ನಗರದಲ್ಲಿ 8539 ಕೊರೊನಾ ಪ್ರಕರಣಗಳು ದಾಖಲಾಗಿವೆ. 322 ಜನರು ಮೃತಪಟ್ಟಿದ್ದಾರೆ. ಇದರಿಂದಾಗಿ 1000 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಒಂದು ವೇಳೆ ಸೋಂಕಿತರ ಸಂಖ್ಯೆ ಹೆಚ್ಚಳವಾದರೆ ಆಸ್ಪತ್ರೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಕೊರೊನಾ ವಿರುದ್ಧ ಹೋರಾಡಲು ನರ್ಸ್ ಆದ ಮುಂಬೈ ಮೇಯರ್

ಮುಂಬೈ ಮಹಾನಗರ ಕ್ಷೇತ್ರ ವಿಕಾಸ ಪ್ರಾಧಿಕರಣಕ್ಕೆ ಸೇರಿದ ಬಾಂದ್ರಾ ಸಮೀಪದ ಮೈದಾನದಲ್ಲಿ ಈ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಚೀನಾದ ವುಹಾನ್‌ನಲ್ಲಿ ನಿರ್ಮಾಣ ಮಾಡಲಾದ ಸ್ಥಳಾಂತರ ಮಾಡಬಹುದಾದ ಮಾದರಿಯ ಆಸ್ಪತ್ರೆ ಇದಾಗಿದೆ.

ಮುಂಬೈ ಪೊಲೀಸ್‌ಗೆ 8 ಹೋಟೆಲ್ ವ್ಯವಸ್ಥೆ ಮಾಡಿದ ರೋಹಿತ್ ಶೆಟ್ಟಿ

ಮಹಾರಾಷ್ಟ್ರದ ಮುಂಬೈನಲ್ಲಿ 8359, ಪುಣೆಯಲ್ಲಿ 1339, ಥಾಣೆಯಲ್ಲಿ 1086, ನಾಸಿಕ್‌ನಲ್ಲಿ 262 ಕೊರೊನಾ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಮುಂಬೈನ ಧಾರಾವಿ ಕೊಳಗೇರಿ ಪ್ರದೇಶದಲ್ಲಿ 127 ಕೋವಿಡ್ - 19 ಪ್ರಕರಣಗಳು ದಾಖಲಾಗಿವೆ.

ಧಾರಾವಿ ಕೊಳಗೇರಿ ಪ್ರದೇಶ ನಗರದಲ್ಲಿಯೇ ಅತಿ ಹೆಚ್ಚು ಕೊರೊನಾ ಪ್ರಕರಣ ದಾಖಲಾದ ಪದೇಶವಾಗಿದೆ. ಇಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಸವಾಲಿನ ಕೆಲಸವಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ಹೇಳಿದೆ.

ಮುಂಬೈ ಮತ್ತು ಪುಣೆ ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರತ್ಯೇಕವಾದ ಮಾರ್ಗಸೂಚಿ ತಯಾರು ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಖಾಸಗಿ ಕಚೇರಿಗಳು ಎರಡೂ ನಗರದಲ್ಲಿ ಕಾರ್ಯ ನಿರ್ವಹಣೆ ಮಾಡಲು ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ.

English summary
Mumbai Metropolitan Region Development Authority will construct 1000 bedded COVID19 hospital at MMRDA ground in Bandra Kurla Complex. Mumbai recorded 8539 COVID 19 case so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X