ಕಾಸರಗೋಡಲ್ಲಿ ಬಾಲಕಿಯನ್ನು ಐಸಿಸ್ ಗೆ ಸೇರ್ಪಡೆಗೊಳಿಸಲು ಯತ್ನ

ಕಾಸರಗೋಡು, ಜೂನ್ 5: ಕಾಸರಗೋಡಿನ ಬಾಲಕಿಯೊಬ್ಬಳನ್ನು ಐಸಿಸ್ ಉಗ್ರ ಸಂಘಟನೆಗೆ ಸೇರ್ಪಡೆಗೊಳಿಸಲು ಯತ್ನಿಸಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ನಗರ ಪೊಲೀಸರು ಕೇಸು ದಾಖಲಿಸಿ ತನಿಖೆಗೆ ಚಾಲನೆ ನೀಡಿದ್ದಾರೆ.

ಬಾಲಕಿಯ ತಾಯಿಯ ದೂರಿನ ಆಧಾರದಲ್ಲಿ ಕೇಸು ದಾಖಲಿಸಲಾಗಿದೆ. ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟಾಗುವ ರೀತಿಯಲ್ಲಿ ವರ್ತಿಸಿದ ಆರೋಪದಂತೆ ಭಾರತೀಯ ಶಿಕ್ಷಾ ಕಾಯ್ದೆ 295/ಎ ಪ್ರಕಾರ ಕೇಸು ದಾಖಲಿಸಲಾಗಿದೆ. ಆರೋಪ ಸಾಬೀತುಗೊಂಡಲ್ಲಿ ಏಳು ವರ್ಷವರೆಗೆ ಕಠಿಣ ಶಿಕ್ಷೆ ಅನುಭವಿಸಬೇಕಾಗಿ ಬರಬಹುದು.

Young girl forced to join ISIS at Kasaragod, case filed

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲೂ 'ಎ ಪ್ಲಸ್' ಶ್ರೇಣಿ ಗಳಿಸಿ ಉತ್ತೀರ್ಣಳಾದ ಬಾಲಕಿಯನ್ನು ವಂಚನೆ ಮೂಲಕ ಬಲೆಗೆ ಬೀಳಿಸಿ ಐಸಿಸ್ ಪರ ಮನ ಪರಿವರ್ತನೆಯಾಗುವಂತೆ ಪ್ರಯತ್ನಿಸಿರುವುದಾಗಿ ದೂರಲ್ಲಿ ಹೇಳಲಾಗಿದೆ.

"ನಿಜ ಹೆಸರು ತಿಳಿಸದೆ ಯುವಕನೊಬ್ಬ ಪಂಚಾಬಿನಿಂದ ನಾಲ್ಕು ಫೋನುಗಳನ್ನು ಉಪಯೋಗಿಸಿ ಸಂದೇಶಗಳನ್ನು ರವಾನಿಸುತ್ತಿದ್ದ. 2017 ಎಪ್ರಿಲ್ 1ರಿಂದಲೇ ಬಾಲಕಿಯ ಮೊಬೈಲಿಗೆ ಸಂದೇಶ ಬರಲು ಆರಂಭವಾಗಿತ್ತು. ನಿರಂತರ ಸಂದೇಶ ಬರುವುದರೊಂದಿಗೆ ಪುತ್ರಿಯ ಸ್ವಭಾವದಲ್ಲಿ ಬದಲಾವಣೆಗಳು ಕಂಡು ಬಂದಿದೆ," ಎಂದು ದೂರಿನಲ್ಲಿ ಹೇಳಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಇಂಟಲಿಜೆನ್ಸ್ ಹಾಗೂ ಕೇಂದ್ರ ಗುಪ್ತಚರ ಇಲಾಖೆ ತನಿಖೆಗೆ ಚಾಲನೆ ನೀಡಿದೆ.

ವಂಚನೆಗೊಳಗಾದ ಬಾಲಕಿ ಇದೀಗ ಎರ್ನಾಕುಳಂನಲ್ಲಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+