Moodabidri Elections: ಚುನಾವಣಾ ಆಖಾಡದಲ್ಲಿ ಬಿಜೆಪಿ-ಕಾಂಗ್ರೆಸ್ಸಿದ್ದೇ ಸದ್ದು, ಗದ್ದಲ
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಮೂಡಬಿದಿರೆ ಕ್ಷೇತ್ರವನ್ನು ತುಳುವಿನಲ್ಲಿ ಬೆದ್ರ ಎಂದೂ ಕರೆಯುತ್ತಾರೆ. ಜಿಲ್ಲಾ ಕೇಂದ್ರ ಮಂಗಳೂರಿನಿಂದ 35ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವನ್ನು ಜೈನಕಾಶಿ ಎಂದೂ ಕರೆಯಲಾಗುತ್ತದೆ. ಈ ಹಿಂದೆ ಕಾರ್ಕಳ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಮೂಡಬಿದಿರೆ ಹಿಂದೆ ಚೌಟ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿನ ಅರಮನೆಯಲ್ಲಿ ಇಂದಿಗೂ ಅರಸು ವಂಶಸ್ಥರು ವಾಸವಾಗಿದ್ದಾರೆ.
ನಾಗಾರಾಧನೆ, ಭೂತ ಕೋಲಗಳಂತಹ ಆಚರಣೆ, ಯಕ್ಷಗಾನ ಬಯಲಾಟ, ನಾಟಕ, ಸಂಗೀತ, ನೃತ್ಯ ಕಲೆಗಳನ್ನು ಒಳಗೊಂಡಿರುವ ಮೂಡಬಿದಿರೆಯ ಸಾವಿರ ಕಂಬದ ಬಸದಿ ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ. ಶಿಕ್ಷಣ ವಿಚಾರದಲ್ಲೂ ಮಂಚೂಣಿಯಲ್ಲಿರುವ ಈ ಕ್ಷೇತ್ರದಲ್ಲಿ ಆಳ್ವಾಸ್ ಪ್ರತಿಷ್ಠಾನ, ಮಹಾವೀರ ವಿದ್ಯಾಲಯ, ಶ್ರೀಧವಳ ವಿದ್ಯಾಲಯ ಮುಂತಾದವಿದೆ.

ಕೃಷಿ, ಕೈಗಾರಿಕೆಗಳು, ಭತ್ತ, ಎಣ್ಣೆಯ ಗಾಣಗಳು, ಆಯುರ್ವೇದೀಯ ಔಷಧ, ಗೋಡಂಬಿ ಕ್ಷೇತ್ರದ ಪ್ರಮುಖ ಆರ್ಥಿಕ ಮೂಲ. ಇನ್ನು, ಇಲ್ಲಿನ ಚುನಾವಣಾ ವಿಚಾರಕ್ಕೆ ಬಂದಾಗ, 2018ರ ಚುನಾವಣೆಯ ವರೆಗೂ ಈ ಕ್ಷೇತ್ರ ಕಾಂಗ್ರೆಸ್ಸಿನ ಭದ್ರಕೋಟೆಯಾಗಿತ್ತು. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಭಾರೀ ಲೀಡ್ ನಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ಸಿಗೆ ಹಿನ್ನಡೆಯನ್ನು ತಂದೊಡ್ಡಿತ್ತು.
1962-2018ರ ವರೆಗಿನ ಹದಿಮೂರು ಚುನಾವಣೆಯಲ್ಲಿ ಕಾಂಗ್ರೆಸ್ ಏಳು ಬಾರಿ ಗೆದ್ದಿತ್ತು. ಇದರಲ್ಲಿ 1999, 2004, 2008, 2013ರಲ್ಲಿ ಕಾಂಗ್ರೆಸ್ಸಿನ ಅಭಯಚಂದ್ರ ಜೈನ್ ಜಯಗಳಿಸಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಇವರು ಬಿಜೆಪಿಯ ಉಮಾನಾಥ ಕೋಟ್ಯಾನ್ ವಿರುದ್ದ 29,799 ಮತಗಳ ಅಂತರದಿಂದ ಸೋಲುಂಡಿದ್ದರು. ಕಳೆದ ಚುನಾವಣೆಯಲ್ಲಿ ಮಂಗಳೂರು (ಉಳ್ಳಾಲ) ಕ್ಷೇತ್ರವೊಂದನ್ನು ಹೊರತು ಪಡಿಸಿ ಬಿಜೆಪಿ ಎಲ್ಲಾ ಏಳು ಕ್ಷೇತ್ರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.
ಹಾಲೀ ಶಾಸಕರ ಮೇಲೆ ಸ್ಥಳೀಯರಿಗೆ ಉತ್ತಮ ಅಭಿಪ್ರಾಯವಿದೆ. ಉಮಾನಾಥ ಕೋಟ್ಯಾನ್ ಸರಳ, ಜನರ ಕೈಗೆ ಸುಲಭವಾಗಿ ಸಿಗುತ್ತಾರೆ, ಶಕ್ತಿಮೀರಿ ತನ್ನ ಕ್ಷೇತ್ರದ ಕೆಲಸವನ್ನು ಮಾಡುತ್ತಾರೆ ಎಂಬ ಅಭಿಪ್ರಾಯ ಕೂಡ ಜನರಲ್ಲಿರುವುದು ಬಿಜೆಪಿಗಿರುವ ಪ್ಲಸ್ ಪಾಯಿಂಟ್. ಇನ್ನು, ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ ಬೇರು ಬಲವಾಗಿರುವುದು ಕಾಂಗ್ರೆಸ್ಸಿಗೆ ಚುನಾವಣೆ ಗೆಲ್ಲಲು ಇರುವ ಇನ್ನೊಂದು ಸವಾಲಾಗಿದೆ.

ಬಿಜೆಪಿಯನ್ನು ಎದುರಿಸುವಲ್ಲಿ ಅನುಭವದ ಕೊರತೆ
ಕಾಂಗ್ರೆಸ್ ಯುವಪಡೆಗೆ ಬಿಜೆಪಿಯನ್ನು ಎದುರಿಸುವಲ್ಲಿ ಅನುಭವದ ಕೊರತೆ ಇದೆ ಎಂದು ಸ್ಥಳೀಯ ರಾಜಕೀಯವನ್ನು ಉಲ್ಲೇಖಿಸಿ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಡಿ.ಕೆ.ಶಿವಕುಮಾರ್ ಹುಡುಗ ಎಂದೇ ಕರೆಯಲ್ಪಡುವ ಮಿಥುನ್ ರೈಗೆ ಮೂಡಬಿದಿರೆ ಟಿಕೆಟ್ ಸಿಕ್ಕಿದೆ. ಹಾಗಾಗಿ, ಇಲ್ಲಿನ ಚುನಾವಣೆ ಮೆರುಗು ಪಡೆಯುವುದಂತೂ ಹೌದು.
ಹಾಲೀ ಶಾಸಕರಾಅದ ಉಮಾನಾಥ ಕೋಟ್ಯಾನ್
ಹಾಲೀ ಶಾಸಕರಾದ ಉಮಾನಾಥ ಕೋಟ್ಯಾನ್ ಅವರನ್ನು ಯಾವುದೇ ವಿವಾದದಲ್ಲಿ ಸಿಲುಕಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ. ಆದರೆ, ಮಿಥುನ್ ರೈ ಇತ್ತೀಚಿನ ದಿನಗಳಲ್ಲಿ ಉಡುಪಿ ಶ್ರೀಕೃಷ್ಣಮಠದ ವಿಚಾರದಲ್ಲಿ ನೀಡಿದ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇನ್ನು, ದಕ್ಷಿಣ ಕನ್ನಡಲ್ಲಿ ಅಲ್ಲಲ್ಲಿ ವೋಟ್ ಬ್ಯಾಂಕ್ ಅನ್ನು ಹೊಂದಿರುವ ಎಸ್ಡಿಪಿಐ, ಕಾಂಗ್ರೆಸ್ಸಿಗೆ ತಲೆನೋವಾಗಬಹುದು. ಕಾಂಗ್ರೆಸ್ಸಿನಿಂದ ಮಿಥುನ್ ರೈ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆಯಾಗಿದೆ. ಬಿಜೆಪಿಯಿಂದ ಬಹುತೇಕ ಉಮಾನಾಥ ಕೋಟ್ಯಾನ್ ಅಭ್ಯರ್ಥಿ, ಆದರೂ ಬೇರೆ ಬೇರೆ ಹೆಸರುಗಳೂ ಕೇಳಿ ಬರುತ್ತಿವೆ.
1983ಕ್ಕೂ ಹಿಂದೆ ಜನತಾ ಪಕ್ಷವೂ ಗೆದ್ದಿದೆ
ಮೂಡಬಿದಿರೆಯಲ್ಲಿ ಕಾಂಗ್ರೆಸ್ ಗೆದ್ದಿದೆ, ಜೆಡಿಎಸ್ ಗೆದ್ದಿದೆ, 1983ಕ್ಕೂ ಹಿಂದೆ ಜನತಾ ಪಕ್ಷವೂ ಗೆದ್ದಿದೆ. ಆದರೆ ಒಮ್ಮೆಯೂ ಬಿಜೆಪಿ ಗೆದ್ದಿರಲಿಲ್ಲ, ಅದನ್ನು ಕಳೆದ ಚುನಾವಣೆಯನ್ನು ಗೆಲ್ಲುವ ಮೂಲಕ ಬಿಜೆಪಿ ಅದನ್ನು ಸರಿಪಡಿಸಿಕೊಂಡಿದೆ. 2013ರ ಚುನಾವಣೆಯಲ್ಲಿ ಅಭಯಚಂದ್ರ ಜೈನ್ 4,550 ಮತಗಳ ಅಂತರದಿಂದ ಉಮಾನಾಥ ಕೋಟ್ಯಾನ್ ವಿರುದ್ದ ಜಯಗಳಿಸಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಅಭಯಚಂದ್ರ ಜೈನ್ ಸೋಲಿನ ಅಂತರ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳುವಂತಿತ್ತು.
2018ರ ಅಂಕಿಅಂಶದ ಪ್ರಕಾರ ಮತದಾರರ ಸಂಖ್ಯೆ ಹೀಗಿದೆ:
| ಪುರುಷರು | 96,753 |
| ಮಹಿಳೆಯರು | 103,300> |
| ಇತರರು | 13 |
| ಒಟ್ಟೂ | 2,00,066 |
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications