ವಿಶ್ವದ 100 ಅತ್ಯಂತ ಸಾಂಪ್ರದಾಯಿಕ ಐಸ್‌ಕ್ರೀಮ್‌ಗಳ ಪಟ್ಟಿ ಬಿಡುಗಡೆ: ಸ್ಥಾನ ಪಡೆದ ಮಂಗಳೂರಿನ "ಈ" ಎರಡು ಸಂಸ್ಥೆಗಳು
ಮಂಗಳೂರು, ಜುಲೈ, 24: ಸಾಮಾನ್ಯವಾಗಿ ಸ್ಥಳ, ಹಲವಾರು ರಂಗಗಳಲ್ಲಿ ಸಾಧನೆ ಮಾಡಿದವರು ವಿಶ್ವಮಟ್ಟದಲ್ಲಿ ಸ್ಥಾನ ಪಡೆದಿರುವುದನ್ನು ನಾವು ಕೇಳಿರುತ್ತೇವೆ. ಆದರೆ ಇದೀಗ "ಟೇಸ್ಟ್ ಅಟ್ಲಾಸ್" ಎನ್ನುವ ಸಂಸ್ಥೆ ವಿಶ್ವದ 100 ಅತ್ಯಂತ ಸಾಂಪ್ರದಾಯಿಕ ಐಸ್‌ಕ್ರೀಮ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ದೇಶದ 5 ಐಸ್ ಕ್ರೀಮ್ ಸಂಸ್ಥೆಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಈ ಪೈಕಿ ಮಂಗಳೂರಿನ ಎರಡು ಸಂಸ್ಥೆಗಳು ಕೂಡ ಸ್ಥಾನಗಳನ್ನು ಪಡೆದಿವೆ.
ಹಾಗಾದರೆ ವಿಶ್ವದ 100 ಅತ್ಯಂತ ಸಾಂಪ್ರದಾಯಿಕ ಐಸ್ ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಂಗಳೂರಿನ ಆ ಎರಡು ಸಂಸ್ಥೆಗಳು ಯಾವುವು, ಅವುಗಳ ಹಿನ್ನೆಲೆ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ವಿಶ್ವದ 100 ಅತ್ಯಂತ ಸಾಂಪ್ರದಾಯಿಕ ಐಸ್ ಕ್ರೀಮ್‌ಗಳ ಪಟ್ಟಿಯಲ್ಲಿ ಮುಂಬೈ, ಬೆಂಗಳೂರು & ಮಂಗಳೂರಿನ ಐಸ್‌ಕ್ರೀಮ್ ಸಂಸ್ಥೆಗಳಿಗೆ ಸ್ಥಾನ ನೀಡಲಾಗಿದೆ. ಈ ಸಂಸ್ಥೆಯು ಇತ್ತೀಚೆಗಷ್ಟೇ ವಿಶ್ವದ ಬೀದಿ ಬದಿಯಲ್ಲಿ ಸಿಗುವ ಸಿಹಿ ತಿನಿಸುಗಳ ಪಟ್ಟಿಯನ್ನೂ ಸಹ ಬಿಡುಗಡೆ ಮಾಡಿತ್ತು. ಇದರಲ್ಲಿ ರಾಜ್ಯದ ಮೈಸೂರು ಮೂಲದ ಮೈಸೂರು ಪಾಕ್‌ಗೆ 14ನೇ ಸ್ಥಾನ ಲಭಿಸಿತ್ತು. ಅಲ್ಲದೆ ಭಾರತದ ಮತ್ತೆರಡು ವಸ್ತುಗಳಿಗೂ ಮನ್ನಣೆ ನೀಡಿದೆ.
ಇದೀಗ ಐಸ್ ಕ್ರೀಮ್ ವಿಭಾಗದಲ್ಲಿ ಟಾಪ್ 100ರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಐಸ್‌ಕ್ರೀಮ್‌ನ ಗುಣಮಟ್ಟ, ಬಳಕೆಯಾಗುವ ವಸ್ತು ಹಾಗೂ ಇದನ್ನು ತಯಾರಿಸುವ, ಮಾರಾಟ ಮಾಡುವ ಸಂಸ್ಥೆಗಳ ಬಗ್ಗೆಯೂ ಮಾಹಿತಿಯನ್ನು ನೀಡಿದೆ.
ಸ್ಥಾನ ಗಿಟ್ಟಿಸಿಕೊಂಡ ದೇಶದ 5 ಐಸ್‌ಕ್ರೀಮ್ ಸಂಸ್ಥೆಗಳು
1. ಬೆಂಗಳೂರಿನ ಕಾರ್ನರ್ ಹೌಸ್‌ನಲ್ಲಿ ತಯಾರಿಸಲಾಗುವ "ಡೆತ್ ಬೈ ಚಾಕಲೇಟ್" ಐಸ್‌ಕ್ರೀಮ್
2. ಮುಂಬೈನ ಕೆ. ರುಸ್ತೋಮ್ ಆ್ಯಂಡ್ ಕೋನಲ್ಲಿ ಸಿಗುವ "ಮ್ಯಾಂಗೋ" ಐಸ್‌ಕ್ರೀಮ್ ಸ್ಯಾಂಡ್‌ವಿಚ್
3. ಮುಂಬೈನ ಅಪ್ಸರಾ ಐಸ್‌ಕ್ರೀಮ್ ಸಂಸ್ಥೆಯವರು ತಯಾರು ಮಾಡುವ "ಗ್ವಾವಾ" ಐಸ್‌ಕ್ರೀಮ್
4. ಮುಂಬೈ ನ್ಯಾಚುರಲ್ಸ್ ಸಂಸ್ಥೆಯ "ಟೆಂಡರ್ ಕೋಕನಟ್" ಐಸ್‌ಕ್ರೀಮ್
5. ಮಂಗಳೂರಿನ ಪಬ್ಬಾಸ್‌ನಲ್ಲಿ ಸಿಗುವ "ಗಡ್‌ಬಡ್" ಐಸ್‌ಕ್ರೀಮ್
ವಿಶ್ವದ ಜನಪ್ರಿಯ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ "ಟೇಸ್ಟ್ ಅಟ್ಲಾಸ್"ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತದ 5 ಐಸ್‌ಕ್ರೀಮ್ ಕಂಪನಿಗಳಲ್ಲಿ ಎರಡು ಮಂಗಳೂರು ಮೂಲವಾಗಿರುವುದು ವಿಶೇಷವಾಗಿದೆ. ಮುಂಬೈಯಲ್ಲಿರುವ ನ್ಯಾಚುರಲ್ಸ್ ಸಂಸ್ಥೆ ಮೂಲತಃ ಮಂಗಳೂರು ಮೂಲದವರಿಂದ ಹುಟ್ಟಿ ಬೆಳೆದ ಸಂಸ್ಥೆಯಾಗುದೆ. ಎರಡನೇ ಸಂಸ್ಥೆ ಐಡಿಯಲ್ ಐಸ್‌ಕ್ರೀಮ್ ಅವರ ಪಬ್ಬಾಸ್ ಐಸ್‌ಕ್ರೀಮ್ ಮಳಿಗೆಯಲ್ಲಿ ಸಿಗುವ "ಗಡ್‌ಬಡ್" ಕೂಡ ಸ್ಥಾನ ಗಿಟ್ಟಿಸಿಕೊಂಟಿದೆ.
ಹಾಗೆಯೇ ಬೆಂಗಳೂರಿನ ಕಾರ್ನರ್ ಹೌಸ್‌ನಲ್ಲಿ ತಯಾರು ಮಾಡುವ "ಡೆತ್ ಬೈ ಚಾಕಲೇಟ್"ಗೂ ಸ್ಥಾನ ನೀಡಲಾಗದೆ. ಈ ಮೂಲಕ ಕರ್ನಾಟಕದ ಮೂರು ಐಸ್ ಕ್ರೀಂ ಸಂಸ್ಥೆಗಳು ಪಟ್ಟಿಯಲ್ಲಿ ಸ್ಥಾನ ಪಡೆಕೊಂಡಿವೆ. ಈ ಬಗ್ಗೆ ಐಡಿಯಲ್ ಸಂಸ್ಥೆಯ ಮುಖ್ಯಸ್ಥ ಮುಕುಂದ್ ಕಾಮತ್ ಪ್ರತಿಕ್ರಿಯಿಸಿ, ಪಬ್ಬಾಸ್‌ನಲ್ಲಿ ಸಿಗುವ "ಗಡ್‌ಬಡ್" ಐಸ್‌ಕ್ರೀಮ್‌ಗೆ ಟೇಸ್ಟ್ ಅಟ್ಲಾಸ್‌ನಲ್ಲಿ ವಿಶ್ವದ 100 ಐಸ್ ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನ ಸಿಕ್ಕಿರುವುದರಿಂದ ಬಹಳ ಸಂತೋಷವಾಗುತ್ತಿದೆ ಎಂದಿದ್ದಾರೆ ಅಂತಾ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಯಾಗಿದೆ.












Click it and Unblock the Notifications