ಬಜ್ಪೆಯಲ್ಲಿ ಯುವಕನಿಗೆ ಚೂರಿ ಇರಿತ:ಸಿಸಿ ಕ್ಯಾಮೆರಾದಲ್ಲಿ ಸೆರೆ ಆಯ್ತು ದುಷ್ಕರ್ಮಿಗಳ ಕೃತ್ಯ
ಮಂಗಳೂರು, ಅಕ್ಟೋಬರ್. 30: ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಅಂಗಡಿ ಬಳಿ ನಿಂತಿದ್ದ ಯುವಕನಿಗೆ ಚೂರಿ ಇರಿದು ಪರಾರಿಯಾದ ಘಟನೆ ಸೋಮವಾರ (ಅ29) ಸಂಜೆ ಮಂಗಳೂರು ಹೊರವಲಯದ ಬಜ್ಪೆಯ ಭಟ್ರಕೆರೆ ಎಂಬಲ್ಲಿ ನಡೆದಿದೆ.
ಭಟ್ರಕೆರೆಯ ಪಡೀಲ್ ನಿವಾಸಿ ಶಾಹೀಕ್ (18) ಚೂರಿ ಇರಿತಕ್ಕೊಳಗಾದ ಯುವಕ.

ಘಟನೆಯ ವಿವರ
ಶಾಹೀಕ್ ಬಜ್ಪೆಯ ಭಟ್ರಕೆರೆಯ ಅಂಗಡಿ ಬಳಿ ನಿಂತಿದ್ದರು. ಆಗ ಏಕಾಏಕಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಚೂರಿ ಇರಿದು ತಕ್ಷಣವೇ ಅಲ್ಲಿಂದ ಹೊರಟು ಹೋಗಿದ್ದಾರೆ. ಘಟನೆಯಲ್ಲಿ ಶಾಹಿಕ್ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಬಜ್ಪೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚೂರಿ ಇರಿತಕ್ಕೆ ಕಾರಣ ತಿಳಿದುಬಂದಿಲ್ಲ. ಚೂರಿ ಇರಿದು ದುಷ್ಕರ್ಮಿಗಳು ಬೈಕಿನಲ್ಲಿ ಪರಾರಿಯಾದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.











Click it and Unblock the Notifications