ಕೇರಳ ಸಿಎಂ ಪಿಣರಾಯಿ ಕಾರ್ಯಕ್ರಮಕ್ಕೆ ಸಂಘಪರಿವಾರದ ವಿರೋಧ
ಫೆಬ್ರವರಿ 25 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ಆಯೋಜಿಸಿರುವ 'ಕರಾವಳಿ ಸೌಹಾರ್ದ ರ್ಯಾಲಿ ಹಾಗೂ ಬಹಿರಂಗ ಸಭೆ' ಗೆ ಸಂಘ ಪರಿವಾರ ವಿರೋಧ ವ್ಯಕ್ತಪಡಿಸಿದೆ.
ಮಂಗಳೂರು, ಫೆಬ್ರವರಿ 20: ಫೆಬ್ರವರಿ 25 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸಿರುವ 'ಕರಾವಳಿ ಸೌಹಾರ್ದ ರ್ಯಾಲಿ ಹಾಗೂ ಬಹಿರಂಗ ಸಭೆ' ಗೆ ಸಂಘ ಪರಿವಾರ ವಿರೋಧ ವ್ಯಕ್ತಪಡಿಸಿದೆ. ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಂ.ಬಿ ಪುರಾಣಿಕ್ ಹೇಳಿದ್ದಾರೆ.
ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರೊ.ಎಂ.ಬಿ.ಪುರಾಣಿಕ್, "ಪಿಣರಾಯಿ ವಿಜಯನ್ ಆಗಮನವನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಹರತಾಳ ಆಚರಿಸಲಾಗುವುದು' ಎಂದಿದ್ದಾರೆ.[ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಸಿದ ಹೆಣ್ಮಕ್ಕಳ ಸಂಖ್ಯೆ!]

"ಕೇರಳದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇಲ್ಲ, ಕಮ್ಯುನಿಸ್ಟ್ ತತ್ವ ವಿರೋಧಿಸುವವರ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಪಿಣರಾಯಿ ಅವರ ಊರಿನಲ್ಲೇ 16 ಕೊಲೆಗಳು ನಡೆದಿವೆ. ಆದ್ದರಿಂದ ಕೋಮು ಸೌಹಾರ್ದದ ವಿಚಾರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅವರು ಬರುವುದನ್ನು ನಾವು ವಿರೋಧಿಸುತ್ತೇವೆ," ಎಂದು ಪುರಾಣಿಕ್ ಹೇಳಿಕೆ ನೀಡಿದ್ದಾರೆ.[ಕಾಲಿಯಾ ರಫೀಕ್ ನ ಕೊಲ್ಲಿಸಿದ್ದು ನಾನೇ ಎಂದ ದುಬೈನಲ್ಲಿರುವ ಜಿಯಾ]












Click it and Unblock the Notifications