"ಯಕ್ಷಗಾನದ ಮಹಾಬಲ" ರಾಮ ಹೆಗಡೆ ಕೆರೆಮನೆ ನಿಧನ

ವಿಟ್ಲ, ಸೆಪ್ಟೆಂಬರ್ 19: 'ಯಕ್ಷಗಾನದ ಮಹಾಬಲ'ರೆಂದೇ ಖ್ಯಾತರಾಗಿದ್ದ ಪ್ರೊ.ರಾಮ ಹೆಗಡೆ ಕೆರೆಮನೆ (67) ಅವರು ಅನಾರೋಗ್ಯದಿಂದಾಗಿ ಬುಧವಾರ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಿದುಳಿನ ರಕ್ತಸ್ರಾವದಿಂದಾಗಿ ಮಣಿಪಾಲದಲ್ಲಿ ಚಿಕಿತ್ಸೆಗೆ ಸೇರಿದ್ದ ಅವರು ಕೋಮಾದಲ್ಲಿಯೇ ಇದ್ದರು.

Yakshagana Mahabala Ramahegde Keremane Death

ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿಸುಮಾರು 38 ವರ್ಷ ಗಣಿತ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ, ನಿವೃತ್ತರಾದ ಮೇಲೆ ಯಕ್ಷರಂಗದಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದರು. ಯಕ್ಷಗಾನದಲ್ಲಿರುವ ಅನೇಕ ಹಳೆಯ ರಾಗಗಳ ಕುರಿತು ಆಳವಾದ ಅಧ್ಯಯನ ಮಾಡಿ ದೀರ್ಘವಾದ ವೀಡಿಯೋ ಧ್ವನಿಸುರುಳಿ ರೆಕಾರ್ಡ್‌ ಮಾಡಿಸಲು ಸಿದ್ಧತೆ ಮಾಡಿಕೊಂಡಿದ್ದರು. ನೃತ್ಯಗಾರರೂ, ಹಾಡುಗಾರರೂ ಆಗಿದ್ದ ಅವರು ಮೃದಂಗ ವಾದನದಲ್ಲೂ ನಿಪುಣತೆ ಗಳಿಸಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ. ಅವರ ಅಂತ್ಯಕ್ರಿಯೆಯು ಬುಧವಾರ ಕೆರೆಮನೆಯಲ್ಲಿ ನೆರವೇರಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+